Site icon Vistara News

HanuMan Twitter Review: ಮಹೇಶ್‌ ಬಾಬು ಸಿನಿಮಾಕ್ಕಿಂತ ಸೂಪರ್‌; `ಹನುಮಾನ್’ ಟ್ವಿಟರ್‌ ವಿಮರ್ಶೆ ಔಟ್‌!

HanuMan Twitter Review A Complete Package Of Emotion

ಬೆಂಗಳೂರು: ತೇಜ ಸಜ್ಜಾ ನಟನೆಯ `ಹನುಮಾನ್’ ಸಿನಿಮಾ (HanuMan Twitter Review) ಇಂದು (ಜ.12) ತೆರೆ ಕಂಡಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ವಿನಯ್ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಪ್ರೇಕ್ಷಕರು ಸಿನಿಮಾವನ್ನು ನೋಡಿ ಹೊಗಳಿದ್ದಾರೆ. ಹೆಚ್ಚಾಗಿ ವಿಎಫ್​ಎಕ್ಸ್ ಹಾಗೂ ಚಿತ್ರದ ಕ್ಲೈಮ್ಯಾಕ್ಸ್​ನ ಜನರು ಇಷ್ಟಪಟ್ಟಿದ್ದಾರೆ.

ʻʻಹನುಮಾನ್, ದೇಸಿ ಸೂಪರ್ ಹೀರೊ ಚಿತ್ರ. ಸಾಂದರ್ಭಿಕ ಹಾಸ್ಯದೊಂದಿಗೆ ಭಕ್ತಿ, ಮನರಂಜನೆ, ಆ್ಯಕ್ಷನ್‌ಗಳಿಂದ ಕೂಡಿದೆ. ವಿಎಫ್​ಎಕ್ಸ್ ತುಂಬ ಅದ್ಭುತವಾಗಿ ಮೂಡಿ ಬಂದಿದೆ. ತೇಜ ಸಜ್ಜಾ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆʼʼಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Actor Praveen Tej: ಮಾಸ್ ಲುಕ್‌ನಲ್ಲಿ ಪ್ರವೀಣ್ ತೇಜ್; ‘ಜಿಗರ್’ ಟೀಸರ್ ಔಟ್

ʻʻಬರೀ 30-35 ಕೋಟಿ ರೂ. ಬಜೆಟ್‌ ಸಿನಿಮಾ. ʻಗುಂಟೂರು ಖಾರಂʼ ಹಿಂದಿಕ್ಕುವುದು ಗ್ಯಾರಂಟಿʼʼ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ʻʻಮೊದಲಾರ್ಧ ಉತ್ತಮವಾಗಿದೆ. ಸಿನಿಮಾ ಅನುಭವ ಬೇರೆಯದೇ ಲೆವೆಲ್​ನಲ್ಲಿ ಸಿಗುತ್ತದೆ. ವಿಎಫ್​ಎಕ್ಸ್, ಬಿಜಿಎಂ ಗೂಸ್​ಬಂಪ್ಸ್ ಸಿಗುತ್ತದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.

ಈ ಮುಂಚೆ ತಮ್ಮ ಚಿತ್ರ ನೋಡುವಂತೆ ಧ್ರುವ ಸರ್ಜಾ ಅವರಿಗೆ ತೇಜ ಮನವಿ ಮಾಡಿದ್ದರು. ಈ ವೇಳೆ ʻಹನುಮಾನ್ʼ ಟ್ರೈಲರ್‌ ಅದ್ಭುತವಾಗಿದ್ದು, ತಾವು ಸಿನಿಮಾ ನೋಡುವುದಾಗಿ ಆ್ಯಕ್ಷನ್ ಪ್ರಿನ್ಸ್ ತಿಳಿಸಿದ್ದರು. ಧ್ರುವ ಅಪ್ ಕಮ್ಮಿಂಗ್ ಚಿತ್ರಗಳಾದ ಕೆಡಿ, ಮಾರ್ಟಿನ್ ಸಿನಿಮಾಗೆ ತೇಜ ಸಜ್ಜಾ ಶುಭಾಶಯ ಕೋರಿದ್ದು, ನಿಮ್ಮ ʻಪೊಗರುʼ ಸಿನಿಮಾ ತೆಲುಗು ರಂಗದಲ್ಲಿ ಸದ್ದು ಮಾಡಿತ್ತು. ನೀವು ಅದ್ಭುತವಾಗಿ ಆ್ಯಕ್ಷನ್ ಮಾಡುತ್ತೀರಾ ಎಂದು ಧ್ರುವ ನಟನೆಯನ್ನು ತೇಜ ಮೆಚ್ಚಿಕೊಂಡಿದ್ದರು.

Exit mobile version