ಬೆಂಗಳೂರು: ಜನವರಿ 6ರಂದು ಹೈದರಾಬಾದ್‌ನಲ್ಲಿ ನಿಗದಿಯಾಗಿದ್ದ ‘ಗುಂಟೂರು ಖಾರಂ’ (Guntur Kaaram) ಚಿತ್ರದ ಪ್ರಿ-ರಿಲೀಸ್ ಇವೆಂಟ್ ಕೆಲವು ಸಮಸ್ಯೆಗಳಿಂದ ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಮಹೇಶ್ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು ಮತ್ತು ಶ್ರೀಲೀಲಾ ಅಭಿನಯದ ‘ಗುಂಟೂರು ಖಾರಂ’ ಸಿನಿಮಾಗೆ ತ್ರಿವಿಕ್ರಮ್ ಶ್ರೀನಿವಾಸ್ ಅವರ ನಿರ್ದೇಶನವಿದೆ. ಇವೆಂಟ್ ಬಗ್ಗೆ ಮಾಹಿತಿ ಹಾಗೂ ಹೊಸ ದಿನಾಂಕ, ಸ್ಥಳದ ಕುರಿತು ಶೀಘ್ರದಲ್ಲೇ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಈ ಸುದ್ದಿಯನ್ನು ಚಿತ್ರದ ನಿರ್ಮಾಪಕರು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ʻಕೆಲವು ಸಮಸ್ಯೆಗಳಿಂದಾಗಿ, ನಾವು ಇಂದು ಪ್ರಿ-ರಿಲೀಸ್ ಇವೆಂಟ್ ಅನ್ನು ನಡೆಸುತ್ತಿಲ್ಲ. ಈ ಪ್ರಕಟಣೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಹೊಸ ದಿನಾಂಕ ಸ್ಥಳದೊಂದಿಗೆ ಇವೆಂಟ್ ಬಗ್ಗೆ ಆದಷ್ಟು ಬೇಗ ಹೊಸ ಅಪ್‌ಡೇಟ್ ಪ್ರಕಟಿಸಲಾಗುವುದುʼʼಎಂದು ಬರೆದುಕೊಂಡಿದ್ದಾರೆ.
ʼಗುಂಟೂರು ಖಾರಂʼ ಸಿನಿಮಾಗಾಗಿ ಬರೋಬ್ಬರಿ 78 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.ಮಹೇಶ್ ಬಾಬು ಅವರು ಕೊನೆಯದಾಗಿ ನಟಿಸಿದ ʼಸರ್ಕಾರು ವಾರಿ ಪಾಟʼ ಸಿನಿಮಾ ಕೂಡ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಅವರು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ತ್ರಿವಿಕ್ರಮ್ ಅವರು ನಿರ್ದೇಶನ ಮಾಡುತ್ತಿರುವ ʼಗುಂಟೂರು ಖಾರಂʼ ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೆ 78 ಕೋಟಿ ರೂ. ಸಂಭಾವನೆ ಕೇಳಿದರಂತೆ. ಅಂದ ಹಾಗೆ ಈ ಗುಂಟೂರು ಖಾರಂ ಸಿನಿಮಾವನ್ನು 200 ಕೋಟಿ ರೂ. ಬಜೆಟ್‌ನಲ್ಲಿ ತಯಾರಿಸಲಾಗುತ್ತಿದೆ.
ಇದನ್ನೂ ಓದಿ: Mahesh Babu: ʼಗುಂಟೂರು ಖಾರಂʼಗಾಗಿ 78 ಕೋಟಿ ರೂ. ಸಂಭಾವನೆ ಪಡೆದರಾ ಮಹೇಶ್ ಬಾಬು?
Despite our best efforts, due to unforeseen circumstances and issues with security permissions, we will not be conducting the highly awaited #GunturKaaram Pre-release event on 6th January 2024. We sincerely apologize for this announcement 💔
— Haarika & Hassine Creations (@haarikahassine) January 5, 2024
The new date for the event with the…
ಗುಂಟೂರು ಖಾರಂ ಸಿನಿಮಾದಲ್ಲಿ ಮಹೇಶ್ ಬಾಬು ಅವರ ಜತೆಯಲ್ಲಿ ಮೀನಾಕ್ಷಿ ಚೌಧರಿ ಮತ್ತು ಶ್ರೀಲೀಲಾ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲಿಗೆ ಪೂಜಾ ಹೆಗ್ಡೆ ಅವರನ್ನು ಈ ಸಿನಿಮಾದ ನಾಯಕ ನಟಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ಆಗಾಗ ಬದಲಾವಣೆ ಆಗುತ್ತಿದ್ದ ಕಾರಣಕ್ಕೆ ಪೂಜಾ ಹೆಗ್ಡೆ ಅವರು ಈ ಸಿನಿಮಾದಿಂದ ಹೊರನಡೆದರು. ನಂತರ ಅವರ ಬದಲಾಗಿ ಮೀನಾಕ್ಷಿ ಚೌಧರಿ ಅವರನ್ನು ಸಿನಿಮಾಕ್ಕೆ ಕರೆತರಲಾಗಿದೆ.ಮಹೇಶ್ ಬಾಬು ಅವರು ತನ್ನ ತಂದೆ ಶಿವ ರಾಮ ಕೃಷ್ಣ ಅವರ ಜನ್ಮ ದಿನೋತ್ಸವದಂದು ಸಿನಿಮಾದ ಪೋಸ್ಟರ್ ಹಾಗೂ ಸಣ್ಣದೊಂದು ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.