Site icon Vistara News

Kannada New Movie: ಗಿಲ್ಟ್ ಚಿತ್ರದ ಟೀಸರ್ ಔಟ್, ವ್ಯಾಪಕ ಮೆಚ್ಚುಗೆ

scene from guilt kannada movie

ಬೆಂಗಳೂರು, ಕರ್ನಾಟಕ: ಕನ್ನಡ ಚಿತ್ರರಂಗ (Kannada New Movie) ಅನೇಕ ಹೊಸಬರಿಗೆ ಮಣೆ ಹಾಕುತ್ತಲೇ ಇದೆ. ಆಗಾಗ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಇದೀಗ ಅದೇ ಸಾಲಿನಲ್ಲಿ ಗಿಲ್ಟ್ (Guilt) ಎಂಬ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ಟೀಸರ್ ಈಗ ಹೊರ ಬಂದಿದೆ. ಗಿಲ್ಟ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಚರಿತ್ ಮತ್ತು ಜಾನಕಿ ನಾರಾಯಣ್ ಅವರು ಅಭಿನಯಿಸಿದ್ದಾರೆ. ಗಿಲ್ಟ್ ಕನ್ನಡ ಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶನ ಡಿ ರವಿಕುಮಾರ್ ಅವರದ್ದು. ಈಗ ಬಿಡುಗಡೆಯಾಗಿರುವ ಟೀಸರ್ ತನ್ನ ವಿಶೇಷತೆಯಿಂದಾಗಿ ಸಿನಿಮಾಸಕ್ತರ ಗಮನ ಸೆಳೆಯುತ್ತಿದೆ.

Kannada New Movie: ಗಿಲ್ಟ್ ಚಿತ್ರದ ಟೀಸರ್

Exit mobile version