Site icon Vistara News

​Golden Star Ganesh: ಜನುಮದಿನ ಸ್ಟೈಲ್​ ಆಗಿ ಪೊರಕೆ, ಬಕೆಟ್‌ ಹಿಡಿದು ಪೋಸ್‌ ಕೊಟ್ಟ ಗೋಲ್ಡನ್ ಸ್ಟಾರ್!

Golden Star Ganesh New movie Krishnam Pranaya Sakhi

ಬೆಂಗಳೂರು: ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್‌ (Golden Star Ganesh) ಅವರಿಗೆ ಜನುಮದಿನದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಇದೀಗ ಅವರ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. 43ನೇ ವಸಂತಕ್ಕೆ ಕಾಲಿಟ್ಟಿರುವ ಗಣೇಶ್ ಅವರ ಹೊಸ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ರಿಲೀಸ್ ಆಗಿದೆ. ಅದುವೇ ʻಕೃಷ್ಣಂ ಪ್ರಣಯ ಸಖಿ”. ಕನ್ನಡದ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ʻಲವ್ ಫೈಂಡ್ಸ್ ಇಟ್ಸ್ ವೇʼ ಎಂಬ ಅಡಿಬರಹ ಚಿತ್ರದ ಟೈಟಲ್‌ಗಿದೆ. ಕೈಯಲ್ಲಿ ನೆಲ ಒರೆಸುವ ಸ್ಟಿಕ್ ಹಾಗೂ ಪೊರಕೆ ಹಿಡಿದು ಸ್ಟೈಲಿಶ್ ಆಗಿ ನಿಂತಿರುವ ಗಣಿಯ ನ್ಯೂ ಲುಕ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ತುಂಬ ಸ್ಟೈಲಿಶ್​ ಆಗಿ ಗಣಿ ಡ್ರೆಸ್​ ಮಾಡಿಕೊಂಡಿದ್ದಾರೆ. ಹಿಂಬದಿಯಲ್ಲಿ ಐಷಾರಾಮಿ ಕಾರು ಇದೆ. ಆದರೆ ಅಲ್ಲೊಂದು ಟ್ವಿಸ್ಟ್​ ಕೂಡ ಇದೆ. ಭಾರಿ ಶ್ರೀಮಂತನಂತೆ ಕಾಣಿಸಿಕೊಂಡ ಗಣೇಶ್​ ಅವರು ಕೈಯಲ್ಲಿ ಪೊರಕೆ, ನೆಲ ಒರೆಸುವ ಸ್ಟಿಕ್​ ಹಾಗೂ ಬಕೆಟ್​ ಹಿಡಿದುಕೊಂಡಿದ್ದಾರೆ. ಹಣೆಗೆ ಟವೆಲ್​ ಕಟ್ಟಿಕೊಂಡಿದ್ದಾರೆ. ಈ ಪೋಸ್ಟರ್​ ನೋಡಿದ ಎಲ್ಲರಿಗೂ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಕಥೆ ಬಗ್ಗೆ ಕುತೂಹಲ ಮೂಡಿದೆ.

ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರು, ರಾಜಸ್ಥಾನ ಹಾಗೂ ಯುರೋಪ್‌ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: Golden Star Ganesh: ಹುಟ್ಟುಹಬ್ಬಕ್ಕೂ ಮುಂಚಿತವಾಗಿ ಗುಡ್‌ ನ್ಯೂಸ್‌ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್

ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು.

ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕಾ ನಾಯರ್ ನಟಿಸುತ್ತಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಮುಂತಾದ ಕಲಾವಿದರು “ಕೃಷ್ಣಂ ಪ್ರಣಯ ಸಖಿ” ಚಿತ್ರದಲ್ಲಿ ನಟಿಸಿದ್ದಾರೆ.

Exit mobile version