ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ (Vani Jairam Passes Away) ಅವರು ಶನಿವಾರ (ಫೆಬ್ರವರಿ4ರಂದು) ಚೆನ್ನೈನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. 78 ವರ್ಷದ ಸ್ವರ ಸಾಮ್ರಾಜ್ಞಿ 19 ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. 600ಕ್ಕೂ ಹೆಚ್ಚು ಕನ್ನಡ ಹಾಡುಗಳಿಗೆ ಕಂಠ ಸಿರಿ ನೀಡಿದ್ದಾರೆ. ಅವುಗಳಲ್ಲಿ ಸೂಪರ್ ಹಿಟ್ ಆಗಿರುವ 25 ಹಾಡುಗಳ ಪಟ್ಟಿ ಇಲ್ಲಿದೆ. ಯಾವ ಚಿತ್ರದ ಹಾಡು, ಯಾರ ಜತೆ ಹಾಡಿದರು ಎಂಬ ಮಾಹಿತಿಯನ್ನೂ ನೀಡಲಾಗಿದೆ.
1 ಇದೇ ರಾಗದಲ್ಲಿ ಇದೆ ತಾಳದಲ್ಲಿ, ರಾಧೆಗಾಗಿ ಹಾಡಿದಾ ನೀಲ ಮೇಘ ಶ್ಯಾಮ ( ಸಿನಿಮಾ- ಶ್ರಾವಣ ಬಂತು, ಡ್ಯುಯೆಟ್- ಡಾ. ರಾಜ್ಕುಮಾರ್, ವರ್ಷ- 1984)
2 ಇವ ಯಾವ ಸೀಮೆ ಗಂಡು ಕಾಣಮ್ಮೋ, ಇವನಿಗೆ ನನ್ನ ಸೀರೆ ಮ್ಯಾಲ ಯಾಕ ಕಣ್ಣಮ್ಮೋ, ಆ ನೋಟವೊಂದು ಬಾಣದಂಗಮ್ಮೋ (ಸಿನಿಮಾ-ರಣರಂಗ, ಡ್ಯುಯೆಟ್- ಎಸ್ಪಿ ಬಾಲಸುಬ್ರಹ್ಮಣ್ಯ, ವರ್ಷ-1988)
3 ಓ, ಪ್ರಿಯತಮಾ, ಓ, ಪ್ರಿಯತಮಾ… ಪ್ರಿಯತಮಾ, ಕರುಣೆಯಾ ತೋರೆಯಾ, ಕರುಣೆಯಾ ತೋರೆಯಾ, ಕರುಣೆಯಾ ತೋರೆಯಾ (ಸಿನಿಮಾ- ಕವಿರತ್ನ ಕಾಳಿದಾಸ, ಡ್ಯುಯೆಟ್- ಡಾ. ರಾಜ್ಕುಮಾರ್- ವರ್ಷ- 1983)
4 ಮುತ್ತೇ ಪ್ರಥಮ.. ಅದುವೇ ಜಗದ ನಿಯಮ.. ಮದುವೇ ಪ್ರಥಮ.. ಅದುವೇ ಜನರ ನಿಯಮ (ಸಿನಿಮಾ- ಯುಗ ಪುರುಷ, ಡ್ಯುಯೆಟ್- ಎಸ್ ಪಿ ಬಾಲಸುಬ್ರಹ್ಮಣ್ಯ, ವರ್ಷ- 1989)
5 ಆ ಮೋಡ ಬಾನಲ್ಲಿ ತೇಲಾಡುತಾ….. ನಿನಗಾಗಿ ನಾ ಬಂದೆ ನೋಡೆನ್ನುತಾ….. ನಲ್ಲಾ… ನಿನ್ನಾ… ಸಂದೇಶವ
