Site icon Vistara News

Head Bush | ಬೆಣ್ಣೆ ನಗರಿಯಲ್ಲಿ ʻಹೆಡ್‌ ಬುಷ್‌ʼ ಪ್ರಿ ರಿಲೀಸ್ ಇವೆಂಟ್: ಪ್ರಚಾರಕ್ಕೆ ಡಾಲಿ ಧನಂಜಯ್ ರಣಕಹಳೆ!

Head Bush

ಬೆಂಗಳೂರು : ಸ್ಯಾಂಡಲ್‌ವುಡ್‌ನ ನಟ ಧನಂಜಯ್‌ ನಟನೆ ಹಾಗೂ ನಿರ್ಮಾಣದ ಬೆಂಗಳೂರು ಭೂಗತಲೋಕದ ಡಾನ್‌ ಜಯರಾಜ್‌ ಕುರಿತ ‘ಹೆಡ್‌ ಬುಷ್‌’ (Head Bush)ಸಿನಿಮಾ ಅಕ್ಟೋಬರ್‌ 21ಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಬೆಣ್ಣೆ ನಗರಿ ದಾವಣೆಗೆರೆಯಲ್ಲಿ ಅದ್ಧೂರಿಯಾಗಿ ಪ್ರಿ ರಿಲೀಸ್‌ ಇವೆಂಟ್‌ ಕಾರ್ಯಕ್ರಮ ಅಕ್ಟೋಬರ್‌ 16ರಂದು ನಡೆಯಲಿದೆ.

ಬೆಂಗಳೂರಿನಿಂದ ಚಿತ್ರತಂಡದ ಸವಾರಿ ಈಗಾಗಲೇ ಹೊರಟಿದೆ. ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಡಾಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಅತಿಥಿಗಳಾಗಿ ರಮ್ಯಾ, ರಚಿತಾ ರಾಮ್ ಆಗಮಿಸಿಲಿದ್ದಾರೆ. ಅಗ್ನಿ ಶ್ರೀಧರ್‌ ನಿರ್ದೇಶನದ ಈ ಚಿತ್ರ ಸಂಜೆ 5.30ಕ್ಕೆ ಎಂಬಿಎ ಕಾಲೇಜು ಮೈದಾನದಲ್ಲಿ ಪ್ರಿ ರಿಲೀಸ್‌ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಲಕ್ಷಾಂತರ ಫ್ಯಾನ್ಸ್ ಆಗಮಿಸುವ ನಿರೀಕ್ಷೆ ಇದ್ದು, ಜನರನ್ನ ನಿಭಾಯಿಸಲು ದಾವಣಗೆರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ | Head Bush | ನಟ ರಾಕ್ಷಸ ಡಾಲಿ ಧನಂಜಯ್ ಅಬ್ಬರ ಶುರು!

ಹೆಡ್ ಬುಷ್ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳು ಇವೆ. ಆದರೆ ಆಯಾ ಪಾತ್ರಗಳ ಫಸ್ಟ್ ಲುಕ್​ ಅನ್ನ ಚಿತ್ರ ತಂಡ ಒಂದೊಂದಾಗಿಯೇ ರಿಲೀಸ್ ಮಾಡಿದೆ. ಡಾಲಿ ಧನಂಜಯ್‌ ಡಾನ್ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ್ ಅಭಿನಯದ ಈ ಚಿತ್ರ ರೆಟ್ರೋ ಕಾಲದ ಕಥೆಯೇ ಆಗಿದೆ. ಇದಕ್ಕೆ ತಕ್ಕನಾಗಿಯೇ ಕಲಾವಿದರ ಕಾಸ್ಟ್ಯೂಮ್‌ಗಳಿವೆ.

ಲೂಸ್‌ ಮಾದ ಯೋಗಿ ಹೆಡ್‌ ಬುಷ್‌ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಘು ಮುಖರ್ಜಿ ಈ ಚಿತ್ರದಲ್ಲಿ MDN ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಟಿ ಶ್ರುತಿ ಹರಿಹರನ್ ಹೆಡ್ ಬುಷ್ ಚಿತ್ರದಲ್ಲಿ ರತ್ನಪ್ರಭಾ ಪಾತ್ರವನ್ನ ನಿಭಾಯಿಸಿದ್ದಾರೆ. ಇದಕ್ಕಾಗಿಯೇ ಶ್ರುತಿ ಹರಿಹರನ್ ಸಂಪೂರ್ಣ ಬದಲಾಗಿದ್ದಾರೆ.

Head Bush

ಇದನ್ನೂ ಓದಿ | Head Bush | ಬೆಂಗಳೂರನ್ನು ನಡುಗಿಸಲು ಮತ್ತೊಮ್ಮೆ ಬರ್ತಿದ್ದಾನೆ ಡಾನ್ ಜಯರಾಜ್!

Exit mobile version