Site icon Vistara News

Himanshi Khurana | ಶೂಟಿಂಗ್‌ ವೇಳೆ ಮೂಗಿನಲ್ಲಿ ರಕ್ತಸ್ರಾವ: ಪಂಜಾಬಿ ನಟಿ ಹಿಮಾಂಶಿ ಖುರಾನಾ ಆಸ್ಪತ್ರೆಗೆ ದಾಖಲು

Himanshi Khurana

ಬೆಂಗಳೂರು : ಪಂಜಾಬಿ ಬಿಗ್ ಬಾಸ್ 13 ಸ್ಪರ್ಧಿ, ನಟಿ ಹಾಗೂ ಗಾಯಕಿ ಹಿಮಾಂಶಿ ಖುರಾನಾ (Himanshi Khurana) ಮೂಗಿನ ರಕ್ತಸ್ರಾವ ಮತ್ತು ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣ ರೊಮೇನಿಯಾದ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೊಮೇನಿಯಾದಲ್ಲಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತ ಸುರಿಯಲು ಶುರುವಾಯಿತು. ಅದು ನಿಲ್ಲದೇ ಇರುವ ಕಾರಣಕ್ಕಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ತಮ್ಮ ಮುಂಬರುವ ಪಂಜಾಬಿ ಚಿತ್ರ ‘ಫಟ್ಟೊ ದೇ ಯಾರ್ ಬಡೇ ನೆ’ ಚಿತ್ರೀಕರಣದಲ್ಲಿದ್ದರು. ‘ಜೀತ್ ಜಾಂಗೆ ಜಹಾನ್’, ‘ಸದ್ದಾ ಹಕ್’, ‘ಲೆದರ್ ಲೈಫ್’, ‘ಅಫ್ಸರ್’ ಮತ್ತು ಇನ್ನೂ ಅನೇಕ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಹಿಮಾಂಶಿ ಅವರು ಮಳೆಯಲ್ಲಿ ಚಿತ್ರದ ಒಂದು ಸೀಕ್ವೆನ್ಸ್‌ ಚಿತ್ರೀಕರಣ ನಡೆದಿತ್ತು. ಮೈನಸ್ 7 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೂಟಿಂಗ್ ನಡೆದಿದ್ದ ಕಾರಣ ನಟಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಮೂಗಿನಿಂದ ರಕ್ತ ಸುರಿಯಲು ಶುರುವಾಗಿದೆ.

ಇದನ್ನೂ ಓದಿ | Sarath Kumar | ಕಾಲಿವುಡ್‌ ನಟ ಶರತ್‌ಕುಮಾರ್‌ ಆಸ್ಪತ್ರೆಗೆ ದಾಖಲು

ಹಿಮಾಂಶಿ ಪಂಜಾಬಿ ‘ಬಿಗ್ ಬಾಸ್ 13’ನಲ್ಲಿ ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದಾರೆ. ಸ್ಪರ್ಧಿ ಆಸಿಮ್ ರಿಯಾಜ್ ಜತೆ ಅವರು ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಹಲವು ವಿಚಾರಗಳಿಂದಾಗಿ ಅವರು ವಿರೋಧಿಗಳನ್ನೂ ಕಟ್ಟಿಕೊಂಡಿದ್ದರು.

ಇದನ್ನೂ ಓದಿ | Kamal Haasan | ಹಿರಿಯ ನಟ ಕಮಲ್​ ಹಾಸನ್​ಗೆ ಅನಾರೋಗ್ಯ; ಚೆನ್ನೈ ಆಸ್ಪತ್ರೆಗೆ ದಾಖಲು

Exit mobile version