Site icon Vistara News

Hema Malini : ಪತಿ ಧರ್ಮೇಂದ್ರರ ಮೊದಲ ಪತ್ನಿಯ ಮಗನ ಮದುವೆಗೆ ಹೋಗದ ಹೇಮಾ ಮಾಲಿನಿ!

Hema Malini and dharmendra prasad

#image_title

ಮುಂಬೈ: ಬಾಲಿವುಡ್‌ ನಟಿ ಹೇಮಾ ಮಾಲಿನಿ (Hema Malini) ಅವರದ್ದು ವಿಶೇಷವಾದ ಲವ್‌ ಸ್ಟೋರಿ. ಆಗಿನ ಪ್ರಸಿದ್ಧ ನಟ ಧರ್ಮೇಂದ್ರ ಪ್ರಸಾದ್‌ಗೆ ಮದುವೆಯಾಗಿದೆ ಎನ್ನುವುದು ಗೊತ್ತಿದ್ದರೂ ಅವರು ಅವರೊಂದಿಗೆ ಪ್ರೀತಿಯಲ್ಲಿ ಬಿದ್ದವರು. ತಮ್ಮ ಲವ್‌ ಸ್ಟೋರಿ ಕುರಿತಾಗಿ ಮಾಧ್ಯಮಮೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಹೇಮಾ ಮಾಲಿನಿ ಅವರು ಧರ್ಮೇಂದ್ರ ಪ್ರಸಾದ್‌ ಅವರನ್ನು ಮೊದಲನೇ ಬಾರಿಗೆ ಭೇಟಿಯಾದಾಗ ಈ ವ್ಯಕ್ತಿ ತನ್ನ ಬದುಕಿನ ಸಂಗಾತಿ ಆಗುತ್ತಾರೆ ಎಂದು ಊಹೆಯನ್ನೂ ಮಾಡಿಕೊಂಡಿರಲಿಲ್ಲವಂತೆ. ಆದರೆ ಅವರಿಬ್ಬರ ಮಧ್ಯೆ ಪ್ರೀತಿಯ ಮೊಳಕೆಯೊಡೆದಿದೆ. ಅದಾಗಲೇ ಧರ್ಮೇಂದ್ರ ಪ್ರಸಾದ್‌ ಅವರು ಪ್ರಕಾಶ್‌ ಕೌರ್‌ ಅವರನ್ನು ಮದುವೆಯಾಗಿದ್ದರು. ಅವರಿಗೆ ಮಕ್ಕಳೂ ಇದ್ದರು. ಆದರೂ ಅದನ್ಯಾವುದನ್ನೂ ಲೆಕ್ಕಿಸದೆ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಪ್ರೀತಿಯಲ್ಲಿ ಬಿದ್ದರು.

ಇದನ್ನೂ ಓದಿ: Karan Deol-Drisha Wedding: ಅದ್ಧೂರಿಯಾಗಿ ನೆರವೇರಿತು ಸನ್ನಿ ಡಿಯೋಲ್‌ ಮಗನ ಮದುವೆ!
ಈ ವಿಚಾರ ತಿಳಿದ ತಕ್ಷಣ ಹೇಮಾ ಮಾಲಿನಿ ಅವರ ತಂದೆ ಬಹಳಷ್ಟು ಬೇಸರಗೊಂಡಿದ್ದರಂತೆ. ಮದುವೆಯಾಗಿರುವ ವ್ಯಕ್ತಿಯೊಂದಿಗೆ ನನ್ನ ಮಗಳ ಮದುವೆ ಮಾಡಬೇಕೇ ಎಂದು ಚಿಂತಿಸಿದ್ದರಂತೆ. ಈ ಎಲ್ಲ ಬೇಸರಗಳ ನಡುವೆ ಧರ್ಮೇಂದ್ರ ಅವರು 1980ರಲ್ಲಿ ಪ್ರಕಾಶ್‌ ಕೌರ್‌ಗೆ ವಿಚ್ಛೇದನ ಕೊಡದೆಯೇ ಹೇಮಾ ಮಾಲಿನಿ ಅವರನ್ನು ಮದುವೆಯಾದರು.

ಅಂದ ಹಾಗೆ ಇತ್ತೀಚೆಗೆ ಧರ್ಮೇಂದ್ರ ಮತ್ತು ಪ್ರಕಾಶ್‌ ಕೌರ್‌ ಅವರ ಮಗ ಸನ್ನಿ ಡಿಯೋಲ್‌ ಅವರ ಪುತ್ರ ಕರಣ್‌ ಡಿಯೋಲ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದ್ರಿಷಾ ಆಚಾರ್ಯ ಅವರೊಂದಿಗೆ ಅವರ ವಿವಾಹ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿಯಾಗಲೀ ಅಥವಾ ಅವರ ಇಬ್ಬರು ಹೆಣ್ಣು ಮಕ್ಕಳಾದ ಈಶಾ ಮತ್ತು ಅಹನಾ ಆಗಲಿ ಹಾಜರಾಗಿಲ್ಲ.

ಇದನ್ನೂ ಓದಿ: Rishab Shetty: ನಾನು ತುಂಬಾ ಅದೃಷ್ಟಶಾಲಿ ಎಂದ ರಿಷಬ್‌ ಪತ್ನಿ ಪ್ರಗತಿ ಶೆಟ್ಟಿ!
ಮದುವೆಯ ನಂತರ ದೊಡ್ಡದೊಂದು ರಿಸೆಪ್ಶನ್‌ ಅನ್ನೂ ನಡೆಸಲಾಗಿದೆ. ಅದರಲ್ಲಿ ಬಾಲಿವುಡ್‌ನ ಎಲ್ಲ ಸೆಲೆಬ್ರಿಟಿಗಳು ಭಾಗಿಯಾಗಿದ್ದರಾದರೂ ಹೇಮಾ ಮಾಲಿನಿ ಕುಟುಂಬ ಬಂದಿರಲಿಲ್ಲ. ನವ ದಂಪತಿಗೆ ಈಶಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದರಷ್ಟೇ.

Exit mobile version