Site icon Vistara News

ಜನುಮದಿನದ ಶುಭಾಶಯ ರಣದೀಪ್ ಹೂಡಾ

ರಣದೀಪ್ ಹೂಡಾ

ಹರಿಯಾಣಾದ ರೋಹ್ಟಕ್‌ನಲ್ಲಿ ಜನಿಸಿದ ರಣದೀಪ್ ಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದರು. ನಂತರ ಪದವಿ ಶಿಕ್ಷಣವನ್ನು ಆಸ್ಟ್ರೇಲಿಯಾದಲ್ಲಿ ಪೂರೈಸಿದರು.

ರೆಸ್ಟೋರೆಂಟ್‌ನಲ್ಲಿ ದುಡಿಮೆ, ಕಾರ್ ವಾಷಿಂಗ್, ಡ್ರೈವಿಂಗ್ ಹೀಗೆ ಪಾರ್ಟ್‌ಟೈಮ್‌ ಕೆಲಸ ಮಾಡುತ್ತ ವಿದ್ಯಾಭ್ಯಾಸ ಮಾಡಿದರು.

2000ನೇ ಇಸವಿಯಲ್ಲಿ ಭಾರತಕ್ಕೆ ಮರಳಿ ಮಾಡೆಲಿಂಗ್, ರಂಗಭೂಮಿ ಮತ್ತು ವಿಮಾನಯಾನ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ದರು.

2001ರ Monsoon Wedding ಚಿತ್ರದಲ್ಲಿ ರಾಹುಲ್ ಚಡ್ಡಾ ಪಾತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.

ಸುಮಾರು 4 ವರ್ವದ ನಂತರ 2005ರ “D” ಚಿತ್ರದಲ್ಲಿ ಪ್ರಮುಖ ಪಾತ್ರದೊಂದಿಗೆ ಕಾಣಿಸಿಕೊಂಡರು.

Saheb, Biwi Aur Gangster, Jannat 2, Rang Rasiya, Sultan, Murder 3, Jism 2, Heroine ಇವರ ಜನಪ್ರಿಯ ಚಿತ್ರಗಳು.

2014ರ Highway ಚಿತ್ರಕ್ಕಾಗಿ Best Actor in a Leading Role ಫೀಲ್ಮ್‌ಫೇರ್‌ ಪ್ರಶಸ್ತಿ ಸಂದಿದೆ.

2015ರ Main Aur Charles ಚಿತ್ರದಲ್ಲಿ ಅವರ “ಚಾರ್ಲ್ಸ್ ಶೋಭರಾಜ್” ಪಾತ್ರಕ್ಕಾಗಿ Best Actor in a Negative Role ಫೀಲ್ಮ್‌ಫೇರ್‌ ಪ್ರಶಸ್ತಿ ದೊರೆತಿದೆ.

2020ರ Chris Hemsworth ನಟನೆಯ ಆಂಗ್ಲ ಚಿತ್ರ Extractionನಲ್ಲಿ Saju ಪಾತ್ರದಲ್ಲಿ ಮಿಂಚಿದ್ದಾರೆ.

Unfair & Lovely, SwatantraVeer Savarkar, Inspector Avinash, CAT ಮುಂಬರಲಿರುವ ಚಿತ್ರಗಳು.

ಇದನ್ನೂ ಓದಿ| ಸತ್ಯ ನಾಡೆಳ್ಳಾ @55

Exit mobile version