Site icon Vistara News

Golden Star Ganesh: ಸೆಪ್ಟೆಂಬರ್‌ 28ರಂದು ಗೋಲ್ಡ್‌ನ್‌ ಸ್ಟಾರ್‌ ಗಣೇಶ್‌‌ ಅಭಿನಯದ ʻಬಾನದಾರಿಯಲಿʼ ಅದ್ಧೂರಿ ತೆರೆಗೆ!

baanadariyalli cinema Poster

ಬೆಂಗಳೂರು: ಗೋಲ್ಡ್‌ನ್‌ ಸ್ಟಾರ್‌ ಗಣೇಶ್‌ (Golden Star Ganesh) ಮುಖ್ಯಭೂಮಿಕೆಯ ʻಬಾನದಾರಿಯಲ್ಲಿʼ ಸಿನಿಮಾದ ಟ್ರೈಲರ್‌ (baanadariyalli trailer)ಇತ್ತೀಚೆಗೆ ಬಿಡುಗಡೆಗೊಂಡಿತ್ತು. ಟ್ರೈಲರ್‌ಗೆ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಈ ಸಿನಿಮಾ ಇದೇ ಸೆಪ್ಟೆಂಬರ್‌ 28ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ಪೋಸ್ಟ್‌ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿ ರುಕ್ಮಿಣಿ ವಸಂತ್‌ (rukmini vasanth) ಹಾಗೂ ರೀಷ್ಮಾ ನಾಣಯ್ಯ (reshma nanaiah) ನಟಿಯರಾಗಿ ಮಿಂಚಿದ್ದಾರೆ. ನಟಿ ರೀಷ್ಮಾ ನಾಣಯ್ಯ ಈ ಸಿನಿಮಾದಲ್ಲಿ ಕೊಂಚ ಬೋಲ್ಡ್‌ ಆಗಿ ಕ್ಯೂಟ್‌ ಆಗಿ ಕಂಡಿದ್ದಾರೆ. ಟ್ರೈಲರ್‌ ನೋಡುವಾಗ ಪ್ರೀತಿಸದವಳು ದೂರುವಾಗುವ ಸನ್ನಿವೇಶಗಳು ಇವೆ.

ಗಣೇಶ್‌ ಅವರ ಸಿನಿಮಾದಲ್ಲಿ ಹಾಸ್ಯ, ತರಲೆ, ಸಂತೋಷ ಇರುವುದು ಮಾಮೂಲು. ಟ್ರೈಲರ್‌ ನೋಡುವಾಗ ಈ ಎಲ್ಲ ಸನ್ನಿವೇಶಗಳು ಇವೆ. ಕೀನ್ಯಾದಲ್ಲಿ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರ ಪ್ರೀತಂ ಪಾತ್ರದಲ್ಲಿ ನಟಿಸಿದ್ದು ರುಕ್ಮಿಣಿ ಸ್ವಿಮ್ಮಿಂಗ್ ಕೋಚ್ ಲೀಲಾ ಆಗಿ ಮಿಂಚಿದ್ದಾರೆ. ಗಣೇಶ್‌- ಪ್ರೀತಂ ಕಾಂಬಿನೇಷನ್‌ನಲ್ಲಿ ಈಗಾಗಲೇ 3 ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿವೆ. ಈ ಜೋಡಿಯ 4ನೇ ಸಿನಿಮಾ ‘ಬಾನ ದಾರಿಯಲ್ಲಿ’. ಸದ್ಯ ರಿಲೀಸ್ ಆಗಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರುಕ್ಮಿಣಿ ವಸಂತ್ ಅಭಿನಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ‘ಬಾನ ದಾರಿಯಲ್ಲಿ’ ಚಿತ್ರದಲ್ಲೂ ಅಂಥದ್ದೇ ಪರ್ಫಾರ್ಮನ್ಸ್ ನಿರೀಕ್ಷಿಸುತ್ತಿದ್ದಾರೆ ಫ್ಯಾನ್ಸ್‌.

ಇದನ್ನೂ ಓದಿ: Golden Star Ganesh: ಗೋಲ್ಡ್‌ನ್‌ ಸ್ಟಾರ್‌ ಗಣೇಶ್‌ ʻಬಾನ ದಾರಿಯಲ್ಲಿʼ ಭಾವುಕ ಪಯಣ!

ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಮೂಲಕ ಎಲ್ಲರ ಗಮನಸೆಳೆದ ನಟಿ ರೀಷ್ಮಾ ನಾಣಯ್ಯ. ‘ಏಕ್ ಲವ್ ಯಾ’ ತೆರೆಗೆ ಬರುವುದಕ್ಕೂ ಮುನ್ನವೇ ‘ರಾಣ’ ಸಿನಿಮಾದ ಶೂಟಿಂಗ್ ಮುಗಿಸಿದ್ದ ಅವರು ಬಾನದಾರಿಗೆ ಬಣ್ಣ ಹಚ್ಚಿದ್ದಾರೆ. ವನ್ಯಜೀವಿ ಛಾಯಾಗ್ರಾಹಕಿ ಕಾದಂಬರಿ ಪಾತ್ರದಲ್ಲಿ ರೀಷ್ಮಾ ನಟಿಸಿದ್ದಾರೆ. ಪ್ರೀತಾ ಜಯರಾಮನ್ ಅವರ ಕಥೆ ಮತ್ತು ಪ್ರೀತಂ ಗುಬ್ಬಿ ಅವರ ಚಿತ್ರಕಥೆ ಸಿನಿಮಾಕ್ಕಿದೆ. ವಿ ಹರಿಕೃಷ್ಣ ಸಂಗೀತ ನೀಡಿದರೆ, ಅಭಿಲಾಶ್ ಕಳತ್ತಿ ಛಾಯಾಗ್ರಹಣ ಮಾಡಿದ್ದಾರೆ.

Exit mobile version