Site icon Vistara News

Head Bush | ನಟ ರಾಕ್ಷಸ ಡಾಲಿ ಧನಂಜಯ್ ಅಬ್ಬರ ಶುರು!

Head Bush

ಬೆಂಗಳೂರು: ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ಸದ್ದು ಮಾಡಲು ಆರಂಭಿಸಿವೆ. ಇದೇ ಸುವರ್ಣ ಸಂದರ್ಭದಲ್ಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಹೆಡ್ ಬುಷ್’ (Head Bush) ಚಿತ್ರ ಕೂಡ ಬಿಡುಗಡೆ​ಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರೆಟ್ರೋ ರೌಡಿಗಳೆಲ್ಲ ಇಂದು ಕಹಳೆ ಊದಿ ರಾಜಧಾನಿಯಲ್ಲಿ ‘ಹೆಡ್ ಬುಷ್’ ಸಿನಿಮಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಅಭಿಮಾನಿಗಳಿಂದ ‘ನಟ ರಾಕ್ಷಸ’ ಬಿರುದು ಪಡೆದ ಡಾಲಿ ಧನಂಜಯ್ ಹೆಡ್ ಬುಷ್ ಮೂಲಕ ಬೆಂಗಳೂರಿನ ಭೂಗತ ಲೋಕದ ದೊರೆಯಾಗಿ ಮೆರೆಯಲಿದ್ದಾರೆ. ಬೆಂಗಳೂರಿನ ಭೂಗತ ಪಾತಕಿ ಡಾನ್ ಜಯರಾಜ್ ​ಪಾತ್ರಕ್ಕೆ ಡಾಲಿ ಜೀವ ತುಂಬಿದ್ದು, ದೇಶಾದ್ಯಂತ ಧನಂಜಯ್ ಫ್ಯಾನ್ಸ್ ಸಿನಿಮಾಗೆ ಕಾಯುತ್ತಿದ್ದಾರೆ. ಅಕ್ಟೋಬರ್ 21ಕ್ಕೆ ‘ಹೆಡ್ ಬುಷ್’ ರಿಲೀಸ್ ಆಗಲಿದೆ. ಮಂಗಳವಾರ (ಸೆ.೨೦)ದಿಂದಲೇ ಚಿತ್ರದ ಪ್ರಚಾರ ಕಾರ್ಯಕ್ಕೆ ಸಿನಿಮಾ ತಂಡ ಚಾಲನೆ ನೀಡಿದೆ. ‘ಹೆಡ್ ಬುಷ್’ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಹಲವು ನಟರು ಭೂಗತ ಪಾತಕಿಗಳ ಪಾತ್ರದಲ್ಲಿ ನಟಿಸಿದ್ದಾರೆ. ರೆಟ್ರೋ ಕಾಲದ ರೌಡಿ ಗೆಟಪ್​ನಲ್ಲೇ ಇಂದು ಸ್ಯಾಂಡಲ್​ವುಡ್ ನಟರು ‘ಹೆಡ್ ಬುಷ್’ ಸಿನಿಮಾ ಪ್ರಚಾರಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: Once Upon a Time In Jamaligudda | ಜಮಾಲಿಗುಡ್ಡ ಮೆಲೋಡಿ ಹಾಡಿನ ಪ್ರೋಮೊ ಮಾಡ್ತಿದೆ ಮೋಡಿ!

