Site icon Vistara News

Shiva Rajkumar: ಹೇಮಂತ್‌ ರಾವ್‌ ನಿರ್ದೇಶನದ ʻಶಿವಣ್ಣʼನ ಸಿನಿಮಾ ಹೇಗಿರಲಿದೆ?

Hemanth Rao action Cut For Shivanna Film

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ (Rakshit Shetty) ಹಾಗೂ ರುಕ್ಮಿಣಿ ವಸಂತ್‌ (rukmini vasanth) ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ (SSE SideB Twitter Review) ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಸಕ್ಸಸ್ ಕಂಡಿತ್ತು. 2023ರ ನವೆಂಬರ್‌ 17ರಂದು ಸೈಡ್‌ ಬಿ ಸಿನಿಮಾ ರಿಲೀಸ್‌ ಆಗಿತ್ತು. ವಿಶೇಷ ಅಂದರೆ ಸೈಡ್‌ ಬಿ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಿತ್ತು. ಇದೀಗ ಸೈಡ್‌ ಬಿ ‘ಅಮೆಜಾನ್​ ಪ್ರೈಂ ವಿಡಿಯೊ’ (Amazon Prime Video) ಮೂಲಕ ಒಟಿಟಿಗೆ ಲಗ್ಗೆ ಇಟ್ಟಿದೆ. ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradache Ello) ಸಿನಿಮಾ ನಿರ್ದೇಶಕ ಹೇಮಂತ್ ರಾವ್​ ಇದೀಗ್‌ ಮತ್ತೆ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ಇದೀಗ ಹೇಮಂತ್‌ ರಾವ್‌ ಅವರು ಶಿವರಾಜ್ ಕುಮಾರ್ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೇಮಂತ್‌ ರಾವ್‌ ಅವರು `ಸಪ್ತಸಾಗರ’ದಲ್ಲಿ ಲವ್‌ ಸ್ಟೋರಿಯನ್ನು ಹೇಳಿದ್ದರು. ಆದರೀಗ ರೊಮ್ಯಾಂಟಿಕ್ ಅಥವಾ ಲವ್ ಸ್ಟೋರಿ ಸಿನಿಮಾಗಳಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಳ್ಳುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮೂಲಗಳ ಪ್ರಕಾರ ಶಿವಣ್ಣ ಅವರಿಗೆ ಹೇಮಂತ್‌ ಅವರು ಕತೆಯನ್ನು ಈಗಾಗಲೇ ಹೇಳಿದ್ದು, ಸಿನಿಮಾ ಮಾಡಲು ಒಪ್ಪಿಗೆ ಸಹ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಂದರ್ಶನವೊಂದರಲ್ಲಿ ಹೇಮಂತ್‌ ಅವರು ತಮಗೆ ಆ್ಯಕ್ಷನ್‌ ಸಿನಿಮಾ ಇಷ್ಟ ಎಂದು ಹೇಳಿದ್ದರು.

ಇದನ್ನೂ ಓದಿ: Shiva Rajkumar: ಹೊಸ ವರ್ಷಕ್ಕೆ ʻಭಟ್ರʼ ಬಿಗ್‌ ಅಪ್‌ಡೇಟ್‌; ಶಿವಣ್ಣ- ಪ್ರಭುದೇವ ಫ್ಯಾನ್ಸ್‌ ಫುಲ್‌ ಖುಷ್‌!

ಶಿವಣ್ಣ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಭೈರತಿ ರಣಗಲ್’ ಬಿಡುಗಡೆಗೆ ಸಜ್ಜಾಗಿದೆ. ‘ಕರಟಕ-ಧಮನಕ’ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಸಿನಿಮಾ ಶಿವರಾತ್ರಿ ದಿನದಂದು ರಿಲೀಸ್ (Release)ಆಗಲಿದೆ. ಮಾರ್ಚ್ 8 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಿರುವ, ಯೋಗರಾಜ್ ಭಟ್ (Yogaraj Bhat) ನಿರ್ದೇಶನವಿದೆ. ದಿನಕರ್ ತೂಗುದೀಪ ಜತೆಗೆ ಸಿನಿಮಾ ಘೋಷಣೆ ಆಗಿದೆ. ‘ಘೋಸ್ಟ್ 2’ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ತಮಿಳು ಸಿನಿಮಾ ಜತೆಗೆ ರಾಮ್ ಚರಣ್ ಜತೆಗೆ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ.

Exit mobile version