Site icon Vistara News

Uttara Baokar : ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್‌ ನಿಧನ

#image_title

ಪುಣೆ: ಹಿಂದಿ ಹಾಗೂ ಮರಾಠಿ ಭಾಷೆಯ ಖ್ಯಾತ ನಟಿ ಮತ್ತು ರಂಗಭೂಮಿ ಕಲಾವಿದೆ ಉತ್ತರಾ ಬಾಕರ್ (79) (Uttara Baokar) ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಹಾರಾಷ್ಟ್ರದ ಪುಣೆ ಬಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮಾಹಿತಿ ಕೊಟ್ಟಿದೆ. ಉತ್ತರಾ ಬಾಕರ್‌ ಅವರ ಅಂತ್ಯಸಂಸ್ಕಾರವನ್ನು ಬುಧವಾರ ಬೆಳಗ್ಗೆ ಪುಣೆಯಲ್ಲಿ ನೆರವೇರಿಸಲಾಗಿದೆ.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ(ಎನ್‌ಎಸ್‌ಡಿ)ದಲ್ಲಿ ನಟನೆಯನ್ನು ಅಧ್ಯಯನ ಮಾಡಿದ ಉತ್ತರಾ ಬಾಕರ್ ಅವರು ಮುಖ್ಯಮಂತ್ರಿಯಲ್ಲಿ ಪದ್ಮಾವತಿ, ಮೇನ ಗುರ್ಜರಿಯಲ್ಲಿ ಮೇನ, ಶೇಕ್ಸ್‌ಪಿಯರ್‌ನ ಒಥೆಲ್ಲೋದಲ್ಲಿ ಡೆಸ್ಡೆಮೋನಾ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ತುಘಲಕ್‌ನಲ್ಲಿ ತಾಯಿ ಪಾತ್ರ ಸೇರಿ ಹಲವಾರು ಪ್ರಮುಖ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: Keshub Mahindra : ಭಾರತದ ಹಿರಿಯ ಬಿಲಿಯನೇರ್‌, ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ನಿಧನ
ರಂಗಭೂಮಿಯಲ್ಲಿ ಹೆಸರುವಾಸಿಯಾಗಿದ್ದ ಉತ್ತರಾ ಅವರು ಗೋವಿಂದ್ ನಿಹ್ಲಾನಿಯವರ ತಮಸ್‌ ಚಿತ್ರದಲ್ಲಿ ಮಾಡಿದ ಪಾತ್ರದಿಂದಾಗಿ ಚಿತ್ರರಂಗದಲ್ಲೂ ಒಳ್ಳೆಯ ಹೆಸರು ಗಳಿಸಿದರು. ನಂತರ ಅವರು ಸುಮಿತ್ರಾ ಭಾವೆ ಅವರ ಚಲನಚಿತ್ರಗಳಲ್ಲಿಯೂ ನಟಿಸಿ ಖ್ಯಾತಿ ಪಡೆದುಕೊಂಡಿದ್ದರು. ಉತ್ತರಾ ಅವರು ಚಲನಚಿತ್ರ ನಿರ್ಮಾಪಕ ಸುನಿಲ್ ಸುಕ್ತಂಕರ್ ಅವರೊಂದಿಗೆ ಸುಮಾರು ಎಂಟು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು.


ಉತ್ತರಾ ಅವರ ಏಕ್‌ ದಿನ್‌ ಅಚಾನಕ್‌ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ 1988ರಲ್ಲಿ ರಾಷ್ಟ್ರ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಲಾಗಿತ್ತು. ಹಿರಿಯ ನಟಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಅನೇಕ ಸಹ ಕಲಾವಿದರು ಸಂತಾಪ ಸೂಚಿಸಲಾರಂಭಿಸಿದ್ದಾರೆ.

Exit mobile version