ಡಾಲಿ ಚಿತ್ರ ಅನೌನ್ಸ್
‘ಟಗರು’ ಹಿಟ್ ಆಗಿದ್ದೇ ಆಗಿದ್ದು, 2018ರ ನಂತರ ಡಾಲಿ ಧನಂಜಯ್​ಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಅದರಲ್ಲೂ ಡಾಲಿ ಅಭಿನಯದ ಸಾಲು ಸಾಲು ಸಿನಿಮಾಗಳು ಹಿಟ್, ಬ್ಲಾಕ್ ಬಸ್ಟರ್ ಲಿಸ್ಟ್​ ಸೇರಿದೆ. ಹೀಗಾಗಿ ಮತ್ತಷ್ಟು ಪ್ಯಾನ್ ಇಂಡಿಯಾ ಚಿತ್ರಗಳು ಡಾಲಿ ಧನಂಜಯ್ ಕೈಸೇರುತ್ತಿವೆ. ಈಗ ಅಂತಹದ್ದೇ ಮತ್ತೊಂದು ಸಿನಿಮಾಗೆ ಧನಂಜಯ್ ಸಿದ್ಧರಾಗಿದ್ದು, ಡಾಲಿಯ 26ನೇ ಸಿನಿಮಾ ಮಂಗಳವಾರ ಅನೌನ್ಸ್ ಆಗಿದೆ.

ನಟ ಡಾಲಿ ಧನಂಜಯ್ ಅಭಿನಯದ ಹೊಸ ಚಿತ್ರದ ಪೋಸ್ಟರ್.

ಡಾಲಿ ಫುಲ್ ಬ್ಯುಸಿ
ಡಾಲಿ ಅಭಿನಯದ ಮಾನ್ಸೂನ್ ರಾಗ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ತೋತಾಪುರಿ, ಹೆಡ್ ಬುಷ್ ರಿಲೀಸ್​ಗೆ ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಶೂಟಿಂಗ್​ನಲ್ಲೂ ಡಾಲಿ ಬ್ಯುಸಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ 26ನೇ ಚಿತ್ರಕ್ಕೆ ಸಿದ್ಧರಾಗಿದ್ದಾರೆ ಧನಂಜಯ್. ಕನ್ನಡ & ತೆಲುಗು ಭಾಷೆಯಲ್ಲಿ ತಯಾರಾಗಲಿರುವ ಚಿತ್ರಕ್ಕೆ ‘ನಟ ರಾಕ್ಷಸ’ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಧನಂಜಯ್ ಜೊತೆಗೆ ತೆಲುಗು ನಟ ಸತ್ಯದೇವ್ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ಇದು ನಟ ಸತ್ಯದೇವ್ ಅವರಿಗೂ 26ನೇ ಚಿತ್ರ. ಹೀಗಾಗಿ ಎರಡೂ ರಾಜ್ಯಗಳಲ್ಲೂ ಹೊಸ ಸಿನಿಮಾ ಹೈಪ್ ಕ್ರಿಯೇಟ್ ಮಾಡೋದು ಪಕ್ಕಾ ಅಂತಿದ್ದಾರೆ ಡಾಲಿ ಹಾಗೂ ಸತ್ಯದೇವ್ ಅಭಿಮಾನಿಗಳು.

ಒಟ್ಟಿನಲ್ಲಿ ಡಾಲಿ ಮತ್ತೆ ಸ್ಯಾಂಡಲ್​ವುಡ್ & ಟಾಲಿವುಡ್​ನಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದಾರೆ. ತೆಲುಗಿನಲ್ಲಿ ಪೆಂಗ್ವಿನ್ ಡೈರೆಕ್ಷನ್ ಮಾಡಿದ್ದ ಈಶ್ವರ್ ಕಾರ್ತಿಕ್ ಹೊಸ ಸಿನಿಮಾಗೆ ಸಿದ್ಧರಾಗಿದ್ದಾರೆ. ಡಾಲಿ ಹಾಗೂ ಸತ್ಯದೇವ್ ಬಣ್ಣ ಹಚ್ಚಲಿರುವ ಸಿನಿಮಾಗೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾಹಂದರದ ಹೊಸ ಸಿನಿಮಾಗೆ ‘ಟಗರು’ ಚಿತ್ರದ ಖ್ಯಾತಿಯ ಚರಣ್ ರಾಜ್ ಸಂಗೀತವಿದೆ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ ಚಿತ್ರಕ್ಕಿದ್ದು, ಚಿತ್ರತಂಡ ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲಿದೆ.

ಇದನ್ನೂ ಓದಿ: Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

Exit mobile version