Site icon Vistara News

Jr. NTR : ಜೂ. ಎನ್‌ಟಿಆರ್‌ ಬ್ಯಾನರ್‌ಗೆ ಅಭಿಮಾನಿಗಳಿಂದ ಮೇಕೆ ರಕ್ತದ ಅಭಿಷೇಕ! 9 ಮಂದಿ ಅರೆಸ್ಟ್‌

#image_title

ಬೆಂಗಳೂರು: ಮೆಚ್ಚಿನ ನಟರ ಬ್ಯಾನರ್‌ಗೆ ಅಭಿಮಾನಿಗಳು ಹಾರ ಹಾಕುವುದನ್ನು ನೋಡಿರುತ್ತೀರಿ, ಹಾಲಿನ ಅಭಿಷೇಕ ಮಾಡುವುದನ್ನು ನೋಡಿರುತ್ತೀರಿ. ಆದರೆ ಕರ್ನಾಟಕದ ಕೆಜಿಎಫ್‌ ಬಳಿಯ ರಾಬರ್ಟ್‌ ಸನ್‌ಪೇಟೆಯಲ್ಲಿ ಅಭಿಮಾನಿಗಳು ಜೂ.ಎನ್‌ಟಿಆರ್‌ (Jr. NTR) ಬ್ಯಾನರ್‌ಗೆ ಮೇಕೆ ರಕ್ತದಿಂದಲೇ ಅಭಿಷೇಕ ಮಾಡಿದ್ದಾರೆ. ಈ ಸಂಬಂಧ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.

ಜೂ. ಎನ್‌ಟಿಆರ್‌ ಅವರು ಈ ತಿಂಗಳ 20ರಂದು ತಮ್ಮ 40ನೇ ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಈ ಬರ್ತ್‌ಡೇ ಅನ್ನು ಜೋರಾಗಿಯೇ ಆಚರಿಸಿದ್ದಾರೆ. ಅದೇ ಹಿನ್ನೆಲೆ ರಾಬರ್ಟ್‌ಸನ್‌ಪೇಟೆಯಲ್ಲಿ ಒಂದಿಷ್ಟು ಅಭಿಮಾನಿಗಳು ಎರಡು ಮೇಕೆಗಳನ್ನು ತೆಗೆದುಕೊಂಡು ಶ್ರೀ ಕೃಷ್ಣ ಮತ್ತು ಶ್ರೀ ವೆಂಕಟ ಥಿಯೇಟರ್‌ ಬಳಿ ತೆರಳಿದ್ದಾರೆ. ಅಲ್ಲಿ ಥಿಯೇಟರ್‌ ಎದುರು ಹಾಕಲಾಗಿದ್ದ ಜೂ.ಎನ್‌ಟಿಆರ್‌ ಬ್ಯಾನರ್‌ ಮುಂದೆ ಮೇಕೆಗಳನ್ನು ಕಡಿದು ಅದರ ರಕ್ತವನ್ನು ಬ್ಯಾನರ್‌ಗೆ ಹಾಕಿದ್ದಾರೆ. ನಂತರ ಅಲ್ಲಿಂದ ಮೇಕೆ ಮಾಂಸವನ್ನು ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Viral Video : ಜಾಲಿ ರೈಡ್‌ ಮೂಡ್‌ನಲ್ಲಿ ಜೂ. ಎನ್‌ಟಿಆರ್‌, ರಾಮ್‌ಚರಣ್‌! ವಿಡಿಯೊ ವೈರಲ್‌
ಈ ರೀತಿ ಮಾಡಿರುವ ಅಭಿಮಾನಿಗಳನ್ನು ಪಿ. ಶಿವನಾಗ ರಾಜು, ಕೆ. ಸಾಯಿ, ಜಿ. ಸಾಯಿ, ಡಿ. ನಾಗಭೂಷಣಂ, ವಿ. ಸಾಯಿ, ಪಿ. ನಾಗೇಶ್ವರ ರಾವ್‌, ವೈ. ಧರಣಿ, ಪಿ. ಶಿವ ಮತ್ತು ಬಿ. ಅನಿಲ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಆರ್‌ಆರ್‌ಆರ್‌ ಯಶಸ್ಸಿನ ಗುಂಗಿನಲ್ಲಿರುವ ನಟ ಜೂ.ಎನ್‌ಟಿಆರ್‌ ಅವರು ಸದ್ಯದಲ್ಲೇ ಬಾಲಿವುಡ್‌ನಲ್ಲೂ ನಟಿಸಲಿದ್ದಾರೆ ಎನ್ನುವ ವರದಿಯಿದೆ. ಯಶ್‌ ರಾಜ್‌ ಫಿಲಂ ಅವರ ವಾರ್‌ 2 ಸಿನಿಮಾದಲ್ಲಿ ಅವರು ನಟಿಸುವ ಸಾಧ್ಯತೆಯಿದೆ. ಅಯನ್‌ ಮುಖರ್ಜಿ ನಿರ್ದೇಶನದ ಈ ಸಿನಿಮಾದಲ್ಲಿ ನಟ ಹೃತಿಕ್‌ ರೋಷನ್‌ ಅವರ ಜತೆಯಲ್ಲಿ ಜೂ.ಎನ್‌ಟಿಆರ್‌ ನಟಿಸಲಿದ್ದಾರೆ ಎನ್ನಲಾಗಿದೆ. ಜೂ.ಎನ್‌ಟಿಆರ್‌ ಅವರ ಬರ್ತ್‌ಡೇ ಅಂದು ಹೃತಿಕ್‌ ರೋಷನ್‌ ಅವರು ಅವರಿಗೆ ಶುಭ ಹಾರೈಸಿದ್ದು, ಯುದ್ಧಭೂಮಿಯಲ್ಲಿ ಭೇಟಿಯಾಗೋಣ ಎಂದಿದ್ದಾರೆ. ಇದು ಈ ಇಬ್ಬರು ನಟರು ಆಕ್ಷನ್‌ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುಳಿವು ಬಿಟ್ಟುಕೊಟ್ಟಿದೆ.

Exit mobile version