Site icon Vistara News

Harshika Poonacha: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ- ಭುವನ್‌ ಜೋಡಿ; ಕೊಡವ ಶೈಲಿಯಲ್ಲಿ ವಿವಾಹ

Harshika Poonacha bhuvan marriage

ಬೆಂಗಳೂರು: ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಭುವನ್ ಪೊನ್ನಣ್ಣ (Bhuvann Ponnannaa) ಇಂದು (ಆಗಸ್ಟ್ 24ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿರಾಜಪೇಟೆಯ (Virajpet Kodagu) ಅಮ್ಮತ್ತಿ ಕೊಡವ ಸಮಾಜದಲ್ಲಿ ವಿವಾಹ ಕಾರ್ಯಗಳು (Marriage in Kodava style) ಅದ್ಧೂರಿಯಾಗಿ ನೆರವೇರಿದೆ. ಕುಟುಂಬದವರು, ಆಪ್ತರು ಹಾಗೂ ಕೆಲವು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿ ಆಗಿದ್ದಾರೆ. ಮದುವೆ ಕೊಡವ ಶೈಲಿಯಲ್ಲಿ ನಡೆದಿದ್ದು, ಹರ್ಷಿಕಾ ಹಾಗೂ ಭುವನ್ ಅವರ ಉಡುಗೆ ಗಮನ ಸೆಳೆದಿದೆ. 6 ವರ್ಷದಿಂದ ಭುವನ್ ಹಾಗೂ ಹರ್ಷಿತಾ ಪೂಣಚ್ಚ ಪ್ರೀತಿಯಲ್ಲಿದ್ದರು. ಇದೀಗ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ ಜೋಡಿ.

ಪ್ರೀತಿ ಶುರುವಾಗಿದ್ದು ಹೇಗೆ?

ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಎಂದು ಸಮಯ ನೀಡಿದ್ದರು. ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ದರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದರು ಎಂದು ಎಂದು ಹರ್ಷಿಕಾ ಹೇಳಿಕೊಂಡಿದ್ದರು.

ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹರ್ಷಿಕಾ ಹೊರಹೊಮ್ಮಿದ್ದರು. ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ ಬಳಿಕ ಅವರು ಹಿಂದಿರುಗಿ ನೋಡಿಲ್ಲ. ಈ ಚಿತ್ರದ ನಟನೆಗೆ ಹರ್ಷಿಕಾಗೆ ಬೆಸ್ಟ್ ಸೈಡ್ ಆಕ್ಟರ್ ಎಂಬ ಪ್ರಶಸ್ತಿ ದೊರೆತಿತ್ತು. ʼಭಲೇ ಜೋಡಿ’, ‘ಉಪೇಂದ್ರ ಮತ್ತೆ ಬಾ’, ‘ಚಾರ್‌ಮಿನಾರ್’, ‘ಕಾಸಿನ ಸರ’ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭುವನ್‌ ಅವರು ಕುಚ್ಚಿಕು ಕುಚ್ಚಿಕು, ರಾಂಧವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ: Harshika Poonacha: ಹರ್ಷಿಕಾ- ಭುವನ್ ಮದುವೆ ಸಂಭ್ರಮ; ಮಿಂಚಿದ ಮದುಮಗಳು

ಮದುವೆಗೆ ಮುನ್ನವೇ ಭುವನ್‌ ಹೊಸ ಮನೆ ಪ್ರವೇಶ ಮಾಡಿದ ಹರ್ಷಿಕಾ

ಇಂಟ್ರೆಸ್ಟಿಂಗ್‌ ಸಂಗತಿ ಎಂದರೆ ಹರ್ಷಿಕಾ ಪೂಣಚ್ಚ ಅವರು ಆಗಲೇ ಭುವನ್‌ ಪೂಣಚ್ಚ ಅವರ ಗೃಹ ಪ್ರವೇಶ (House Warming Ceremony) ಮಾಡಿದ್ದಾರೆ. ಭುವನ್‌ ಪೊನ್ನಪ್ಪ ಅವರು ವಿರಾಜಪೇಟೆಯ ಕಾಫಿ ತೋಟದಲ್ಲಿ ಒಂದು ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಕಾಫಿ ತೋಟದ ನಡುವೆ ಮೈದಳೆದು ನಿಂತಿರುವ ಇದು ಗೆಳತಿ ಹರ್ಷಿಕಾ ಪೂಣಚ್ಚ ಅವರಿಗಾಗಿಯೇ ಭುವನ್‌ ಕಟ್ಟಿಸಿದ ಹೊಸ ಮನೆ. ಆಗಸ್ಟ್‌ 22 ಇದರ ಗೃಹ ಪ್ರವೇಶ ಕಾರ್ಯಕ್ರಮ ಕುಟುಂಬಿಕರ ಸಮ್ಮುಖದಲ್ಲಿ ಸರಳವಾಗಿ ಆದರೆ, ಸಂಭ್ರಮದಿಂದ ಜರುಗಿತು.

Exit mobile version