Site icon Vistara News

Soundarya Venkatesh: ಪ್ರೀತಿಸುತ್ತಿದ್ದ ʻಸೌಂದರ್ಯʼ ಅವರಿಂದ ರಾಖಿ ಕಟ್ಟಿಸಿಕೊಂಡಿದ್ದೇಕೆ ವಿಕ್ಟರಿ ವೆಂಕಟೇಶ್‌?

Soundarya Hero Venkatesh

ಬೆಂಗಳೂರು: ತೆಲುಗು ಚಿತ್ರರಂಗದ ಕೆಲವು ನಾಯಕಿಯರ ಹೆಸರುಗಳು ಇನ್ನೂ ಮುನ್ನಲೆಗೆ ಬರುತ್ತಲೇ ಇದೆ. ಆ ಕಾಲಕ್ಕೆ ಜನಪ್ರಿಯ ನಾಯಕಿಯರಲ್ಲಿ ಸೌಂದರ್ಯ ಕೂಡ ಒಬ್ಬರು. ತೆಲುಗು ಬೆಳ್ಳಿತೆರೆಯಲ್ಲಿ ಹಲವು ವರ್ಷಗಳ ಕಾಲ ಟಾಪ್‌ ಹಿರೋಯಿನ್‌ ಸೌಂದರ್ಯ. ಚಿರಂಜೀವಿ, ನಾಗಾರ್ಜುನ, ಬಾಲಕೃಷ್ಣ, ವೆಂಕಟೇಶ್ (Soundarya Venkatesh) ಎಲ್ಲಾ ಸ್ಟಾರ್ ಹೀರೊಗಳ ಜತೆ ತೆರೆ ಹಂಚಿಕೊಂಡಿದ್ದರು. ಆದರೆ ವಿಕ್ಟರಿ ವೆಂಕಟೇಶ್ ಹಾಗೂ ನಟಿ ಸೌಂದರ್ಯ ಜತೆಯಾಗಿ ನಟಿಸಿದ ಸಿನಿಮಾಗಳು ಹಿಟ್ ಆದವು. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾಗಳು ಗೆಲ್ಲುವುದಕ್ಕೆ ಶುರುವಾಗಿದ್ದವು. ಆ ಸಮಯಕ್ಕೆ ಸೌಂದರ್ಯಾ ಹಾಗೂ ವೆಂಕಟೇಶ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ತೆಲುಗು ಮಾಧ್ಯಮದಲ್ಲಿ ಹರಿದಾಡಿದ್ದವು. ಈ ಸುದ್ದಿ ಹಬ್ಬುತ್ತಿದ್ದಂತೆ ಸೌಂದರ್ಯ ವಿಕ್ಟರಿ ವೆಂಕಟೇಶ್‌ಗೆ ರಾಖಿ ಕಟ್ಟಿ ಬೇರೆಯಾದರು ಎನ್ನುವ ಸುದ್ದಿ ವೈರಲ್‌ ಆಗಿತ್ತು.

ವೆಂಕಟೇಶ್ ಜತೆ ಹಲವು ವರ್ಷಗಳಿಂದ ಸೌಂದರ್ಯ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿದ್ದರು ಎಂದು ಹಲವರು ಹೇಳುತ್ತಾರೆ. ಆದರೆ ವೆಂಕಟೇಶ್ ಆಗಲೇ ಮದುವೆಯಾಗಿದ್ದರು. ತೆಲುಗಿನ ಜನಪ್ರಿಯ ನಿರ್ಮಾಪಕ ರಾಮ ನಾಯ್ಡುಗೆ ಇಬ್ಬರು ಪುತ್ರರು. ಮೊದಲನೆಯವರು ದಗ್ಗುಬಾಟಿ ಸುರೇಶ್. ಎರಡನೇ ಪುತ್ರ ದಗ್ಗುಬಾಟಿ ವೆಂಕಟೇಶ್. ಆದರೆ, ದಗ್ಗುಬಾಟಿ ಸುರೇಶ್ ನಟನೆ ಕಡೆ ಮನಸ್ಸು ಮಾಡಲಿಲ್ಲ. ಹೀಗಾಗಿ ಎರಡನೇ ಪುತ್ರ ವೆಂಕಟೇಶ್‌ರನ್ನು ಸ್ಟಾರ್ ಮಾಡುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: Venkatesh Maha: ಕೆಜಿಎಫ್-2 ಸಿನಿಮಾವನ್ನು ಹೀಯಾಳಿಸಿದ ತೆಲುಗು ನಿರ್ದೇಶಕ: ಕ್ಷಮೆಗೆ ಅಭಿಮಾನಿಗಳ ಆಗ್ರಹ

ಈ ವಿಚಾರಕ್ಕೆ ವೆಂಕಟೇಶ್‌ ಮನೆಯಲ್ಲಿ ಗದ್ದಲ

ನೀರಜಾ ಎಂಬುವವರ ಜತೆ ವೆಂಕಟೇಶ್ ಮದುವೆ ಆಗಿದ್ದರು. ಇವರಿಗೆ ನಾಲ್ಕು ಮಂದಿ ಮಕ್ಕಳಿದ್ದರು. ಹೀಗಿದ್ದರೂ, ವೆಂಕಟೇಶ್‌ಗೆ ನಟಿ ಸೌಂದರ್ಯ ಮೇಲೆ ಮನಸ್ಸಾಗಿತ್ತು. ಇದು ಮನೆಯಲ್ಲಿ ತಿಳಿಯುತ್ತಿದ್ದಂತೆ ಗದ್ದಲವೇ ಶುರುವಾಗಿತ್ತು. ಈ ವಿಷಯ ವೆಂಕಟೇಶ್ ತಂದೆ ರಾಮ ನಾಯ್ಡು (Ramanaidu) ಕಿವಿಗೆ ಬಿದ್ದಿತ್ತು. ಎಷ್ಟೇ ತಿಳಿಸಿ ಹೇಳಿದರೂ ವೆಂಕಟೇಶ್ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲೇ ಇರಲಿಲ್ಲ ಎಂದು ಅಂದು ವರದಿಯಾಗಿದ್ದವು. ರಾಮ ನಾಯ್ಡು ಸೌಂದರ್ಯ ಬಳಿ ಬಂದು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ತಕ್ಷಣವೇ ವೆಂಕಟೇಶ್‌ಗೆ ನಟಿ ಸೌಂದರ್ಯ ರಾಖಿ ಕಟ್ಟಿ ಇಬ್ಬರನ್ನು ಅಣ್ಣಾ ತಂಗಿಯ ಸಂಬಂಧ ಬೆಸೆದಿದ್ದರು ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸೌಂದರ್ಯ ವೆಂಕಟೇಶ್‌ ಅವರಿಗೆ ರಾಖಿಯನ್ನು ಕಟ್ಟಿದರೋ ಅಲ್ಲಿಂದ ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾವನ್ನೇ ಮಾಡಿಲ್ಲ. ‘ದೇವಿ ಪುತ್ರುಡು’ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡ ಕೊನೆಯ ಸಿನಿಮಾ.

Exit mobile version