ಬೆಂಗಳೂರು: ಮಲಯಾಳಂ ಚಿತ್ರರಂಗದ ಮೊದಲ ಮಹಿಳಾ ನಾಯಕಿ ಪಿಕೆ ರೋಸಿ ಅವರ 120 ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಡೂಡಲ್ (Google Doodle) ಮೂಲಕ ಗೂಗಲ್ ಗೌರವ ಸಲ್ಲಿಕೆ ಮಾಡಿದೆ. ರೋಸಿ (PK Rosy) 1903 ರಲ್ಲಿ ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಮಲಯಾಳಂ ಚಿತ್ರರಂಗದಲ್ಲಿ ಮೊದಲ ಹೀರೋಯಿನ್ ಎನ್ನುವ ಖ್ಯಾತಿ ಅವರಿಗೆ ಸಲ್ಲಿಕೆ ಆಗುತ್ತದೆ. ರೋಸಿಯ ನಟನೆಯ ಉತ್ಸಾಹವು ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಯಿತು.
ಸಮಾಜದ ಅನೇಕ ವಿಭಾಗಗಳಲ್ಲಿ, ವಿಶೇಷವಾಗಿ ಮಹಿಳೆಯರಿಗೆ ಕಲೆಯಲ್ಲಿ ಅವಕಾಶಗಳು ಸಿಗುತ್ತಿರಲಿಲ್ಲ. ಆದರೆ, ರೋಸಿ ಅವರು ತಮ್ಮ ಪಾತ್ರದ ಮೂಲಕ ಅಡೆತಡೆಗಳನ್ನು ಮುರಿದರು. ಅವರ ಕಥೆ ಅನೇಕರಿಗೆ ಪ್ರೇರಣೆ ಮತ್ತು ಸ್ಫೂರ್ತಿ ಎಂದು ಗೂಗಲ್ ಹೇಳಿದೆ.
ಪಿಕೆ ರೋಸಿ ಅವರ ಮೂಲ ಹೆಸರು ರಾಜಮ್ಮ. ಸಿನಿಮಾಗಾಗಿ ಅವರು ತಮ್ಮ ಹೆಸರನ್ನು ರೋಸಿ ಎಂದು ಬದಲಾಯಿಸಿಕೊಂಡರು. ಚಿಕ್ಕ ವಯಸ್ಸಿನಲ್ಲೇ ರೋಸಿ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಮಲಯಾಳಂ ಚಲನಚಿತ್ರ ‘ವಿಗತಕುಮಾರನ್ (ದಿ ಲಾಸ್ಟ್ ಚೈಲ್ಡ್)’ ನಲ್ಲಿ ನಟಿಸಿದ ಮೊದಲ ಸಿನಿಮಾ. ತನ್ನ ಜೀವಿತಾವಧಿಯಲ್ಲಿ ಅವರು ಎಂದಿಗೂ ತನ್ನ ಕೆಲಸಕ್ಕೆ ಮನ್ನಣೆಯನ್ನು ಪಡೆಯದಿದ್ದರೂ, ಕ್ರಾಂತಿಯನ್ನು ಎಬ್ಬಿಸಿದ್ದರು. ಅವರ ಕಥೆ ಅನೇಕರಿಗೆ ಪ್ರೇರಣೆ ಮತ್ತು ಸ್ಫೂರ್ತಿಯನ್ನು ನೀಡುತ್ತದೆ.
ಇದನ್ನೂ ಓದಿ: Pranitha Subhash: ಮಾಲಿವುಡ್‌ಗೆ ಎಂಟ್ರಿ ಕೊಟ್ಟ `ಪೊರ್ಕಿ’ ಸಿನಿಮಾ ಖ್ಯಾತಿಯ ಪ್ರಣಿತಾ ಸುಭಾಷ್!
ಇದನ್ನೂ ಓದಿ: Tamanna Bhatia | ಡೇಟಿಂಗ್ ಸುದ್ದಿ ಬೆನ್ನಲೇ ಮಾಲಿವುಡ್‌ಗೆ ಎಂಟ್ರಿ ಕೊಟ್ಟ ಮಿಲ್ಕಿ ಬ್ಯೂಟಿ ತಮನ್ನಾ?
‘ವಿಗತಕುಮಾರನ್ (ದಿ ಲಾಸ್ಟ್ ಚೈಲ್ಡ್)’ ಜೆಸಿ ಡ್ಯಾನಿಯಲ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಈ ಚಿತ್ರದಲ್ಲಿ ರೋಸಿ ಅವರು ಸರೋಜಿನಿ ನಾಯರ್ ಆಗಿ ಕಾಣಿಸಿಕೊಂಡಿದ್ದರು. ದಲಿತ ಮಹಿಳೆ ನಾಯರ್ ಪಾತ್ರ ಮಾಡಿದ್ದಕ್ಕೆ ಆ ಸಮುದಾಯದವರು ಸಿಟ್ಟಿಗೆದ್ದಿದ್ದರು.