Site icon Vistara News

Altina Schinasi: ಕಿರು ಸಾಕ್ಷ್ಯಚಿತ್ರ ನಿರ್ಮಾಪಕಿ, `ಕ್ಯಾಟ್‌ ಐ ಕನ್ನಡಕ’ ಕಂಡು ಹಿಡಿದ ಆಲ್ಟಿನಾಗೆ ಗೂಗಲ್ ಡೂಡಲ್ ಗೌರವ!

Altina Schinasi

ಆಲ್ಟಿನಾ ಚಿನಾಸಿಗೆ (Altina Schinasi) ಆಗಸ್ಟ್ 4ರಂದು 116ನೇ ಜನ್ಮದಿನ. ಅಮೆರಿಕದ ಡಿಸೈನರ್, ಕಿರು ಸಾಕ್ಷ್ಯಚಿತ್ರ ನಿರ್ಮಾಪಕಿಗೆ ಈ ವಿಶೇಷ ದಿನದಂದು ಗೂಗಲ್​ ಕಡೆಯಿಂದ ಅವರಿಗೆ ಗೌರವ ಸಲ್ಲಿಕೆ ಆಗಿದೆ. ಗಮನಾರ್ಹವಾಗಿ, 1940ರ ದಶಕದಲ್ಲಿ ಐಕಾನಿಕ್ ಹಾರ್ಲೆಕ್ವಿನ್ ಕ್ಯಾಟ್‌ ಐ ಕನ್ನಡಕವನ್ನು ವಿನ್ಯಾಸಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ‘ಜಾರ್ಜ್ ಗ್ರೋಸ್ಜ್ ಇಂಟರ್​ಗಂಮ್’ (George Grosz’ Interregnum) ಹೆಸರಿನ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದರು. ಈ ಕಿರುಚಿತ್ರ 1960ರಲ್ಲಿ ರಿಲೀಸ್ ಆಯಿತು. ಇದು ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ವೆನಿಸ್ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಕಿರುಸಾಕ್ಷ್ಯ ಚಿತ್ರವನ್ನು ಅಕಾಡೆಮಿಯವರು ಸಂರಕ್ಷಿಸಿ ಇಟ್ಟಿದ್ದಾರೆ.

ನ್ಯೂಯಾರ್ಕ್‌ನ ಆರ್ಟ್ ಸ್ಟೂಡೆಂಟ್ಸ್ ಲೀಗ್‌ನಲ್ಲಿ ಹೆಸರಾಂತ ಕಲಾವಿದರಾದ ಹ್ಯಾನ್ಸ್ ಹಾಫ್‌ಮನ್ ಮತ್ತು ಮೋರಿಸ್ ಕಾಂಟರ್ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದರು. ಅಮೆರಿಕನ್ ಕ್ರಾಫ್ಟ್ಸ್ ಕೌನ್ಸಿಲ್‌ನ ಚಿನ್ನದ ಪದಕವನ್ನು ಪಡೆದಿರುವ ಆಲ್ಟಿನಾ ಚಿನಾಸಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸೆರಾಮಿಕ್ಸ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್, ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ ಮತ್ತು ಸ್ಮಿತ್ಸೋನಿಯನ್ ಅಮೇರಿಕನ್ ಆರ್ಟ್ ಮ್ಯೂಸಿಯಂನಲ್ಲಿ ಅವರ ಕೆಲಸವನ್ನು ಇನ್ನೂ ಪ್ರದರ್ಶಿಸಲಾಗಿದೆ.

ಮಹಿಳೆಯರಿಗೆ ಹೆಚ್ಚಿನ ಡಿಸೈನ್​ನ ಕನ್ನಡಕ ಇಲ್ಲ ಎಂಬುದು ಆಲ್ಟಿನಾ ಗಮನಿಸಿದರು. ಈ ಕಾರಣಕ್ಕೆ ಅವರು ಬೆಕ್ಕಿನ ಕಣ್ಣಿನ ಮಾದರಿಯ ಕನ್ನಡಕವನ್ನು ಕಂಡು ಹಿಡಿದರು. ಇಂದಿಗೂ ಈ ಕನ್ನಡಕ ಸಾಕಷ್ಟು ಖ್ಯಾತಿ ಪಡೆದುಕೊಂಡಿದೆ. ಇವರು ಅನೇಕ ಮಹಿಳೆಯರಿಗೆ ಸ್ಫೂರ್ತಿ ಆಗಿದ್ದಾರೆ. 1999ರಲ್ಲಿ ಆಗಸ್ಟ್ 19ರಂದು ಮೃತಪಟ್ಟರು. ಆಗ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ನಮ್ಮನ್ನು ಅಗಲಿದರೂ ಅವರು ಮಾಡಿದ ಕೆಲಸ ಹಾಗೆಯೇ ಇದೆ.

ಇದನ್ನೂ ಓದಿ: Google Doodle | ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲಿಟ್ ಜಾಧವ್‌ಗೆ ಗೂಗಲ್ ಡೂಡಲ್ ಗೌರವ!

1930 ಮತ್ತು 1940ರ ದಶಕದ ಹೊತ್ತಿಗೆ, ಕ್ಯಾಟ್‌ ಐ ಫ್ರೇಮ್‌ ಕನ್ನಡಕ ಅತ್ಯಂತ ಗ್ಲಾಮರ್‌ ಎಂದೆನಿಸಿಕೊಂಡಿತು. 116 ನೇ ಜನ್ಮದಿನದಂದು ಇಂದಿನ ಗೂಗಲ್ ಡೂಡಲ್ ಮಹಿಳಾ ಫ್ಯಾಷನ್ ಜಗತ್ತಿಗೆ ಅವರು ನೀಡಿದ ಕೊಡುಗೆಯನ್ನು ಈ ಮೂಲಕ ಆಚರಿಸುತ್ತಿದೆ.

Exit mobile version