ಬೆಂಗಳೂರು: ಪಂಜಾಬಿ ಬಿಗ್ ಬಾಸ್ 13ರ (Himanshi Khurana) ಖ್ಯಾತಿಯ ಹಿಮಾಂಶಿ ಖುರಾನಾ ಅವರು ಆಸಿಮ್ ರಿಯಾಜ್ ಜತೆಗೆ ಬ್ರೇಕ್‌ಅಪ್ ಮಾಡಿಕೊಂಡಿದ್ದಾರೆ. ಹಿಮಾಂಶಿ ಸಿಖ್ ಧರ್ಮದವರು, ಆಸೀಮ್ ರಿಯಾಜ್ (Asim Riaz) ಮುಸ್ಲಿಂ ಧರ್ಮದವರಾಗಿದ್ದಾರೆ. ಬಿಗ್ ಬಾಸ್ ಸೀಸನ್ 13ರಲ್ಲಿ ಆಸೀಮ್ ಮತ್ತು ಹಿಮಾಂಶಿ ಪರಿಚಿತರಾದರು. ಆ ಸ್ನೇಹ ಪ್ರೀತಿಗೆ ತಿರುಗಿ ಶೋ ಮುಗಿದ ಮೇಲೂ ಲಿವಿಂಗ್ ಟು ಗೆದರ್ ರಿಲೇಷನ್‌ಶಿಪ್‌ನಲ್ಲಿದ್ದರು. ಇದೀಗ ಇಬ್ಬರೂ ಬೇರೆಯಾಗಿರುವುದನ್ನು ಸೋಷಿಯಲ್ ಮೀಡಿಯಾಗಳು ಖಚಿತಪಡಿಸಿವೆ.
ಹಿಮಾಂಶಿ ಖುರಾನಾ ತಮ್ಮ ಟ್ವೀಟ್‌ನಲ್ಲಿ “ಇದು ನನ್ನ ಕೊನೆಯ ಮತ್ತು ಅಂತಿಮ ಹೇಳಿಕೆ. ನಾನು ಯಾವುದೇ ಧರ್ಮವನ್ನು ಅಗೌರವ ಮಾಡುತ್ತಿಲ್ಲ. ನಾನು ನನ್ನದನ್ನು ಆರಿಸಿಕೊಂಡಿದ್ದೇನೆ. ಇಬ್ಬರ ನಡುವೆ ಧರ್ಮ ಅಡ್ಡ ಬಂದಿದೆ. ಧರ್ಮದ ಕಾರಣದಿಂದಲೇ ನಾವಿಬ್ಬರೂ ದೂರಾಗುತ್ತಿದ್ದೇವೆʼʼ ಎಂದಿದ್ದಾರೆ. ʻʻನಾವು ಜತೆಯಾಗಿದ್ದ ಸಮಯ ತುಂಬಾ ಚೆನ್ನಾಗಿತ್ತು. ಈಗ ಆ ಸಂಬಂಧ ಕೊನೆಯಾಗಿದೆ. ನಮ್ಮ ಪ್ರೀತಿಯ ಪಯಣ ಅದ್ಭುತವಾಗಿತ್ತು. ನಾವು ಈಗ ನಮ್ಮ ಜೀವನದಲ್ಲಿ ಮೂವ್ ಆನ್ ಆಗಿದ್ದೇವೆʼʼ ಎಂದಿದ್ದಾರೆ
ʻʻನಾವಿಬ್ಬರೂ ನಮ್ಮ ಧಾರ್ಮಿಕ ನಂಬಿಕೆಗಳಿಗಾಗಿ ನಮ್ಮ ಪ್ರೀತಿಯನ್ನು ತ್ಯಾಗ ಮಾಡಲು ಒಪ್ಪಿಕೊಂಡಿದ್ದೇವೆ. ನಮಗೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಇದೆ. ನಾವು ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Himanshi Khurana | ಶೂಟಿಂಗ್ ವೇಳೆ ಮೂಗಿನಲ್ಲಿ ರಕ್ತಸ್ರಾವ: ಪಂಜಾಬಿ ನಟಿ ಹಿಮಾಂಶಿ ಖುರಾನಾ ಆಸ್ಪತ್ರೆಗೆ ದಾಖಲು
But we believe whatever happens, happens for a good reason. There must be something good in this too. We really wish you best in life queen 👑 you deserve the best positive people in your life. God has better plans for you. May you prosper and shine brighter ✨
— Himanshi Khurana FC 👑 (@TeamHimanshi) December 7, 2023
#HimanshiKhurana pic.twitter.com/OtlKSkqdsu
‘ಫಟ್ಟೊ ದೇ ಯಾರ್ ಬಡೇ ನೆ’ ‘ಜೀತ್ ಜಾಂಗೆ ಜಹಾನ್’, ‘ಸದ್ದಾ ಹಕ್’, ‘ಲೆದರ್ ಲೈಫ್’, ‘ಅಫ್ಸರ್’ ಮತ್ತು ಇನ್ನೂ ಅನೇಕ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ ಹಿಮಾಂಶಿ. ಹಿಮಾಂಶಿ ಪಂಜಾಬಿ ‘ಬಿಗ್ ಬಾಸ್ 13’ನಲ್ಲಿ ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು. ಸ್ಪರ್ಧಿ ಆಸಿಮ್ ರಿಯಾಜ್ ಜತೆ ಇದಿದ್ದರಿಂದ,ಹಲವು ವಿಚಾರಗಳಿಂದಾಗಿ ಅವರು ವಿರೋಧಿಗಳನ್ನೂ ಕಟ್ಟಿಕೊಂಡಿದ್ದರು.
ಬಿಗ್ಬಾಸ್ನ ಭಾಷೆ ಯಾವುದೇ ಇರಲಿ, ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಗಳಿಸಲೂ ಈ ಕಾಂಟ್ರವರ್ಸಿಗಳೇ ಕಾರಣ. ಮಿತಿಮೀರಿದ ಪಯಣ, ಪ್ರೀತಿಯ ದೃಶ್ಯಗಳು ಹೇರಳವಾಗಿರುವ ಕಾರಣದಿಂದಲೇ ಬಿಗ್ಬಾಸ್ ನೋಡಲು ಒಂದಷ್ಟು ವರ್ಗ ಖುಷಿ ಪಡುತ್ತದೆ.