Site icon Vistara News

Vasishta Simha and Haripriya: ನಾಳೆ ಮೈಸೂರಿನಲ್ಲಿ ನಡೆಯಲಿದೆ ಸಿಂಹಪ್ರಿಯಾ ಮದುವೆ!

vasishta simha and Haripriya marriage

ಬೆಂಗಳೂರು : ನಟ ವಸಿಷ್ಠ ಸಿಂಹ (Vasishta Simha and Haripriya)-ನಟಿ ಹರಿಪ್ರಿಯಾ (Haripriya) ಜನವರಿ 26ರಂದು ಮೈಸೂರಿನ (Mysore) ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಗಾಗಿ ಈಗಾಗಲೇ ಸಿದ್ಧತೆ ನಡೆದಿದೆ. ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಸಾಂಪ್ರದಾಯಿಕವಾಗಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ನೆಚ್ಚಿನ ಆಶ್ರಮದಲ್ಲೇ ಮದುವೆಯಾಗಬೇಕು ಎನ್ನುವುದು ಅವರ ಕನಸಾಗಿತ್ತು. ಕುಟುಂಬಸ್ಥರು ಮತ್ತು ಕೆಲವೇ ಆಪ್ತರಿಗೆ ನಾಳೆ ಆಹ್ವಾನ ನೀಡಿದ್ದು, ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಸಿಷ್ಠ ಸಿಂಹ ಅವರು ಮೈಸೂರಿನವರೇ ಆದ ಕಾರಣ ಮದುವೆ ಮೈಸೂರಿನಲ್ಲೇ ನೆರವೇರಲಿದೆ.

ಇದನ್ನೂ ಓದಿ: Vasishta Simha | ವಸಿಷ್ಠ ಸಿಂಹ ಅಭಿನಯದ ‘ಲವ್ ಲಿ’ ಸಿನಿಮಾದಲ್ಲಿ ಕೋಟಿ ರೂಪಾಯಿ ವೆಚ್ಚದ ಸೆಟ್

ಇದನ್ನೂ ಓದಿ: Actress Haripriya | ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೊಗಳು ವೈರಲ್‌!

ನಟಿ ಹರಿಪ್ರಿಯಾ ಅವರು 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ತಾವು ನಟಿಸಿದ ಸಿನಿಮಾಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಈ ಹಿಂದೆ ಅಷ್ಟೇ ಜೋಡಿ ತಮ್ಮ ಉಂಗರುಗಳ ವಿಶೇಷತೆ ಬಗ್ಗೆ ಹಂಚಿಕೊಂಡಿತ್ತು. ʻʻಸಾಮಾನ್ಯಕ್ಕಿಂತ ವಿಭಿನ್ನವಾಗಿರುವುದು ನನ್ನ ಆಯ್ಕೆ ಆಗಿರುತ್ತದೆ. ಸಿಂಹದ ಚಿಹ್ನೆ ನನ್ನ ಎಂಗೇಜ್‌ಮೆಂಟ್‌ ರಿಂಗ್ ಮೇಲೆ ಇರಬೇಕು ಎಂಬುದು ನನ್ನ ಆಯ್ಕೆ ಆಗಿತ್ತು. ಜೀವನ ಪೂರ್ತಿ ನಮ್ಮ ಜತೆಯಿರುವ ಉಂಗುರ ಇದಾಗಲಿದೆ. ಡಿಸೈನರ್‌ಗಳ ಜತೆ ಸೇರಿಕೊಂಡು ನಾವು ಈ ವಿಶಿಷ್ಟ ವಿನ್ಯಾಸ ಮಾಡಿಸಿದ್ದೇವೆ. ಅಷ್ಟಭುಜಾಕೃತಿಯಿಂದ ಕೂಡಿದೆ ಈ ಉಂಗುರ. ಈ ರೀತಿ ಮೂಡಿ ಬಂದಿರುವುದಕ್ಕೆ ತುಂಬಾನೇ ಖುಷಿಯಿದೆʼʼ ಎಂದು ಹರಿಪ್ರಿಯಾ ಬರೆದುಕೊಂಡಿದ್ದರು.

Exit mobile version