Site icon Vistara News

Head Bush Movie | ನಟ ರಾಕ್ಷಸನ ಭೂಗತ ಲೋಕದ ಅನಾವರಣ: ಹೆಡ್‌ ಬುಷ್‌ ಸಿನಿಮಾ ಟ್ರೈಲರ್‌ ಔಟ್‌!

Head Bush Movie

ಬೆಂಗಳೂರು : ಭೂಗತ ಲೋಕದಲ್ಲಿ ಮಿಂಚಿದ ಡಾನ್‌ ಜಯರಾಜ್‌ ಪಾತ್ರಕ್ಕೆ ಡಾಲಿ ಧನಂಜಯ್‌ ಜೀವ ತುಂಬಿದ್ದು, ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಹೆಡ್‌ ಬುಷ್‌ ಸಿನಿಮಾದ ಟ್ರೈಲರ್‌ (Head Bush Movie) ಭಾರಿ ವೀಕ್ಷಣೆ ಕಂಡಿದೆ. ಅಕ್ಟೋಬರ್‌ 16ರಂದು ದಾವಣೆಗೆರೆಯಲ್ಲಿ ಪ್ರಿ ರಿಲೀಸ್‌ ಇವೆಂಟ್‌ ಹಮ್ಮಿಕೊಂಡಿದ್ದ ಚಿತ್ರತಂಡ ಸಂಜೆ ಚಿತ್ರದ ಟ್ರೈಲರ್‌ ಬಿಡುಗಡೆಗೊಳಿಸದೆ. ಅಕ್ಟೋಬರ್‌ 21ಕ್ಕೆ ಸಿನಿಮಾ ಥಿಯೇಟರ್‌ಗಳಲ್ಲಿ ಲಗ್ಗೆ ಇಡುತ್ತಿದೆ.

ಟ್ರೈಲರ್‌ ನೋಡುವಾಗ ಜಯರಾಜ್‌ ಪಾತ್ರಕ್ಕೆ ಜೀವ ತುಂಬಿದ ನಟನೆ ಮಾಡಿದ್ದಾರೆ ಧನಂಜಯ್‌. ಈ ಚಿತ್ರವನ್ನು ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಿಗ್‌ ಬಾಸ್‌ ವೇದಿಕೆಯಲ್ಲಿ ಡಾಲಿ ಕಿಚ್ಚ ಜತೆ ಹೆಡ್‌ ಬುಷ್‌ ಎಂದರೆ ಹೆಡ್‌ ಮತ್ತು ಟೇಲ್‌ ಎಂದು ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿದ್ದರು.

ಆಯಾ ಪಾತ್ರಕ್ಕೆ ತಕ್ಕಂತೆ ರಗಡ್‌ ಲುಕ್‌
ಹೆಡ್ ಬುಷ್ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳು ಇವೆ. ಆದರೆ ಆಯಾ ಪಾತ್ರಗಳ ಫಸ್ಟ್ ಲುಕ್​ ಅನ್ನು ಚಿತ್ರ ತಂಡ ಒಂದೊಂದಾಗಿಯೇ ರಿಲೀಸ್ ಮಾಡಿದೆ. ಡಾಲಿ ಧನಂಜಯ್‌ ಡಾನ್ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ್ ಅಭಿನಯದ ಈ ಚಿತ್ರ ರೆಟ್ರೋ ಕಾಲದ ಕಥೆಯೇ ಆಗಿದೆ. ಇದಕ್ಕೆ ತಕ್ಕನಾಗಿಯೇ ಕಲಾವಿದರ ಕಾಸ್ಟ್ಯೂಮ್‌ಗಳಿವೆ.

ಇದನ್ನೂ ಓದಿ | Head Bush | ನಟ ರಾಕ್ಷಸ ಡಾಲಿ ಧನಂಜಯ್ ಅಬ್ಬರ ಶುರು!

ಲೂಸ್‌ ಮಾದ ಯೋಗಿ ಹೆಡ್‌ ಬುಷ್‌ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಘು ಮುಖರ್ಜಿ ಈ ಚಿತ್ರದಲ್ಲಿ MDN ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಟಿ ಶ್ರುತಿ ಹರಿಹರನ್ ಹೆಡ್ ಬುಷ್ ಚಿತ್ರದಲ್ಲಿ ರತ್ನಪ್ರಭಾ ಪಾತ್ರವನ್ನ ನಿಭಾಯಿಸಿದ್ದಾರೆ. ಇದಕ್ಕಾಗಿಯೇ ಶ್ರುತಿ ಹರಿಹರನ್ ಸಂಪೂರ್ಣ ಬದಲಾಗಿದ್ದಾರೆ.

ಅಗ್ನಿ ಶ್ರೀಧರ್ ಪುಸ್ತಕ ಆಧರಿಸಿದ ಸಿನಿಮಾ ಇದು!
ನಿರ್ದೇಶಕ ಶೂನ್ಯ ನಿರ್ದೇಶಿಸಿದ್ದಾರೆ. 1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಈ ಚಿತ್ರದಲ್ಲಿ ಪರಿಚಯಿಸಲಾಗುತ್ತಿದೆ. ಅಗ್ನಿ ಶ್ರೀಧರ್ ‘ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ನಿರ್ದೇಶಕ ಶೂನ್ಯ ಈ ಮೊದಲು ಸಿಂಪಲ್ ಸ್ಟಾರ್‌ ರಕ್ಷಿತ್‌ ಶೆಟ್ಟಿ ಜತೆ ಅಸೋಸಿಯೇಟ್‌ ಆಗಿದ್ದರು. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನವಿದೆ. ಸುನೊಜ್‌ ವೇಲಾಯಧನ್‌ ಕ್ಯಾಮೆರಾ, ಬಾದಲ್‌ ನಂಜುಂಡಸ್ವಾಮಿ ಕಲೆ ಚಿತ್ರಕ್ಕಿದೆ.

ದೊಡ್ಡ ತಾರಾಬಳಗವೇ ಇದೆ
ʻಹೆಡ್‌ ಬುಷ್ʼ ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ. ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ‘ಆರ್ ಎಕ್ಸ್ 100’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಉಳಿದಂತೆ ಕ್ರೇಜಿಸ್ಟಾರ್‌ ರವಿಚಂದ್ರನ್‌, ಲೂಸ್‌ ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್‌, ಶ್ರತಿ ಹರಿಹರನ್‌, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಇದನ್ನೂ ಓದಿ | Head Bush | ಬೆಣ್ಣೆ ನಗರಿಯಲ್ಲಿ ʻಹೆಡ್‌ ಬುಷ್‌ʼ ಪ್ರಿ ರಿಲೀಸ್ ಇವೆಂಟ್: ಪ್ರಚಾರಕ್ಕೆ ಡಾಲಿ ಧನಂಜಯ್ ರಣಕಹಳೆ!

Exit mobile version