Site icon Vistara News

Harshika Poonacha: ಮದುವೆಗೂ ಮುಂಚೆ ಗುಡ್‌ ನ್ಯೂಸ್‌ ಕೊಟ್ಟ ಹರ್ಷಿಕಾ- ಭುವನ್ ಜೋಡಿ!

Harshika Poonacha bhuvan

ನಟಿ ಹರ್ಷಿಕಾ ಪೂಣಚ್ಚ (Harshika Poonachcha) ಹಾಗೂ ಭುವನ್ ಪೊನ್ನಣ್ಣ (Bhuvan) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮುಂಚೆ ಅವರ ಫ್ಯಾನ್ಸ್‌ಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ತಮ್ಮದೇ ಸ್ವಂತ ಪ್ರೊಡಕ್ಷನ್ (harshika poonacha and bhuvan) ಹೌಸ್ ಶುರು ಮಾಡಿದ್ದಾರೆ. ಅದರ ಜತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ.

ರೆಟ್ರೊ ಶೈಲಿಯಲ್ಲಿ ಭುವನ್

ಭುವನ್ ಹಾಗೂ ಹರ್ಷಿಕಾ ಅವರ ಪ್ರೊಡಕ್ಷನ್ ಹೌಸ್ ಗೆ ‘ಭುವನಂ ಎಂಟರ್ಟೈನ್ಮೆಂಟ್’ ಎಂದು ಹೆಸರಿಡಲಾಗಿದ್ದು ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ‘ಭುವನಂ ಶ್ರೇಷ್ಠಮ್ ಗಚ್ಚಾಮಿ’ ಎಂದು ಹೆಸರಿಡಲಾಗಿದೆ. ಬಾಕ್ಸರ್‌ ಕಥೆಯಾಗಿದ್ದು ಆರು ವರ್ಷದ ಹಿಂದೆಯೇ ಈ ರೀತಿಯ ಸಿನಿಮಾ ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭುವನ್​ ಪೊನ್ನಣ್ಣ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್​ ಇರಲಿದೆ. ಈ ಚಿತ್ರದಲ್ಲಿ ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು.

ಹರ್ಷಿಕಾ ಇದೀಗ ನಿರ್ಮಾಪಕಿ!

ಈ ಖುಷಿಯ ಸುದ್ದಿಯನ್ನು ಕೂಡ ಭುವನ್ ಹಾಗೂ ಹರ್ಷಿಕಾ ಮಾಧ್ಯಮ ಮಿತ್ರರ ಜತೆ ಹಂಚಿಕೊಂಡಿದ್ದಾರೆ. ಮದುವೆ ಸಮಾರಂಭ ಎಲ್ಲವನ್ನು ಮುಗಿಸಿಕೊಂಡು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ ಚಿತ್ರದಲ್ಲಿ ಭುವನ್ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಹರ್ಷಿಕಾ ನಿರ್ಮಾಪಕಿಯಾಗಿ ಮೊದಲ‌ ಬಾರಿಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಭುವನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Harshika Poonacha: ಯಾರಿಗೆಲ್ಲ ವಿವಾಹ ಆಮಂತ್ರಣ ನೀಡಿದ್ರು ಹರ್ಷಿಕಾ-ಭುವನ್?

ಆಗಸ್ಟ್‌ 24ರಂದು ಮದುವೆ

ಚಂದನವನದ ಈ ಜೋಡಿಯ ವಿವಾಹ ಆಗಸ್ಟ್ 23 ಮತ್ತು 24 ರಂದು ಹರ್ಷಿಕಾ ಅವರ ಹುಟ್ಟೂರಾದ ವಿರಾಜಪೇಟೆಯ ಅಮ್ಮತ್ತಿಯಲ್ಲಿ ಕೊಡವ ಸಂಪ್ರದಾಯದಂತೆ ನಡೆಯಲಿದೆ. ಈಗಾಗಲೇ ಲಗ್ನಪತ್ರಿಕೆಯನ್ನು ಮುದ್ರಿಸಲಾಗಿದ್ದು, ಚಂದನವನದ ತಾರೆಗಳು ಸೇರಿದಂತೆ ಬಹುತೇಕ ಗಣ್ಯರಿಗೆ ಲಗ್ನ ಪತ್ರಿಕೆಯನ್ನೂ ಈ ಜೋಡಿ ನೀಡಿದೆ. 6 ವರ್ಷದಿಂದ ಭುವನ್ ಹಾಗೂ ಹರ್ಷಿತಾ ಪೂಣಚ್ಚ ಪ್ರೀತಿಯಲ್ಲಿದ್ದರು. ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಹಾಗೂ ಬಂಧು-ಮಿತ್ರರು ಪಾಲ್ಗೊಳ್ಳಲಿದ್ದಾರೆ.

Exit mobile version