Site icon Vistara News

Golden Globe Awards 2024: ʻಓಪನ್‌ಹೈಮರ್‌ʼ, ʻಪೂವರ್‌ ಥಿಂಗ್ಸ್‌ʼಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗರಿ!

Oscar Nominations 2024, Oppenheimer, Barbie are in lead

ಬೆಂಗಳೂರು: ಚಲನಚಿತ್ರ ಮತ್ತು ದೂರದರ್ಶನ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಕಲಾವಿದರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿ ಗೋಲ್ಡನ್ ಗ್ಲೋಬ್ಸ್‌ (Golden Globe Awards 2024). ಇದು 1944ರಿಂದಲೂ ನಡೆದುಕೊಂಡು ಬಂದಿರುವ ವಾರ್ಷಿಕ ಪ್ರಶಸ್ತಿ ಸಮಾರಂಭ. 2024ರ 81ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ʻಓಪನ್‌ಹೈಮರ್‌ʼ ಸಿನಿಮಾ, ಹಾಗೂ ʻಪೂವರ್‌ ಥಿಂಗ್ಸ್‌ʼ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ʻಓಪನ್‌ಹೈಮರ್‌ʼ ಸಿನಿಮಾದ ರಾಬರ್ಟ್ ಡೌನಿ ಜೂನಿಯರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಅದೇ ಚಿತ್ರಕ್ಕಾಗಿ ಕ್ರಿಸ್ಟೋಫರ್ ನೋಲನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಪ್ರಶಸ್ತಿ ಕಾರ್ಯಕ್ರಮ ಲಯನ್ಸ್‌ಗೇಟ್ ಇಂಡಿಯಾದಲ್ಲಿ ಪ್ರಸಾರವಾಗುತ್ತಿದೆ.

ಕ್ರಿಸ್ಟೋಫರ್‌ ನೊಲನ್‌ ನಿರ್ದೇಶನದ ಓಪನ್‌ಹೈಮರ್‌ ದೇಶದಲ್ಲಿ ಬಿಡುಗಡೆಗೊಂಡಿದ್ದಾಗ ಮಿಷನ್‌ ಇಂಪಾಸಿಬಲ್‌ 7ರ ದಾಖಲೆಯನ್ನು ಮುರಿದು ಹಾಕಿತ್ತು. ಓಪನ್‌ಹೈಮರ್‌ ಸಿನಿಮಾ (Oppenheimer Movie) ಭಾರತದಲ್ಲಿ ಬಿಡುಗಡೆಯಾದ ದಿನದಂದೇ 13 ಕೋಟಿ ರೂ.ಗೂ ಅಧಿಕ ಸಂಪಾದನೆಯನ್ನು ಮಾಡಿಕೊಂಡಿತ್ತು.

ಇದನ್ನೂ ಓದಿ: Golden Globes: ಗೋಲ್ಡನ್ ಗ್ಲೋಬ್ಸ್‌ ಪ್ರಶಸ್ತಿಯ ನಾಮಿನೇಷನ್‌; ʼಓಪನ್‌ಹೈಮರ್‌ʼ, ʼಬಾರ್ಬಿʼ ಮಧ್ಯೆ ಪೈಪೋಟಿ

ʻಓಪನ್‌ಹೈಮರ್‌ʼ ಸಿನಿಮಾವು ಪರಮಾಣು ಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಭೌತಶಾಸ್ತ್ರಜ್ಞ ಜೆ ರೆಬಾರ್ಟ್‌ ʻಓಪನ್‌ಹೈಮರ್‌ʼ ಅವರ ಜೀವನ ಚರಿತ್ರೆಯ ಕಥೆಯಾಗಿದೆ. ʻಓಪನ್‌ಹೈಮರ್‌ʼ ಅವರು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಆವಿಷ್ಕರಿಸಲು ಸಹಾಯ ಮಾಡಿದ್ದರು. ಅವರ ಜೀವನದ ಕುರಿತಾಗಿ ಈಗ ಬಿಡುಗಡೆಯಾಗಿರುವ ಚಿತ್ರದಲ್ಲಿ ತೋರಿಸಲಾಗಿದೆ.

ನಟ ಸಿಲಿಯನ್ ಮರ್ಫಿ ಅವರು ಈ ಸಿನಿಮಾದಲ್ಲಿ ಓಪನ್‌ಹೈಮರ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆಯೇ ನಟ ಮ್ಯಾಟ್‌ ಡ್ಯಾಮನ್‌ ಅವರು ಮ್ಯಾನ್‌ಹ್ಯಾಟನ್‌ ಪ್ರಾಜೆಕ್ಟ್‌ನ ಮುಖ್ಯಸ್ಥರಾಗಿದ್ದ ಜನರಲ್‌ ಲೆಸ್ಲಿ ಗ್ರೋವ್ಸ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎಮಿಲಿ ಬ್ಲಂಟ್‌ ಅವರು ಓಪನ್ಹೈಮರ್ ಅವರ ಪತ್ನಿ ಕ್ಯಾಥರೀನ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

Exit mobile version