Site icon Vistara News

Ayodhya Ram Mandir: ಅಯೋಧ್ಯೆಗೆ 2.66 ಕೋಟಿ ರೂ. ದೇಣಿಗೆ ನೀಡಿದ ʻಹನುಮಾನ್‌ʼ ಚಿತ್ರತಂಡ!

HanuMan makers donate Rs 2.66 crore for Ayodhya

ಬೆಂಗಳೂರು: ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು (ಜನವರಿ 22) ರಾಮ ಮಂದಿರ (Ayodhya Ram Mandir) ಉದ್ಘಾಟನೆಯಾಗಲಿದೆ. ಈ ‘ಪ್ರಾಣ ಪ್ರತಿಷ್ಠಾ’ (Pran Pratistha-ಪ್ರತಿಷ್ಠಾಪನಾ ಸಮಾರಂಭ) ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಅದ್ಧೂರಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಮೊದಲು, ಟಾಲಿವುಡ್‌ ನಟ ತೇಜ ಸಜ್ಜನ ಅಭಿನಯದ ‘ಹನುಮಾನ್’ ಚಿತ್ರತಂಡ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ 2.66 ಕೋಟಿ ರೂ. ದೇಣಿಗೆ ನೀಡಿದೆ. ಈ ಬಗ್ಗೆ ಚಿತ್ರತಂಡ ಎಕ್ಸ್‌ನಲ್ಲಿ ಅಧಿಕೃತ ವಾಗಿ ಹೇಳಿಕೊಂಡಿದೆ. ಮಾರಾಟವಾಗುವ ಪ್ರತಿ ಟಿಕೆಟ್​ನ ಐದು ರೂಪಾಯಿ ಮೊತ್ತವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಚಿತ್ರತಂಡ ಮೊದಲೇ ಘೋಷಿಸಿತ್ತು. ಈ ಹಿಂದೆ 14.85 ಲಕ್ಷ ರೂಪಾಯಿ ಹಣವನ್ನು ಚಿತ್ರತಂಡ ದೇಣಿಗೆ ನೀಡಿತ್ತು. 

‘ಹನುಮಾನ್’ ನಿರ್ಮಾಪಕರು, ಎಕ್ಸ್‌ನಲ್ಲಿ ಅಯೋಧ್ಯೆಯ ರಾಮಮಂದಿರಕ್ಕಾಗಿ 2.66 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಹನುಮಾನ್’ ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ 14.85 ಲಕ್ಷ ರೂಪಾಯಿ ಹಣವನ್ನು ಚಿತ್ರತಂಡ ದೇಣಿಗೆ ನೀಡಿತ್ತು. ಇದು ಪ್ರೀಮಿಯರ್ ಶೋನ ಟಿಕೆಟ್ ಮಾರಾಟದಿಂದ ಒಟ್ಟಾಗಿದ್ದ ಹಣದ ಭಾಗವಾಗಿತ್ತು. ಈಗ ಮತ್ತೆ 2.66 ಕೋಟಿ ರೂಪಾಯಿ ಮೊತ್ತವನ್ನು ದೇಣಿಗೆ ನೀಡಿದೆ.

ಇದನ್ನೂ ಓದಿ: Ayodhya Ram Mandir: ಹಳೆಯ ರಾಮ ಲಲ್ಲಾ ಮೂರ್ತಿ ಏನಾಗಲಿದೆ? ಇನ್ನೆರಡು ಮೂರ್ತಿಗಳ ಕತೆ ಏನು?

ಪ್ರಿ-ರಿಲೀಸ್ ಸಮಾರಂಭ

ಜನವರಿ 7 ರಂದು ಹೈದರಾಬಾದ್‌ನಲ್ಲಿ ನಡೆದ ‘ಹನುಮಾನ್’ ಪ್ರಿ-ರಿಲೀಸ್ ಸಮಾರಂಭದಲ್ಲಿ, ಮುಖ್ಯ ಅತಿಥಿ ಮೆಗಾಸ್ಟಾರ್ ಚಿರಂಜೀವಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು., “ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ‘ಹನುಮಾನ್’ ತಂಡವು ಪ್ರಮುಖ ಘೋಷಣೆಯನ್ನು ಮಾಡಲಿದೆ. ಮಾರಾಟವಾಗುವ ಪ್ರತಿ ಟಿಕೆಟ್​ನ ಐದು ರೂಪಾಯಿ ಮೊತ್ತವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ನಿರ್ಧರಿಸಿದೆ. ಉದಾತ್ತ ನಿರ್ಧಾರವನ್ನು ತೆಗೆದುಕೊಂಡ ‘ಹನುಮಾನ್’ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳುʼʼಎಂದು ಹೇಳಿಕೊಂಡಿದ್ದರು.

ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನೂ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕಂಡಗಟ್ಲ ನಿರಂಜನ ರೆಡ್ಡಿ. ಸಿನಿಮಾ ಈ ವರೆಗೆ ಸುಮಾರು 200 ಕೋಟಿ ಗಳಿಕೆ ಮಾಡಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಸುಮಾರು 7.56 ಕೋಟಿ ರೂ. ಬಾಚಿಕೊಂಡಿತ್ತು.

Exit mobile version