Site icon Vistara News

Guruprasad: ಲವ್‌ ಹೋಯ್ತು, ಎರಡನೇ ಮದುವೆ ಆಯ್ತು, ಮಗು ಇದೆ; ಇದೆಲ್ಲಾ ನಂಗೆ ಬೇಕಿತ್ತಾ? ಎಂದ ನಿರ್ದೇಶಕ ಗುರುಪ್ರಸಾದ್‌!

Guruprasad

ಬೆಂಗಳೂರು: ʻಮಠʼ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ (Guruprasad) ಸಿನಿಮಾಗಳ ಬಗ್ಗೆ ಅಪ್‌ಡೇಟ್‌ ನೀಡದೇ ಇದ್ದರೂ ಇದೀಗ ವೈಯಕ್ತಿಕ ಕಾರಣಕ್ಕಾಗಿ ಸಖತ್‌ ಸುದ್ದಿಯಲ್ಲಿದ್ದಾರೆ. ಗುರುನಂದ್ ನಟಿಸಿರುವ ‘ರಾಜು ಜೇಮ್ಸ್ ಬಾಂಡ್’ ಸಿನಿಮಾದ ಬೇಕಿತ್ತಾ ಬೇಕಿತ್ತಾ ಹಾಡಿನ ಬಗ್ಗೆ ಮಾತಾಡುವಾಗ ತಮ್ಮ ವಿಚ್ಛೇದನ, ಎರಡನೇ ಮದುವೆ, ಮಗುವಿನ ಬಗ್ಗೆ ರಿವೀಲ್ ಮಾಡಿದ್ದಾರೆ.

‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾಗಳನ್ನು ಗುರುಪ್ರಸಾದ್ ನಿರಂತರವಾಗಿ ಕೊಟ್ಟಿದ್ದರೂ ಸದ್ಯಕ್ಕೆ ಸಿನಿಮಾ ಮಾಡುತ್ತಿಲ್ಲ. ಎರಡು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರೂ, ಆ ಸಿನಿಮಾಗಳ ಬಗ್ಗೆ ಸುಳಿವಿಲ್ಲ. ಇತ್ತೀಚೆಗೆ ಗುರುಪ್ರಸಾದ್ ಎರಡನೇ ಮದುವೆ ಬಗ್ಗೆ ಮಾತಾಡಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದು, ಎರಡನೇ ಮದುವೆ ಬಗ್ಗೆ ಮಾತಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಗುರುಪ್ರಸಾದ್‌ ಮಾತನಾಡಿ ʻʻನನ್ನ ಜೀವನವನ್ನು ಇಟ್ಟುಕೊಂಡೇ ದೀಪಕ್ ಮಧುವನಹಳ್ಳಿ ಬರೆದಂತೆ ಇದೆ. ಈ ಹಾಡು ನನ್ನ ಬದುಕಿಗೆ ತೀರಾ ಹತ್ತಿರವಾಗಿದೆ. ನನಗೆ ಮೊದಲನೇ ಲವ್ ವಿಫಲ ಆಯ್ತು. ವಿಫಲ ಆಗಿ ಡಿವೋರ್ಸ್ ಕೂಡ ಆಗುತ್ತಿದೆ. ಹಾಗೆ ನೋಡಿದರೆ, ನನ್ನ ಈ ಪರಿಸ್ಥಿತಿಗೆ ಈ ಹಾಡು ಯೋಗ್ಯ ಅಂತ ಅನಿಸುತ್ತದೆ. ಇಷ್ಟು ಆದ್ಮೇಲೆ ಸುಮ್ಮನೆ ಇರಬೇಕಿತ್ತಲ್ವಾ? ಇನ್ನೊಂದು ಮದುವೆಯಾದೆ. ಎರಡು ವರ್ಷದ ಮಗುನೂ ಇದೆ. ಇದೆ ಬೇಕಿತ್ತಾ? ಅನಿಸುತ್ತದೆ ಎಂದು ಗುರುಪ್ರಸಾದ್ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Guruprasad | ಸಿನಿಮಾ ಮಾಡಿ ಕೊಡುವುದಾಗಿ ನಿರ್ಮಾಪಕನಿಗೆ ಟೋಪಿ; ʻಮಠʼ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅರೆಸ್ಟ್‌

ಬೇಕಿತ್ತಾ ಬೇಕಿತ್ತಾ? ‘ಫಸ್ಟ್ Rank ರಾಜು’ ಖ್ಯಾತಿಯ ಗುರುನಂದನ್ ನಟಿಸುತ್ತಿರುವ ಹೊಸ ಸಿನಿಮಾ ‘ರಾಜು ಜೇಮ್ಸ್ ಬಾಂಡ್’. ಈ ಸಿನಿಮಾದ ಮೊದಲ ಹಾಡು ಬೇಕಿತ್ತಾ ಬೇಕಿತ್ತಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಟಗರು ಖ್ಯಾತಿಯ ಅಥೋನಿ ದಾಸನ್ ಹಾಡಿದ್ದು, ಅನೂಪ್ ಸೀಳಿನ್ ಟ್ಯೂನ್ ಹಾಕಿ, ನಿರ್ದೆಶಕ ದೀಪಕ್ ಮಧುವನಹಳ್ಳಿ ಸಾಹಿತ್ಯ ಬರೆದಿದ್ದಾರೆ.

Exit mobile version