ನನಗೇ ಹೇಳಿದೆ, ಆ ಮೋಡ ಬಾನಲ್ಲಿ ತೇಲಾಡುತಾ (ಸಿನಿಮಾ- ಧ್ರುವತಾರೆ- ಡ್ಯುಯೆಟ್- ಡಾ. ರಾಜ್ಕುಮಾರ್, ವರ್ಷ- 1985)
6 ಹಾಲು ಜೇನು ಸೇರಿದ ಹಂಗೆ ಪ್ರೀತಿ ಸಂಸಾರ, ಆ, ಬಾಳೇ ಬಂಗಾರ, ಗಂಡ, ಹೆಂಡ್ರು ಎರಡು ಕಣ್ಣು ಮನೆಗೆ ಆಧಾರ ( ಸಿನಿಮಾ- ಸ್ವಾಭಿಮಾನ, ಸೋಲೊ, ವರ್ಷ-1985)
7 ನೀನು ಹತ್ತಿರವಿದ್ದಿದ್ದರೆ, ಏನು ಚೆಂದವೋ.. ನನ್ನ ಮುತ್ತಿಗೆ ಸಿಕ್ಕಿದರೆ ಆಹಾ ಏನು ಅಂದವೋ ( ಸಿನಿಮಾ- ಅವಳೇ ನನ್ನ ಹೆಂಡತಿ, ಡ್ಯುಯೆಟ್- ಎಸ್ ಪಿ ಬಾಲಸುಬ್ರಹ್ಮಣ್ಯ, ವರ್ಷ- 1988)
8 ಸೋಬಾನ ಸೋಬಾನ ಸೋಬಾನವೇ. ಸೋಬಾನ ಸೋಬಾನ ಸೋಬಾನವೇ.. ಚಂದದ ಹಸೆ ಮೇಲೆ ಸುಂದರ ಕುಳಿತಾನೆ (ಸಿನಿಮಾ- ಭೂತಯ್ಯನ ಮಗ ಅಯ್ಯು, ಕೋರಸ್- ವರ್ಷ 1974)
9 ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ, ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ (ಸಿನಿಮಾ- ಅನುಭವ, ಸೋಲೊ, ವರ್ಷ- 1984)
10 ಹಾಡು ಹಳೆಯದಾದರೇನು ಭಾವ ನವನವೀನ, ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ (ನಿಮಾ- ಮಾನಸ ಸರೋವರ, ವರ್ಷ-1982)
11 ಆ… ದೇವರೆ ನುಡಿದ ಮೊದಲ ನುಡಿ, ಪ್ರೇಮ ಪ್ರೇಮ ಪ್ರೇಮವೆಂಬ ಹೊನ್ನುಡಿ (ಸಿನಿಮಾ- ಬಿಳಿ ಹೆಂಡ್ತಿ, ಸೋಲೊ, ವರ್ಷ- 1975)
12 ಸವಿನೆನಪುಗಳು ಬೇಕು, ಸವಿಯಲೀ ಬದುಕು ಕಹಿನೆನಪು ಸಾಕೊಂದು ಮಾಸಲೀ ಬದುಕು ( ಸಿನಿಮಾ- ಅಪರಿಚಿತ, ಸೋಲೊ, ವರ್ಷ- 1976)
13 ಕನಸಲೂ ನೀನೆ, ಮನಸಲೂ ನೀನೆ… ಕನಸಲೂ ನೀನೆ, ಮನಸಲೂ ನೀನೇ. ನನ್ನಾಣೆ ನಿನ್ನಾಣೆ (ಸಿನಿಮಾ- ಬಯಲುದಾರಿ, ಡ್ಯುಯೆಟ್- ಎಸ್ಪಿ ಬಾಲಸುಬ್ರಹ್ಮಣ್ಯ, ವರ್ಷ- 1976)
