ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದಲ್ಲಿ (South Cinema Actress) ಎ-ಲಿಸ್ಟ್ ಹೀರೊಗಳು ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ದಕ್ಷಿಣ ಚಿತ್ರರಂಗದ ಎ-ಲಿಸ್ಟ್ ನಟಿಯರ ಪೈಕಿ ಅನೇಕ ಬಾಲಿವುಡ್ ಸ್ಟಾರ್ಸ್‌ಗಳಿಗಿಂತ ಸಂಭಾವನೆ ಹೆಚ್ಚಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಸೌತ್ ಸಿನಿಮಾ ತಾರೆ ಸಮಂತಾ ರುತ್ ಪ್ರಭು ‘ಸಿಟಾಡೆಲ್ ಇಂಡಿಯಾ’ ಸಿರೀಸ್‌ಗೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಪಟ್ಟಿಗೆ ಮತ್ತೊಬ್ಬ ಜನಪ್ರಿಯ ಸೌತ್ ನಟಿಯ ಹೆಸರು ಸೇರ್ಪಡೆಯಾಗಿದೆ.
ಸಮಂತಾ ರುತ್ ಪ್ರಭು ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಇದರಲ್ಲಿ ಸಂದೇಹವೇ ಇಲ್ಲ. ಸೂಪರ್‌ಹಿಟ್ ಚಿತ್ರ ‘ಪುಷ್ಪಾ’ದಲ್ಲಿನ ಐಟಂ ಸಾಂಗ್ ‘ಊ ಅಂಟವಾ’ ನಂತರ ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ಹಾಡಿನ ಯಶಸ್ಸಿನ ನಂತರ ಸಮಂತಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ‘ಸಿಟಾಡೆಲ್ ಇಂಡಿಯಾ’ ವೆಬ್ ಸಿರೀಸ್‌ಗಾಗಿ 10 ಕೋಟಿ ರೂ. ವಿಧಿಸಿದ್ದಾರೆ ಎಂದು ವರದಿಯಾಗಿದೆ. ಆದರೀಗ ಮತ್ತೊಬ್ಬ ನಟಿಯ ಹೆಸರು ಕೇಳಿ ಬರುತ್ತಿದೆ. ಅವರೇ ತ್ರಿಶಾ ಕೃಷ್ಣನ್.
ಫಿನ್‌ಕ್ಯಾಶ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವನ್’ ಚಿತ್ರದ ನಂತರ ತ್ರಿಷಾ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಿದೆ. ನಟಿ ತಮ್ಮ ಮುಂದಿನ ಚಿತ್ರಕ್ಕೆ ರೂ 10 ಕೋಟಿ ರೂ. ಚಾರ್ಜ್ ಮಾಡುತ್ತಿದ್ದಾರೆ, ಆ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!
‘ಪೊನ್ನಿಯನ್ ಸೆಲ್ವನ್’ ಎರಡು ಭಾಗಗಳಲ್ಲಿ ಬಿಡುಗಡೆಯಾಯಿತು ಮತ್ತು ಚಿತ್ರದಲ್ಲಿ ತ್ರಿಶಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ತ್ರಿಶಾ ಶೀಘ್ರದಲ್ಲೇ ವಿಜಯ್ ದಳಪತಿ ಜತೆ ‘ಲಿಯೋ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 14 ವರ್ಷಗಳ ನಂತರ ವಿಜಯ್ ಮತ್ತು ತ್ರಿಶಾ ತೆರೆ ಮೇಲೆ ಜೋಡಿಯಾಗುತ್ತಿದ್ದಾರೆ.