Site icon Vistara News

Hamsa Nandini: ಸ್ತನ ಕ್ಯಾನ್ಸರ್‌ ಗೆದ್ದ ಮೋಹಿನಿ ಸಿನಿಮಾ ಖ್ಯಾತಿಯ ಹಂಸ ನಂದಿನಿ

hamsa-nandini Mohini film fame who beat breast cancer

ಬೆಂಗಳೂರು: 2006ರಲ್ಲಿ ತೆರೆ ಕಂಡ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ `ಮೋಹಿನಿ’ ಚಿತ್ರದಲ್ಲಿ ಹಂಸನಂದಿನಿ (Hamsa Nandini), ಮೋಹಿನಿಯಾಗಿ ನಟಿಸಿದ್ದರು. ಪೋಷಕ ನಟಿಯಾಗಿ, ತೆಲುಗು ಚಿತ್ರರಂಗದಲ್ಲಿಯೂ ಕಾಣಿಸಿಕೊಂಡಿರುವ ನಟಿ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಎರಡು ವರ್ಷಗಳ ಹಿಂದೆ ಹೇಳಿಕೊಂಡಿದ್ದರು. ಇದೀಗ ಕ್ಯಾನ್ಸ್‌ರ್‌ನಿಂದ ಗೆದ್ದು, 16 ಕೀಮೋಥೆರಪಿ ನಂತರ ತಲೆ ಕೂದಲು ಸುಂದರವಾಗಿ ಬೆಳೆಯುತ್ತಿರುವುದನ್ನು ಜನರಿಗೆ ತೋರಿಸಿದ್ದಾರೆ.

ಬ್ರೆಸ್ಟ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಂಸನಂದಿನಿ, ಸಿನಿಮಾಗಳಿಂದ ದೂರ ಉಳಿದು ಟ್ರೀಟ್‌ಮೆಂಟ್‌ ಪಡೆಯುತ್ತಿದ್ದರು. ಈಗ ಈ ಚೆಲುವೆ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಡಿಸೆಂಬರ್‌ 2021ರಲ್ಲಿ ಹಂಸನಂದಿನಿ ತಮಗೆ ಕ್ಯಾನ್ಸರ್‌ ಇರುವ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದರು.

”ನಾಲ್ಕು ತಿಂಗಳ ಹಿಂದೆ ನನ್ನ ಸ್ತನದಲ್ಲಿ ಗಡ್ಡೆಯೊಂದು ಕಾಣಿಸಿಕೊಂಡಿತು. ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ನನಗೆ ಸ್ತನ ಕ್ಯಾನ್ಸರ್ ಇರುವುದು ತಿಳಿಯಿತು. ಆದರೆ ನಾನು ಧೈರ್ಯ ಕೆಡಲಿಲ್ಲ. ಕೆಲವು ದಿನಗಳ ಹಿಂದೆ ನನ್ನ ತಾಯಿಯನ್ನು ಕಳೆದುಕೊಂಡೆ. ಅಂದಿನಿಂದ ಆ ಕರಾಳ ನೆನಪು ಹಾಗೂ ಭಯದಲ್ಲೇ ಜೀವನ ಸಾಗಿಸುತ್ತಿದ್ದೆ. ಈಗಾಗಲೇ 9 ಬಾರಿ ಕೀಮೋಥೆರಪಿ ಮಾಡಿಸಿದ್ದು ಇನ್ನೂ 7 ಬಾರಿ ಮಾಡಿಸಬೇಕಿದೆ. ನಾನು ಈ ಕಾಯಿಲೆಯನ್ನು ಗೆದ್ದು ಅದೇ ನಗುವಿನಿಂದ ಮತ್ತೆ ತೆರೆ ಮೇಲೆ ಬರುತ್ತೇನೆ ಎಂಬ ವಿಶ್ವಾಸ ಇದೆ. 4 ತಿಂಗಳಿಂದ ನೀವೆಲ್ಲರೂ ನನಗೆ ಸಂದೇಶ ಕಳಿಸುತ್ತಲೇ ಇದ್ದೀರಿ. ನಿಮ್ಮ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದಗಳು” ಎಂದು ಹಂಸನಂದಿನಿ ಬರೆದುಕೊಂಡಿದ್ದರು.

ಇದನ್ನೂ ಓದಿ: World Cancer Day 2023: ಸ್ತನ ಕ್ಯಾನ್ಸರ್‌ ಮಹಿಳೆಯರಲ್ಲಷ್ಟೇ ಅಲ್ಲ, ಪುರುಷರಿಗೂ ಬರಬಹುದು ಎಚ್ಚರ!

ಈಗ ತಮ್ಮ ತಲೆ ಕೂದಲು ಬೆಳೆಯುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಒಂದು ವರ್ಷದ ನಂತರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಿದೆ ಎಂದು ತಿಳಿಸಿದ್ದಾರೆ. ತಮ್ಮ 38ನೇ ಹುಟ್ಟುಹಬ್ಬದ ದಿನ ಸಿನಿಮಾ ಚಿತ್ರೀಕರಣಕ್ಕೆ ಮರುಳಿದ್ದಾರೆ. ಹಂಸ ಧೈರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಹಂಸನಂದಿನಿ ಮಿರ್ಚಿ, ಲೆಜೆಂಡ್, ಲೌಕ್ಯಂ, ರುದ್ರಮದೇವಿ, ಜೈ ಲವಕುಶ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Exit mobile version