14 ಬೆಸುಗೆ.. ಬೆಸುಗೆ, ಜೀವನವೆಲ್ಲ ಸುಂದರ ಬೆಸುಗೆ, ರಾಗದ ಜೊತೆಗೆ ತಾಳದ ಬೆಸುಗೆ (ಸಿನಿಮಾ- ಬೆಸುಗೆ, ಡ್ಯುಯೆಟ್- ಎಸ್ಪಿ ಬಾಲಸುಬ್ರಹ್ಮಣ್ಯ, ವರ್ಷ- 1976)
15 ಲಾಲಿ ಲಾಲಿ ಸುಕುಮಾರ, ಲಾಲಿ ಮುದ್ದು ಬಂಗಾರ, ಲಾಲಿ ಲಾಲಿ ಸುಕುಮಾರ, ಲಾಲಿ ಮುದ್ದು ಬಂಗಾರ. ಅಮ್ಮನ ಬಾಳಿನ ನೆಮ್ಮದಿಗೆ, ಕಂದ ನೀನೇ ಆಧಾರ (ಸಿನಿಮಾ- ಭಕ್ತ ಪ್ರಹ್ಲಾದ, ಡ್ಯುಯೆಟ್- ಡಾ ರಾಜ್ಕುಮಾರ್, ವರ್ಷ- 1967)
16 ನೂರಾರೂರುಗಳಲ್ಲಿ ಓಡಾಡೋ ಬೀದಿಗಳಲ್ಲಿ, ಈ ಜನ ಸಾಗರವೆ ಚಿಂತೇಲಿ ಇರುವಾಗ, ನೂರಾರೂರುಗಳಲ್ಲಿ ಓಡಾಡೋ ಬೀದಿಗಳಲ್ಲಿ, ಈ ಜನ ಸಾಗರವೆ ಚಿಂತೇಲಿ ಇರುವಾಗ (ಸಿನಿಮಾ- ಯುದ್ಧಕಾಂಡ, ಡ್ಯುಯೆಟ್- ಎಸ್ಪಿ ಬಾಲಸುಬ್ರಹ್ಮಣ್ಯ, ವರ್ಷ- 1984)
17 ಎಂದೆಂದೂ ನಿನ್ನನು ಮರೆತು ಬದುಕಿರಲಾರೆ, ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ. ಒಂದು ಕ್ಷಣ ನೊಂದರು ನೀ ನಾ ತಾಳಲಾರೆ. ಒಂದುಕ್ಷಣ ವಿರಹವನು ನಾ ಸಹಿಸಲಾರೆ. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ… (ಸಿನಿಮಾ- ಎರಡು ಕನಸು, ಡ್ಯಯೆಟ್- ಪಿ ಬಿ ಶ್ರೀನಿವಾಸ್, ವರ್ಷ- 1974)
18 ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ, ನೀ ಸೂತ್ರಧಾರಿ. ನಾ ಪಾತ್ರಧಾರಿ. ದಡವ ಸೇರಿಸಯ್ಯ
ಆ ಆ ಆ ಆ ಬೊಂಬೆಯಾಟವಯ್ಯ (ಸಿನಿಮಾ- ಶ್ರುತಿ ಸೇರಿದಾಗ, ಡ್ಯುಯೆಟ್- ಡಾ. ರಾಜ್ಕುಮಾರ್, ವರ್ಷ- 1987)
19 ಕಣ್ಣು, ಕಣ್ಣು ಕಲೆತಾಗ, ಕಣ್ಣು ಕಣ್ಣು ಕಲೆತಾಗ, ಮನವ ತೂಗುಯ್ಯಾಲೆಯಾಗಿದೆ ತೂಗಿ, ಹೃದಯ ಬಿಡಲಾರೆ ಎಂದಿದೆ ಕೂಗಿ. (ಸಿನಿಮಾ- ಕಾಮನಬಿಲ್ಲು, ಡ್ಯುಯೆಟ್- ಡಾ. ರಾಜ್ಕುಮಾರ್- ವರ್ಷ-1983)
