Site icon Vistara News

Shahrukh Khan: ಪರ್ಸ್‌ನಾಲಿಟಿಯೇ ಇಲ್ಲ, ಅವನು ಹೇಗೆ ಹೀರೊ ಆದ? ಮುಹೂರ್ತಕ್ಕೆ ಶಾರುಖ್‌ಗೆ ಎಂಟ್ರಿ ಕೊಡದ ಸಿಬ್ಬಂದಿ!

Guard stopped Shah Rukh Khan from entering his film’s

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ (Shahrukh Khan) ʻಪಠಾಣ್‌ʼ ಸಿನಿಮಾದ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಹಾಗೇಯೇ ನಟ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಪಂಚದಾದ್ಯಂತ ಹೆಚ್ಚು ಗುರುತಿಸಬಹುದಾದ ಭಾರತೀಯ ನಟ ಶಾರುಖ್‌ಖಾನ್‌ ಅವರಿಗೆ ತಮ್ಮದೇ ಸಿನಿಮಾದ ಮುಹೂರ್ತದಲ್ಲಿ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ ಎಂದು ಸಿಮಿ ಗರೆವಾಲ್ ಅವರೊಂದಿಗಿನ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ʻʻಶಿಖರ್ (Shikhar) ಚಿತ್ರದ ಮುಹೂರ್ತಕ್ಕೆ ಪ್ರವೇಶಿಸಲು ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಮುಹೂರ್ತಕ್ಕಾಗಿ ದೆಹಲಿಯಲ್ಲಿದ್ದಾಗ ವ್ಯಕ್ತಿಯೊಬ್ಬರು ಸ್ಥಳಕ್ಕೆ ಪ್ರವೇಶಿಸದಂತೆ ತಡೆದರು. ಆ ವ್ಯಕ್ತಿಗೆ ನಾನು ನನ್ನ ಸ್ವಂತ ಸಿನಿಮಾ. ನಾನೇ ಆ ಚಿತ್ರದ ನಾಯಕ ಎಂದು ಹೇಳಿದರೂ ಪ್ರವೇಶ ನೀಡರಲಿಲ್ಲ. ಶಾರುಖ್ ಒಬ್ಬ ಚಲನಚಿತ್ರ ನಟ ಎಂದು ಆ ವ್ಯಕ್ತಿ ನಂಬಲಿಲ್ಲ. ತಾವು ತಾರೆಯರೆಂದು ಹೇಳಿಕೊಳ್ಳುವ ಅನೇಕರನ್ನು ನಾನು ನೋಡಿದ್ದೇನೆ ಎಂದು ಗುಟುರು ಹಾಕಿದರು ಎಂದ ಶಾರುಖ್ ನೆನಪಿಸಿಕೊಂಡಿದ್ದಾರೆ.

ʻʻಕೊನೆಗೆ ಆತನಲ್ಲಿ ನಾನು ಬೇಡಿಕೊಂಡೆ, ಎಲ್ಲರೂ ವೇದಿಕೆಯಲ್ಲಿ ನನಗಾಗಿ ಕಾಯುತ್ತಿದ್ದಾರೆ. ದಯವಿಟ್ಟು ನನ್ನನ್ನು ಹೋಗಲು ಬಿಡಿ ಎಂದು ಕೇಳಿದೆ. ಅಂತಿಮವಾಗಿ, ಚಿತ್ರದ ತಂಡದ ಇನ್ನೊಬ್ಬ ಸಿಬ್ಬಂದಿಯನ್ನು ಕರೆಸಲಾಯಿತು, ಅವರು ಶಾರುಖ್ ನಿಜವಾಗಿಯೂ ಪ್ರಮುಖ ನಾಯಕ ಎಂದು ಸಿಬ್ಬಂದಿಗೆ ತಿಳಿಸಿದರು. ಅವನಿಗೆ ಒಳ್ಳೆಯ ಪರ್ಸ್‌ನಾಲಿಟಿಯೇ ಇಲ್ಲ ಅವನು ಹೇಗೆ ಹೀರೊ ಆದ? ಎಂದು ಕೇಳಿದರು. ಎಂದು ಶಾರುಖ್‌ ನಡೆದ ಘಟನೆ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: Shahrukh Khan: ನಯನತಾರಾ-ವಿಘ್ನೇಶ್ ಶಿವನ್ ದಂಪತಿ ಅವಳಿ ಮಕ್ಕಳನ್ನು ಭೇಟಿ ಮಾಡಿದ ಶಾರುಖ್‌: ಜಮಾಯಿಸಿದ ಅಭಿಮಾನಿಗಳು

Shahrukh Khan

ಶಾರುಖ್ ಖಾನ್ ಮತ್ತು ಜಾಕಿ ಶ್ರಾಫ್ ಅವರೊಂದಿಗೆ ಶಿಖರ್ ಸಿನಿಮಾವನ್ನು ಘೋಷಿಸಲಾಗಿತ್ತು. ಆದರೆ ಅಂತಿಮವಾಗಿ ಯೋಜನೆಯನ್ನು ಕೈಬಿಡಲಾಯಿತು. ಸುಭಾಷ್ ಘಾಯ್ ಚಿತ್ರವನ್ನು ನಿರ್ದೇಶಿಸಬೇಕಾಗಿತ್ತು. ಆದರೆ ಬಜೆಟ್ ಸಮಸ್ಯೆಗಳಿಂದ ಅದು ಸ್ಥಗಿತಗೊಂಡ ನಂತರ ಅವರು ಶಾರುಖ್ ಖಾನ್ ಅವರೊಂದಿಗೆ ಪರ್ದೇಸ್ ಸಿನಿಮಾ ಮಾಡಿದರು. ಸುಭಾಷ್ ಘಾಯ್ 2017 ರಲ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿ ʻʻಪರ್ದೇಸ್ ಮೊದಲು ನಾನು ಶಿಖರ್ ಚಿತ್ರವನ್ನು ಮಾಡಬೇಕೆಂದಿದ್ದೆ. ಅದರಲ್ಲಿ ಜಾಕಿ ಶ್ರಾಫ್ ಮತ್ತು ಶಾರುಖ್ ನಟಿಸಬೇಕು ಎಂಬುದಾಗಿತ್ತು. ಇದು ಯುದ್ಧದ ಹಿನ್ನೆಲೆಯ ಪ್ರೇಮಕಥೆಯಾಗಿತ್ತು. ಮುಹೂರ್ತವನ್ನು ಕೂಡ ಮಾಡಿದ್ದೇವೆ ಮತ್ತು ಎ ಆರ್ ರೆಹಮಾನ್ ಸಹಿ ಮಾಡಿದ ನಂತರ ಒಂದು ಹಾಡನ್ನು ರೆಕಾರ್ಡ್ ಕೂಡ ಮಾಡಲಾಗಿತ್ತು.ʼʼ ಎಂದಿದ್ದರು.

Exit mobile version