Site icon Vistara News

Harshika Poonacha: ಹಸೆಮಣೆ ಏರಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ; ಚಂದನವನದಲ್ಲಿ ಮತ್ತೊಂದು ಸಿಹಿ ಸುದ್ದಿ!

Harshika Poonacha bhuvan ponnanna Marriage

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್ ಪೊನ್ನಣ್ಣ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 24ರಂದು ಕೊಡವ ಸಂಪ್ರದಾಯದಂತೆ, ಕೊಡಗಿನಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಸಿನಿಮಾ ತಾರೆಯರು ಪಾಲ್ಗೊಳ್ಳುವ ನೀರಿಕ್ಷೆ ಇದೆ.

ಕೊಡಗಿನ ಅಮ್ಮಂಗೇರಿಯ ಕಕ್ಕಬೆ ಎಂಬಲ್ಲಿರುವ ಇಗ್ಗುತ್ತಪ್ಪ ದೇವಾಲಯದಲ್ಲಿ ನಡೆಯುವ ಮದುವೆಯ ಲಗ್ನಪತ್ರಿಕೆ ವಿನಿಮಯ ಕಾರ್ಯ ಸರಳವಾಗಿ ನಡೆದಿದೆ. ಈ ವೇಳೆ ಎರಡೂ ಕುಟುಂಬದ ಕೆಲವರು ಮಾತ್ರ ಭಾಗಿಯಾಗಿದ್ದರು. ತುಂಬಾ ವರ್ಷಗಳಿಂದ ಈ ಜೋಡಿ ಮಧ್ಯೆ ಪ್ರೇಮವಿತ್ತು ಎನ್ನಲಾಗಿತ್ತು. ನಟಿ ಸಾಮಾಜಿಕ ಕಾರ್ಯಗಳಲ್ಲಿ ಸಹ ತಮ್ಮನ್ನು ತಾವೂ ತೊಡಗಿಸಿಕೊಂಡು, ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಸತಿಪತಿಯಾಗುತ್ತಿದ್ದಾರೆ.

ಇದನ್ನೂ ಓದಿ: Ghajini Actress Asin: ʻಗಜನಿʼ ಸಿನಿಮಾ ಖ್ಯಾತಿಯ ನಟಿ ಆಸಿನ್ ವೈವಾಹಿಕ ಬದುಕಿನಲ್ಲಿ ಬಿರುಕು!

ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹೊರಹೊಮ್ಮಿದವರು ಹರ್ಷಿಕಾ. ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ ಬಳಿಕ ಅವರು ಹಿಂದಿರುಗಿ ನೋಡಿಲ್ಲ. ಈ ಚಿತ್ರದ ನಟನೆಗೆ ಹರ್ಷಿಕಾಗೆ ಬೆಸ್ಟ್ ಸೈಡ್ ಆಕ್ಟರ್ ಎಂಬ ಪ್ರಶಸ್ತಿ ದೊರೆತಿತ್ತು. ಭಲೇ ಜೋಡಿ’, ‘ಉಪೇಂದ್ರ ಮತ್ತೆ ಬಾ’, ‘ಚಾರ್‌ಮಿನಾರ್’, ‘ಕಾಸಿನಸರ’ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭುವನ್‌ ಅವರು  ಕುಚ್ಚಿಕು ಕುಚ್ಚಿಕು, ರಾಂಧವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

Exit mobile version