Site icon Vistara News

Hari Santhosh |ʻಬೈ ಟು ಲವ್‌ʼ ಖ್ಯಾತಿಯ ಹರಿ ಸಂತೋಷ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Hari Santhosh

ಬೆಂಗಳೂರು : ನಟ ಧನ್ವೀರ್‌-ಶ್ರೀಲೀಲಾ ಅಭಿನಯದ ‘ಬೈ ಟು ಲವ್’ ಸಿನಿಮಾ ನಿರ್ದೇಶಕ ಹರಿ ಸಂತೋಷ್‌ (Hari Santhosh) ಅವರು ʻಸಂತೋಷಂ ದಕ್ಷಿಣ ಭಾರತೀಯ ಚಲನಚಿತ್ರ ಪ್ರಶಸ್ತಿ-2022ʼಯ (Santhosham South Indian Film awards 2022) ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸಿನಿಮಾ ಫೆಬ್ರವರಿ 18ಕ್ಕೆ ರಾಜ್ಯಾದ್ಯಂತ ತೆರೆ ಕಂಡಿತ್ತು.

ʻಸಂತೋಷಂ ದಕ್ಷಿಣ ಭಾರತೀಯ ಚಲನಚಿತ್ರ ಪ್ರಶಸ್ತಿ-2022ʼ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆದಿದ್ದು, ಇದೀಗ ಈ ಸಿನಿಮಾಗೆ ಮೂರು ಅವಾರ್ಡ್‌ಗಳು ದೊರೆತಿವೆ. ಅತ್ಯುತ್ತಮ ನಿರ್ದೇಶಕರಾಗಿ ಹರಿ ಸಂತೋಷ್ ಹೊರಹೊಮ್ಮಿದ್ದಾರೆ. ಅತ್ಯುತ್ತಮ ಪೋಷಕ ನಟರಾಗಿ ಶಿವರಾಜ್ ಕೆಆರ್ ಪೇಟೆ, ಅತ್ಯುತ್ತಮ ಗಾಯಕರಾಗಿ ನವೀನ್ ಸಜ್ಜು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಹರಿ ಸಂತೋಷ್‌ ಅವರು ಗೀತರಚನೆಕಾರರೂ ಹೌದು. ನಿರ್ದೇಶಕ ಪ್ರೇಮ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಚಲನಚಿತ್ರ ವೃತ್ತಿಜೀವನ ಪ್ರಾರಂಭಿಸಿದರು. ಇವರು ಕನ್ನಡ ಚಲನಚಿತ್ರಗಳಾದ ʻಕರಿಯʼ,ʻಎಕ್ಸ್‌ಕ್ಯೂಸ್ ಮಿʼ, ʻಜೋಗಿʼ, ʻಈ ಪ್ರೀತಿ ಏಕೆ ಭೂಮಿ ಮೇಲೆʼ ಮತ್ತು ʻಸಂಜು ವೆಡ್ಸ್ ಗೀತಾʼ ಸಿನಿಮಗೆ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 2012 ರಲ್ಲಿ ಲೂಸ್‌ ಮಾದ ಯೋಗೇಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ʻಅಲೆಮಾರಿʼ ಚಿತ್ರದಲ್ಲಿ ನಿರ್ದೇಶಕ, ಬರಹಗಾರ ಮತ್ತು ಗೀತರಚನೆಕಾರರಾಗಿದ್ದರು. ಡಾರ್ಲಿಂಗ್ (2014), ಡವ್ (2015) ಮತ್ತು ಕಾಲೇಜ್ ಕುಮಾರ್ (2017) ನಂತಹ ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

2020ರಲ್ಲಿ ಹರಿ ಸಂತೋಷ್‌ ಅವರ ನಿರ್ದೇಶನದ ʻಬಿಚ್ಚುಗತ್ತಿʼ ಚಾಪ್ಟರ್ 1, ಹರೀಶ್‌ ಅವರ ಮೊದಲ ಐತಿಹಾಸಿಕ ಸಿನಿಮಾ ಆಗಿದೆ. ಚಿತ್ರದುರ್ಗದ ಇತಿಹಾಸ ಪುಟಗಳಲ್ಲಿ ಎಂದೂ ಅಳಿಯದ ಗುರುತಾಗಿ ಉಳಿದಿರುವ ದಳವಾಯಿ ದಂಗೆಯ ಕಥೆ ಇದಾಗಿದೆ.

ಇದನ್ನೂ ಓದಿ | Nandamuri Balakrishna | ಅದ್ಧೂರಿಯಾಗಿ ಸೆಟ್ಟೇರಿದೆ ನಂದಮೂರಿ ಬಾಲಕೃಷ್ಣ 108ನೇ ಚಿತ್ರ: ಶ್ರೀಲೀಲಾ ನಾಯಕಿ!

ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಧನ್ವೀರ್ ಗೌಡ ‘ಬೈಟು ಲವ್’ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಕೆವಿಎನ್‌ ಬ್ಯಾನರ್‌ನಲ್ಲಿ (KVN Banner) ನಿಶಾ ವೆಂಕಟ್ ಹಾಗೂ ಸುಪ್ರೀತ್ ನಿರ್ಮಿಸಿದ್ದು, ಹರಿ ಸಂತೋಷ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 

ʻಬೈಟು ಲವ್’ಚಿತ್ರ ಈ ಕಾಲದ ಯುವಕ ಯುವತಿಯರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಚಿತ್ರಕ್ಕೆ ಮಹೇಂದ್ರ ಸಿಂಹ ಕ್ಯಾಮೆರಾ, ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಹಾಗೂ ಯೋಗಾನಂದ್‌ ಸಂಭಾಷಣೆ ಚಿತ್ರಕ್ಕಿದೆ. ಸಾಧುಕೋಕಿಲ, ಅಚ್ಯುತ್​ ಕುಮಾರ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರ ತಾರಾಬಳಗವನ್ನು ಚಿತ್ರ ಹೊಂದಿತ್ತು.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ಭೋಜ್‌ಪುರಿ ಸಿನಿಮಾಗೆ ಸೂಕ್ತ, ಹಿಂದಿಗಲ್ಲ ಎಂದ ವಿಮರ್ಶಕ ಕಮಾಲ್ ಖಾನ್!

Exit mobile version