Site icon Vistara News

Chiranjeevi | ಮೆಗಾ ಸ್ಟಾರ್‌ ಹುಟ್ಟುಹಬ್ಬಕ್ಕೆ ಗಾಡ್‌ ಫಾದರ್‌ ಟೀಸರ್‌ ಔಟ್‌: ಫಿದಾ ಆದ ಫ್ಯಾನ್ಸ್!

Chiranjeevi

ಬೆಂಗಳೂರು: ಮೆಗಾಸ್ಟಾರ್‌ ಚಿರಂಜೀವಿ (Chiranjeevi) ಅವರಿಗೆ ಆಗಸ್ಟ್‌ 22 ಹುಟ್ಟುಹಬ್ಬದ ಸಂಭ್ರಮ. ಈ ನಿಮಿತ್ತ ಹಲವಾರು ಪೋಸ್ಟರ್‌ ಹಾಗೂ ಟೀಸರ್‌ ಬಿಡುಗಡೆಗೊಂಡಿದೆ. ಇದೀಗ ಗಾಡ್‌ಫಾದರ್‌ ಸಿನಿಮಾ ಟೀಸರ್‌ ಬಿಡುಗಡೆಗೊಂಡಿದೆ. ಈ ಸಿನಿಮಾ ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಲೂಸಿಫರ್ ಸಿನಿಮಾದ ರಿಮೇಕ್ ಆಗಿದೆ.

ಮಲಯಾಳಂನಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಮೆಗಾಸ್ಟಾರ್ ನಿಭಾಯಿಸಿದ್ದು, ಚಿತ್ರದ ಟೀಸರ್ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಈಗಾಗಲೇ ೮.೭ ಮಿಲಿಯನ್‌ ಮಂದಿ ವೀಕ್ಷಿಸಿದ್ದಾರೆ.

ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೋಹನ್‌ ರಾಜಾ ನಿರ್ದೇಶನದಲ್ಲಿ ಮೂಡಿ ಬಂದಿದೆ. ನೀರವ್‌ ಶಾ ಛಾಯಾಗ್ರಹಣವಿದ್ದು, ಥಮನ್‌ ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ | Mega 154 : ಆಚಾರ್ಯ ಬಳಿಕ ಮೆಗಾ ಸ್ಟಾರ್‌ ಮತ್ತೊಂದು ಮೆಗಾ ಮೂವಿ

ಈ ಟೀಸರ್‌ ಅನ್ನು ಹಿಂದಿ ಮತ್ತು ತೆಲುಗುವಿನ ವರ್ಷನ್‌ನಲ್ಲಿ ಬಿಡುಗಡೆಗೊಂಡಿದೆ. 67 ವರ್ಷದ ಚಿರಂಜೀವಿ ಅವರು ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಗಾಡ್‌ಫಾದರ್‌ ಸಿನಿಮಾ ವಿಜಯದಶಮಿ ಪ್ರಯುಕ್ತ ಅಕ್ಟೋಬರ್‌ 5ರಂದು ಬಿಡುಗಡೆಗೊಳ್ಳುತ್ತಿದೆ. ಚಿರಂಜೀವಿ ಅವರು ʻʻಬೋಲಾ ಶಂಕರ್‌ʼʼ ಚಿತ್ರದಲ್ಲಿಯೂ ನಟಿಸುತ್ತಿದ್ದು, 2023ಋ ಏಪ್ರಿಲ್‌ 14ರಂದು ಬಿಡುಗಡೆಗೊಳ್ಳುತ್ತಿದೆ.

ಇದನ್ನೂ ಓದಿ | GodFather | ಒಂದೇ ಫ್ರೇಂನಲ್ಲಿ ಇಬ್ಬರು ಸೂಪರ್‌ ಸ್ಟಾರ್‌ಗಳ ಡ್ಯಾನ್ಸ್? ಫೋಟೊ ವೈರಲ್‌

Exit mobile version