Site icon Vistara News

Happy Birthday ಸಮಂತಾ ರುತ್ ಪ್ರಭು

ಬಣ್ಣದ ಲೋಕದಲ್ಲಿ ಅನೇಕ ಏಳುಬೀಳುಗಳನ್ನು ಕಾಣುತ್ತ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಮಾನ್ಯವಾಗಿ ನಾಯಕಿ ಎಂದ ಕೂಡಲೆ 25-30 ವರ್ಷದೊಳಗಿನವರು ಎಂಬ ಅಭಿಪ್ರಾಯವಿದೆ. ಆದರೆ 35ನೇ ವಸಂತಕ್ಕೆ ಕಾಲಡುತ್ತಿದ್ದರೂ ಇನ್ನೂ ಬೇಡಿಕೆಯ ನಟಿಯಾಗಿದ್ದಾರೆ ಸಮಂತಾ. ತ್ರಿಶಾ, ನಯನತಾರಾ ಸೇರಿ ಕೆಲವೇ ನಟಿಯರು ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಹಿಳಾ ಸಬಲೀಕರಣದಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹಿಳಾ ಸಮಾನತೆಯ ವಿಷಯವನ್ನು ಅತ್ಯಂತ ಧೈರ್ಯವಾಗಿ ಹಾಗೂ ಪ್ರಬಲವಾಗಿ ಪ್ರತಿಪಾದಿಸುವವರಲ್ಲಿ ಸಮಥಾ ಸಹ ಒಬ್ಬರು. ಮದುವೆ, ವಿಚ್ಛೇದನ ಆದ ಬಳಿಕವೂ ಅವರಿಗೆ ಇದ್ದ ಡಿಮ್ಯಾಂಡ್​ ಕಮ್ಮಿ ಆಗಿಲ್ಲ. ಸಮಂತಾ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಬದುಕಿನಲ್ಲಿ ಸಮಂತಾ ತೆಗೆದುಕೊಂಡು ಕೆಲವು ಗಟ್ಟಿ ನಿರ್ಧಾರಗಳೇ ಅವರ ಈ ಯಶಸ್ಸಿಗೆ ಕಾರಣ. ಆದರೆ ವೃತ್ತಿಜೀವನದಲ್ಲಿ ಅವರಿಗೆ ಗೆಲುವು ತಂದುಕೊಟ್ಟಿವೆ. ಹಾಗು ಭಾಷೆ ಮತ್ತು ರಾಜ್ಯಗಳ ಗಡಿಯನ್ನೂ ಮೀರಿ ಸಮಂತಾ ಸಾಧನೆ ಮಾಡುತ್ತಿದ್ದಾರೆ.

ನಟಿ ಸಮಂತಾ ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಬಣ್ಣದ ಲೋಕದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿರುವ ಅವರು ಇಂದಿಗೂ ಬಹುಬೇಡಿಕೆಯ ಕಲಾವಿದೆಯಾಗಿ ಸಿಮಾದಲ್ಲಿ​ ಉಳಿಸಿಕೊಂಡಿದ್ದಾರೆ.


ನಾಗ ಚೈತನ್ಯ ಜೊತೆ ಮದುವೆ ಆದ ನಂತರವೂ ಅವರು ನಟನೆ ಮುಂದುವರಿಸಿದರು. ಒಂದಕ್ಕಿಂತ ಒಂದು ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಾವು ಈಗಲೂ ಚಾಲ್ತಿಯಲ್ಲಿರುವ ನಟಿ ಎಂದು ಸಾಬೀತು ಮಾಡಿದರು. ‘ಅರೇಂಜ್​ಮೆಂಟ್ಸ್​ ಆಫ್​ ಲವ್’ ಚಿತ್ರದಲ್ಲಿ ಕೂಡ ಅವರು ಡಿಫರೆಂಟ್​ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ‘ಯಶೋದಾ’ ಹಾಗೂ ‘ಶಾಕುಂತಲಂ’ ಸಿನಿಮಾಗಳು ಸಹ ಹೆಚ್ಚು ನಿರೀಕ್ಷೆ ಹುಟ್ಟುಹಾಕಿವೆ. ಅದೇನೇ ಇರಲಿ ಸಮಂತಾ ಅವರು ತಮಗೆ ಸರಿ ಎನಿಸಿದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದು ಕೂಡ ಅವರ ಗೆಲುವಿಗೆ ಕಾರಣ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಅವರು ಮಾಡಿದ್ದು ವಿಲನ್​ ಪಾತ್ರ. ಬಳಿಕ ‘ಪುಷ್ಪ 2’ ಚಿತ್ರದಲ್ಲಿ ಐಟಂ ಡ್ಯಾನ್ಸರ್​. ಒಪ್ಪಿಕೊಂಡ ಕೆಲಸವನ್ನು ದಿ ಬೆಸ್ಟ್​ ಎಂಬ ರೀತಿಯಲ್ಲಿ ಮಾಡಿದ್ದಕ್ಕಾಗಿ ಅವರಿಗೆ ಯಶಸ್ಸು ಸಿಕ್ಕಿದೆ. ಈಗ ‘ಕಾದು ವಾಕುಲ ರೆಂಡು ಕಾದಲ್​’ ಚಿತ್ರದಲ್ಲಿ ಅವರು ನಯನತಾರಾ ಜೊತೆ ಎರಡನೇ ನಾಯಕಿ ಆಗಿ ತೆರೆಹಂಚಿಕೊಂಡಿದ್ದಾರೆ.

ಇದನ್ನೂ ಓದಿ | ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಎಂಟ್ರಿ: ಯುವ ರಾಜ್‌ಕುಮಾರ್‌ ಪದಾರ್ಪಣೆ ಘೋಷಣೆ

Exit mobile version