Site icon Vistara News

GodFather | ಒಂದೇ ಫ್ರೇಂನಲ್ಲಿ ಇಬ್ಬರು ಸೂಪರ್‌ ಸ್ಟಾರ್‌ಗಳ ಡ್ಯಾನ್ಸ್? ಫೋಟೊ ವೈರಲ್‌

GodFather

ಬೆಂಗಳೂರು: ತೆಲುಗು ಚಿತ್ರ ಗಾಡ್‌ಫಾದರ್‌ನಲ್ಲಿ (GodFather) ಬಾಲಿವುಡ್ ಸ್ಟಾರ್‌ ಸಲ್ಮಾನ್ ಖಾನ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಗಾಡ್‌ಫಾದರ್ ಸಿನಿಮಾದಲ್ಲಿ ಇಬ್ಬರೂ ಒಂದೇ ಫ್ರೇಮ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಚಿರಂಜೀವಿ ಅವರು ಇಬ್ಬರ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸಲ್ಲು ಜತೆ ಹೆಜ್ಜೆ ಹಾಕಲು ರೆಡಿ ಎಂದು ಬರೆದುಕೊಂಡಿದ್ದಾರೆ. ಈ ಡ್ಯಾನ್ಸ್‌ಗೆ ಪ್ರಭುದೇವ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂದು ನಟ ಚಿರಂಜೀವಿ ಅವರು ಬಹಿರಂಗಪಡಿಸಿದ್ದಾರೆ.

ಮೋಹನ್‌ ರಾಜ್‌ ನಿರ್ದೇಶನದ ಈ ಚಿತ್ರ ಮೋಹನ್‌ಲಾಲ್‌ ಅವರ ನಟನೆಯ ಮಲಯಾಳಂ ಲೂಸಿಫರ್ ಚಿತ್ರದ ತೆಲುಗು ರಿಮೇಕ್ ಆಗಿದೆ. ಇದನ್ನು ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ | Laal Singh Chaddha | ನಟ ಚಿರಂಜೀವಿ ಮನೆಯಲ್ಲಿ ಸ್ಪೆಷಲ್‌ ಶೋ: ಕಣ್ಣೀರಿಟ್ಟ ಆಮಿರ್‌ ಖಾನ್

ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ಸತ್ಯದೇವ್ ಕಾಂಚರಣ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಎಸ್.ಎಸ್. ಥಾಮನ್ ಸಂಗೀತ ನೀಡಿದ್ದಾರೆ. ಈ ಫೋಟೊ ನೋಡಿರುವ ಅಭಿಮಾನಿಗಳಿಗೆ ಸಿನಿಮಾದ ಬಗೆಗಿನ ನಿರೀಕ್ಷೆ ಡಬಲ್ ಆಗಿದೆ.

ಸಲ್ಮಾನ್ ಪ್ರಸ್ತುತ ಶೆಹನಾಜ್ ಗಿಲ್, ಪೂಜಾ ಹೆಗ್ಡೆ ಮತ್ತು ಜಸ್ಸಿ ಗಿಲ್ ಅವರೊಂದಿಗೆ ಕಭಿ ಈದ್ ಕಭಿ ದೀಪಾವಳಿ ಚಿತ್ರೀಕರಣದಲ್ಲಿದ್ದಾರೆ. ಇದರ ಜತೆಗೆ ಕತ್ರೀನಾ ಕೈಫ್ ಜತೆ ಟೈಗರ್ 2 ಸಿನಿಮಾ ಕೂಡ ಇದೆ. ವರ್ಷದ ಅಂತ್ಯದ ವೇಳೆಗೆ ಸಲ್ಮಾನ್ ಖಾನ್ ನೋ ಎಂಟ್ರಿ 2 ಚಿತ್ರೀಕರಣವನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ಇದನ್ನೂ ಓದಿ | Laal Singh Chaddha | ನಟ ಚಿರಂಜೀವಿ ಮನೆಯಲ್ಲಿ ಸ್ಪೆಷಲ್‌ ಶೋ: ಕಣ್ಣೀರಿಟ್ಟ ಆಮಿರ್‌ ಖಾನ್

Exit mobile version