ಬೆಂಗಳೂರು: ʻಗುಂಟೂರು ಖಾರಂʼ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಬುಧವಾರ (ಜ.17) ಭಾರಿ ಕುಸಿತ ಕಂಡಿದೆ. ಆದರೆ ಭಾರತದಲ್ಲಿ 100 ಕೋಟಿ ರೂ. ಗಡಿ ದಾಟಲು ಯಶಸ್ವಿಯಾಗಿದೆ. ವರದಿಯ ಪ್ರಕಾರ ಸಿನಿಮಾ ಆರನೇ ದಿನ ಸುಮಾರು 7 ಕೋಟಿ ರೂ. ಕಲೆಕ್ಷನ್ ಮಾಡಿದೆ. ನೆಗೆಟಿವ್ ಪ್ರತಿಕ್ರಿಯೆಯ ನಡುವೆಯೂ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ʻಗುಂಟೂರು ಖಾರಂʼ ಭಾರತದಲ್ಲಿ ಇದುವರೆಗೆ ಅಂದಾಜು 100.95 ಕೋಟಿ ರೂ. ಸಂಗ್ರಹಿಸಿದೆ ಎಂದು ವರದಿಯಾಗಿದೆ. ತ್ರಿವಿಕ್ರಮ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಮೂಲಕ ಮಹೇಶ್ ಬಾಬು ಮತ್ತು ಕನ್ನಡತಿ ಶ್ರೀಲೀಲಾ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಮೊದಲ ದಿನ (ಜನವರಿ 12) ಭಾರತದಲ್ಲಿ ಸುಮಾರು 50 ಕೋಟಿ ರೂ. ಕಲೆಕ್ಷನ್ ಮಾಡಿದ ʼಗುಂಟೂರು ಖಾರಂʼನ ಎರಡು ಮತ್ತು ಮೂರನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ ಕಂಡು ಬಂದಿತ್ತು. ಶನಿವಾರ ಚಿತ್ರ ಕಲೆಕ್ಟ್ ಮಾಡಿದ್ದು ಕೇವಲ 13.55 ಕೋಟಿ ರೂ. ಇನ್ನು ಭಾನುವಾರ 14.25 ಕೋಟಿ ರೂ. ಗಳಿಸಿದರೆ, ಸಂಕ್ರಾಂತಿ ಹಿನ್ನಲೆಯಲ್ಲಿ ಸೋಮವಾರ 14 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಕಥೆಯಲ್ಲಿ ಹೊಸತನವಿಲ್ಲ ಎನ್ನುವುದು ಬಹುತೇಕ ವೀಕ್ಷಕರ ಅಭಿಪ್ರಾಯ. ಅದಾಗ್ಯೂ ಮಹೇಶ್ ಬಾಬು ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿದೆ.
ಇದನ್ನೂ ಓದಿ: Mahesh Babu: ʻಗುಂಟೂರು ಖಾರಂʼನಲ್ಲಿ ಮಹೇಶ್ಬಾಬು ಸೇದಿದ್ದು ಆಯುರ್ವೇದ ಬೀಡಿ!ಅ
#MaheshBabu's #GunturKaaram ENTERS ₹200 cr club on its 5th day.
— VasU (@urstrulyRSRvasu) January 17, 2024
Day 1 – ₹ 94 cr
Day 2 – ₹ 33 cr
Day 3 – ₹ 37 cr
Day 4 – ₹ 21.14 cr
Day 5 – ₹20.13
Total – ₹ 205.27cr 🔥👑#SuperstarMaheshBabu's
5th Consecutive 100 crore share movie #SSMB'sSTARDOM!!! 💥🔥👑🔥 pic.twitter.com/SRywBJMHKJ
ʻಗುಂಟೂರು ಖಾರಂʼ ಸಿನಿಮಾದಲ್ಲಿ ಮಹೇಶ್ ಬಾಬು ಅವರ ಜತೆಯಲ್ಲಿ ಮೀನಾಕ್ಷಿ ಚೌಧರಿ ಮತ್ತು ಶ್ರೀಲೀಲಾ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲಿಗೆ ಪೂಜಾ ಹೆಗ್ಡೆ ಅವರನ್ನು ಈ ಸಿನಿಮಾದ ನಾಯಕ ನಟಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಿನಿಮಾದ ಸ್ಕ್ರಿಪ್ಟ್ನಲ್ಲಿ ಆಗಾಗ ಬದಲಾವಣೆ ಆಗುತ್ತಿದ್ದ ಕಾರಣಕ್ಕೆ ಪೂಜಾ ಹೆಗ್ಡೆ ಅವರು ಈ ಸಿನಿಮಾದಿಂದ ಹೊರನಡೆದರು.