Site icon Vistara News

Gulshan Devaiah: ರಿಷಬ್ ಶೆಟ್ಟಿ ಕರೆದರೆ ಕನ್ನಡ ಸಿನಿಮಾ ಮಾಡಲು ರೆಡಿ ಎಂದ ಗುಲ್ಶನ್ ದೇವಯ್ಯ!

Gulshan Devaiah

ಬೆಂಗಳೂರು: ಬಾಲಿವುಡ್‌ ನಟ ಗುಲ್ಶನ್ ದೇವಯ್ಯ (Gulshan Devaiah) ಸದ್ಯ ಸಿನಿಮಾ ಕೆಲಸ ಹಾಗೂ ಸಿಂಗಲ್ ಲೈಫ್‌ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಗುಲ್ಶನ್ ದೇವಯ್ಯ ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಪ್ರತಿಷ್ಠಿತ NIFT ಸಂಸ್ಥೆಯಲ್ಲಿ ಪದವಿ ಮುಗಿಸಿದ್ದಾರೆ. ಪದವಿ ನಂತರ ಸುಮಾರು 10 ವರ್ಷಗಳ ಕಾಲ ಫ್ಯಾಷನ್ ಲೋಕದಲ್ಲಿ ಕೆಲಸ ಮಾಡಿದ್ದಾರೆ. ಇಂಗ್ಲಿಷ್‌ ಥಿಯೇಟರ್‌ ಸೇರಿಕೊಂಡು ಸಣ್ಣ ಪುಟ್ಟ ಮಾಡುವ ಮೂಲಕ ನಟನೆ ಕಲಿತು ಮುಂಬೈಗೆ ಪ್ರಯಾಣ ಮಾಡಿ ಸಿನಿಮಾ ಅವಕಾಶ ಪಡೆಯುತ್ತಾರೆ. ಇದೀಗ ನಟ ʻಮುಂದೊಂದು ದಿನ ಕನ್ನಡ ಸಿನಿಮಾ ಮಾಡಲು ಇಷ್ಟ ಪಡುತ್ತೇನೆʼ ಎಂದು ಹೇಳಿದ್ದಾರೆ.

ನಟ ಗುಲ್ಶನ್ ದೇವಯ್ಯ ನಟನೆ ಮೂಲಕ ಆಗಾಗ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಲೇ ಇರುತ್ತಾರೆ. ಸಂದರ್ಶನವೊಂದರಲ್ಲಿ ಇವರು “ಸಕ್ಸೆಸ್‌ ಮತ್ತು ಫೇಲ್ಯೂರ್‌ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ” ಎಂದು ಹೇಳಿದ್ದಾರೆ. “ಈ ಮೊದಲು ನಿರ್ದೇಶಕ ರಿಷಬ್ ಶೆಟ್ಟಿ ಅವರು ಭೇಟಿ ಮಾಡಿ ರುದ್ರಪ್ರಯಾಗ ಎಂಬ ಸಿನಿಮಾ ನನಗೆ ನೀಡಿದರು. ಎಲ್ಲ ಒಂದು ಹಂತಕ್ಕೆ ಬರುವಾಗ ಕೊರೊನಾದಿಂದಾಗಿ ಆ ಪ್ರಾಜೆಕ್ಟ್‌ ಅಲ್ಲಿಯೇ ಸ್ಟಾಪ್‌ ಆಯಿತು. ಮತ್ತೊಮ್ಮೆ ಅವಕಾಶ ಬಂದರೆ ಅಥವಾ ರಿಷಬ್ ಶೆಟ್ಟಿ ನನ್ನನ್ನು ಸಂಪರ್ಕಿಸಿದರೆ, ನಾನು ಕನ್ನಡ ಚಿತ್ರ ಮಾಡಲು ಇಷ್ಟಪಡುತ್ತೇನೆ, ”ಎಂದು ಅವರು ಹೇಳಿಕೊಂಡಿದ್ದಾರೆ. ʻʻಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಂಗಭೂಮಿ ಸಂಸ್ಕೃತಿ ಇದೆ. ಅಷ್ಟೇ ಅಲ್ಲ, ಪ್ರೇಕ್ಷಕರು ಕೂಡ ವಿಕಸನಗೊಂಡಿದ್ದಾರೆʼʼ ಎಂದಿದ್ದಾರೆ. ರಾಜ್ ಮತ್ತು ಡಿಕೆ ಅವರ ಕ್ರೈಮ್ ಕೇಪರ್‌ನಲ್ಲಿ ಶೀಘ್ರದಲ್ಲೇ ಇವರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Taapsee Pannu: 6 ಪ್ಯಾಕ್‌ನಲ್ಲಿ ತಾಪ್ಸಿ ಪನ್ನು: ಟೈಗರ್ ಶ್ರಾಫ್‌ಗೆ ಕಾಂಪಿಟೇಶನ್‌ ಕೊಡುತ್ತಿದ್ದಾರೆ ಅಂದ್ರು ನೆಟ್ಟಿಗರು!

ಗುಲ್ಶನ್ ʻಹಂಟರ್ʼ ನನ್ನ ಫೇವರೇಟ್‌ ಎಂದಿದ್ದ ರಿಷಬ್‌

ʻಇದಕ್ಕೂ ಮುಂಚೆ ರಿಷಬ್‌ ಹಾಗೂ ಗುಲ್ಶನ್ ಭೇಟಿಯಾದಾಗ ರಿಷಬ್‌ ʻನಾನು ಗುಲ್ಶನ್ ಅವರ ಎಲ್ಲಾ ಚಲನಚಿತ್ರಗಳನ್ನು ನೋಡಿದ್ದೇನೆ. ನನ್ನ ಮೆಚ್ಚಿನವುಗಳಲ್ಲಿ ಒಂದು ಹಂಟರ್” ಎಂದು ರಿಷಬ್ ಹೇಳಿದ್ದರು. ರಿಷಬ್ ಜತೆ ರಂಗಕರ್ಮಿ ಪಿಡಿ ಸತೀಶ್ ಚಂದ್ರ ಕೂಡ ಇದ್ದರು.

2012ರಲ್ಲಿ ಗ್ರೀಸ್‌ನ ನಟಿ ಕಲ್ಲಿರೊಯ್ ಟಿಜಿಯಾಫೆಟಾ ಜತೆ ಗುಲ್ಶನ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಣ್ಣ ಪುಟ್ಟ ಕಾರಣಗಳಿಂದ 2020ರಲ್ಲಿ ಅವರಿಂದ ವಿಚ್ಛೇದನ ಪಡೆದರು. ಸುಮಾರು 20 ಹಿಂದಿ ಸಿನಿಮಾಗಳಲ್ಲಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ. 6 ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ‘ಮರ್ದ್ ಕೋ ದರ್ದ್ ನಹಿ ಹೋತಾ’ ಚಿತ್ರಕ್ಕೆ ಸಪೋರ್ಟ್‌ ರೋಲ್ ಸ್ಕ್ರೀನ್ ಅವಾರ್ಡ್ಸ್‌ ಪಡೆದುಕೊಂಡಿದ್ದಾರೆ.

Exit mobile version