ಬೆಂಗಳೂರು : ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣಾ ಅಭಿನಯದ ʻಲವ್ ಮಾಕ್ಟೇಲ್ʼ (Gurtundha Seetakalam) ಸಿನಿಮಾ ತೆಲುಗಿಗೆ ರಿಮೇಕ್ ಆಗಿತ್ತು. ನಟಿ ತಮನ್ನಾ ಹಾಗೂ ಸತ್ಯದೇವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದರೆ ಇದೀಗ ಒಂದೇ ವಾರಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ಎತ್ತಂಗಡಿಯಾಗಿದೆ. ಕನ್ನಡ ನಿರ್ದೇಶಕ ನಾಗಶೇಖರ್ ತೆಲುಗಿನಲ್ಲಿ ನಿರ್ದೇಶನ ಮಾಡಿದ್ದರಿಂದ ಸಿನಿರಸಿಕರು ಭಾರಿ ನಿರೀಕ್ಷೆ ಇಟುಕೊಂಡಿದ್ದರು. ಇದೀಗ ವಿತರಕರು 1.61 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಕೆಲವರು ಸಿನಿಮಾ ನೋಡಲು ಸೀರಿಯಲ್ ತರ ಇದೆ ಎಂದಿದ್ದಾರೆ ಎನ್ನಲಾಗುತ್ತಿದೆ.
‘ಗುರ್ತುಂದಾ ಶೀತಾಕಾಲಂ’ (Gurtundha Seetakalam) ಹೆಸರಿನಲ್ಲಿ ‘ಲವ್ ಮಾಕ್ಟೇಲ್’ ಚಿತ್ರವನ್ನು ತೆಲುಗಿಗೆ ಕಟ್ಟಿಕೊಡಲಾಗಿತ್ತು. ಇದೀಗ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋಲುಂಡಿದೆ. ಸಿನಿಮಾ ಒಟ್ಟು ಗಳಿಸಿರುವುದು 39 ಲಕ್ಷ ಮಾತ್ರ ಎಂದು ಟಾಲಿವುಡ್ ವರದಿ ಮಾಡಿದೆ. ಇದರಿಂದ ವಿತರಕರು 1.61 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಆದ ಸಿನಿಮಾ ತೆಲುಗಿನಲ್ಲಿ ಸೋತಿದ್ದು ಯಾಕೆ ಎನ್ನುವ ಚರ್ಚೆ ಶುರುವಾಗಿದೆ.
ಇದನ್ನೂ ಓದಿ | Dil Pasand Movie | ಡಾರ್ಲಿಂಗ್ ಕೃಷ್ಣಾ ಅಭಿನಯದ ಬಹುನಿರೀಕ್ಷಿತ ಚಿತ್ರ ದಿಲ್ ಪಸಂದ್ ರಿಲೀಸ್ ಡೇಟ್ ಫಿಕ್ಸ್!
ಕನ್ನಡದಲ್ಲಿ ಆದಿ, ನಿಧಿಮಾ ಜೋಡಿಯ ಭಾವನಾತ್ಮಕ ಪ್ರೇಮಕಥೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಆರಂಭದಲ್ಲಿ ಕೊಂಚ ಹಿನ್ನಡೆಯಾದರೂ ನಿಧಾನವಾಗಿ ಬಾಕ್ಸಾಫೀಸ್‌ನಲ್ಲಿ ಗಳಿಕೆ ಕಂಡಿತ್ತು.
ಇದನ್ನೂ ಓದಿ | Milana Nagaraj | ಅಂಡರ್ ವಾಟರ್ ಶೂಟಿಂಗ್‌ನಲ್ಲಿ ಪೃಥ್ವಿ ಅಂಬಾರ್-ಮಿಲನಾ ನಾಗರಾಜ್: `FOR REGN’ನಲ್ಲಿ “ಮೋಕೊ ಬೋಟ್”!