Site icon Vistara News

Harshika Poonacha: ಹರ್ಷಿಕಾ- ಭುವನ್ ಮದುವೆ ಸಂಭ್ರಮ; ಮಿಂಚಿದ ಮದುಮಗಳು

Harshika poonacha Bhuvan Ponnappa

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ಹರ್ಷಿಕಾ ಪೂಣಚ್ಚ (Harshika poonacha) ಮತ್ತು ಭುವನ್‌ ಪೊನ್ನಪ್ಪ (Bhuvan Ponnappa) ಅವರ ಮದುವೆ ಇಂದು ಆಗಸ್ಟ್‌ 24ರಂದು ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಆಗಸ್ಟ್ 23ರಂದು ವಿರಾಜಪೇಟೆಯಲ್ಲಿ ಊರ್ಕುಡುವ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ. ಜೈ ಜಗದೀಶ್ ದಂಪತಿ, ಅನು ಪ್ರಭಾಕರ್ ದಂಪತಿ ಸೇರಿದಂತೆ ಹಲವು ಹರ್ಷಿಕಾ ಮದುವೆ ಸಂಭ್ರಮದಲ್ಲಿ ಭಾಗಿಯಾದರು.

ಇದೀಗ ಹರ್ಷಿಕಾ- ಭುವನ್ ಹೊಸ ಬಾಳಿಗೆ ಕಾಲಿಡಲು ಕ್ಷಣಗಣನೆ ಶುರುವಾಗಿದೆ. 6 ವರ್ಷದಿಂದ ಭುವನ್ ಹಾಗೂ ಹರ್ಷಿತಾ ಪೂಣಚ್ಚ ಪ್ರೀತಿಯಲ್ಲಿದ್ದರು. ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಹಾಗೂ ಬಂಧು-ಮಿತ್ರರು ಪಾಲ್ಗೊಳ್ಳಲಿದ್ದಾರೆ. ತಮ್ಮ ಪ್ರೀತಿ ಬಗ್ಗೆ ಯಾಕೆ ಇಷ್ಟೂ ವರ್ಷ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ.

ʻʻನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಎಂದು ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸುಮ್ಮನೆ ಇದ್ದೆವು. ನಮ್ಮ ಪ್ರೀತಿಯ ಬಗ್ಗೆ ಆತ್ಮೀಯರಿಗೆ ಮಾತ್ರ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಎನ್ನುವುದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಎನ್ನುವುದು ಮುಖ್ಯʼʼ ಎಂದು ಭುವನ್ ಹೇಳಿದ್ದಾರೆ.

ಇದನ್ನೂ ಓದಿ: Harshika Poonacha : ಹರ್ಷಿಕಾ ಪೂಣಚ್ಚಗೆ ಮದುವೆಗೆ ಮುನ್ನವೇ ಭರ್ಜರಿ ಗಿಫ್ಟ್‌; ಜಯಮಾಲಾಗೆ ಚಿಟ್ಟೆ ಮೇಲೆ ಯಾಕಿಷ್ಟು ಪ್ರೀತಿ?

ಮದುವೆಗೆ ಮುನ್ನವೇ ಭುವನ್‌ ಹೊಸ ಮನೆ ಪ್ರವೇಶ ಮಾಡಿದ ಹರ್ಷಿಕಾ ಪೂಣಚ್ಚ

ಇಂಟ್ರೆಸ್ಟಿಂಗ್‌ ಸಂಗತಿ ಎಂದರೆ ಹರ್ಷಿಕಾ ಪೂಣಚ್ಚ ಅವರು ಆಗಲೇ ಭುವನ್‌ ಪೂಣಚ್ಚ ಅವರ ಗೃಹ ಪ್ರವೇಶ (House Warming Ceremony) ಮಾಡಿದ್ದಾರೆ. ಭುವನ್‌ ಪೊನ್ನಪ್ಪ ಅವರು ವಿರಾಜಪೇಟೆಯ ಕಾಫಿ ತೋಟದಲ್ಲಿ ಒಂದು ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಕಾಫಿ ತೋಟದ ನಡುವೆ ಮೈದಳೆದು ನಿಂತಿರುವ ಇದು ಗೆಳತಿ ಹರ್ಷಿಕಾ ಪೂಣಚ್ಚ ಅವರಿಗಾಗಿಯೇ ಭುವನ್‌ ಕಟ್ಟಿಸಿದ ಹೊಸ ಮನೆ. ಆಗಸ್ಟ್‌ 23ರಂದು ಗೃಹ ಪ್ರವೇಶ ಕಾರ್ಯಕ್ರಮ ಕುಟುಂಬಿಕರ ಸಮ್ಮುಖದಲ್ಲಿ ಸರಳವಾಗಿ ಸಂಭ್ರಮದಿಂದ ಜರುಗಿತು.

Exit mobile version