20 ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು (ಸಿನಿಮಾ- ಶುಭಮಂಗಳ, ಡ್ಯುಯೆಟ್- ಸೋಲೊ, ವರ್ಷ-1975)
21 ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ, ಯಾರಿಗೆ ಯಾರೆಂದು ವಿಧಿ ಬರೆದಿರುವ ಎಂದೋ, ಯಾರಿಗೆ ಯಾರೆಂದು ವಿಧಿ ಬರೆದಿರುವ ಎಂದೋ, ತಾಳಿ ಕಟ್ಟುವ ಶುಭ ವೇಳೆ. (ಸಿನಿಮಾ- ಬೆಂಕಿಯಲ್ಲಿ ಅರಳಿದ ಹೂವು, ಡ್ಯುಯೆಟ್- ಸೋಲೊ, ವರ್ಷ- 1983)
22 ಬೆಳ್ಳಿ ಮೋಡವೆ,ಎಲ್ಲಿ ಓಡುವೆ,ನನ್ನ ಬಳಿಗೆ ನಲಿದು ಬಾ… ನನ್ನ ನಲ್ಲನ,ಕಂಡು ಈ ಕ್ಷಣ,ನನ್ನ ಒಲವ ತಿಳಿಸಿ ಬಾ. (ಸಿನಿಮಾ- ಬೆಂಕಿಯಲ್ಲಿ ಅರಳಿದ ಹೂವು, ಡ್ಯುಯೆಟ್- ಎಸ್ಪಿ ಜಯರಾಮ್, ವರ್ಷ- 1978)
23 ರಾಗ, ಜೀವನ ರಾಗ. ರಾಗ, ಜೀವನ ರಾಗ. ಪ್ರೇಮ ಸುಮವು ಅರಳಿದಾಗ, ಮೋಹದ ರಾಗ (ಸಿನಿಮಾ- ಶ್ರುತಿ ಸೇರಿದಾಗ, ಡ್ಯುಯೆಟ್- ಡಾ. ರಾಜ್ಕುಮಾರ್, ವರ್ಷ-1987)
24 ನಿನ್ನ ಕೊಂಕು ನೋಟವ, ಮಿಂಚು ಎನ್ನಲೇ, ನಿನ್ನ ಬಿಂಕದಾಟವ ಸಂಚು ಎನ್ನಲೇ. ಹೂವು ಎನ್ನಲೇ, ಮುಳ್ಳು ಎನ್ನಲೇ, ಕೆಸರಿನಲ್ಲಿ ಹುಟ್ಟಿದಾ, ಕಮಲವೆನ್ನಲೇ. (ಸಿನಿಮಾ- ಸುವರ್ಣ ಸೇತುವೆ, ಡ್ಯುಯೆಟ್- ಎಸ್ಪಿ ಬಾಲಸುಬ್ರಹ್ಮಣ್ಯ, ವರ್ಷ- 1982)
25 ಮೆಲ್ಲ ಮೆಲ್ಲನೆ ಬಂದನೆ, ಮೆಲ್ಲ ಮೆಲ್ಲನೆ ಬಂದನೆ. ನಮ್ಮಮ್ಮ ಕೇಳೆ, ಮೆಲ್ಲ ಮೆಲ್ಲನೇ ಬಂದನೆ. (ಸಿನಿಮಾ- ಶಿವ ಮೆಚ್ಚಿದ ಬೇಡರ ಕಣ್ಣಪ್ಪ, ಸೋಲೊ, ವರ್ಷ- 1988)
ಇದನ್ನೂ ಓದಿ : Vani Jayaram: ಸಂಗೀತಕ್ಕಾಗಿ ಬ್ಯಾಂಕ್ ಉದ್ಯೋಗವನ್ನೇ ಬಿಟ್ಟವರು ವಾಣಿ ಜಯರಾಂ; ಸಾಧನೆಗೆ ಬೆಂಬಲವಾಗಿ ನಿಂತಿದ್ದರು ಪತಿ