Site icon Vistara News

Hombale Films | ಕೆಜಿಎಫ್‌ಗೆ 4 ವರ್ಷಗಳ ಸಂಭ್ರಮ: ಸ್ಪೆಷಲ್‌ ಪೋಸ್ಟ್‌ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌!

Hombale Films

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಇತಿಹಾಸ ಸೃಷ್ಟಿಸಿದ ಕೆಜಿಎಫ್‌-1 (Hombale Films) ಸಿನಿಮಾಗೆ ಈಗ 4 ವರ್ಷಗಳ ಸಂಭ್ರಮ. ಈ ಸಂತಸವನ್ನು ಹೊಂಬಾಳೆ ಫಿಲ್ಮ್ಸ್‌ ಮೆಲುಕು ಹಾಕಿದೆ.  ಪ್ರಶಾಂತ್ ನೀಲ್ ತಮ್ಮ ಕಲ್ಪನೆಯಂತೆ ಕೆಜಿಎಫ್ ಚಾಪ್ಟರ್ 1 ತೆರೆಯ ಮೇಲೆ ತೋರಿಸುವಲ್ಲಿ ಯಶಸ್ವಿಯಾಗಿದ್ದರು. ಇದೇ ಡಿ. 21, 2018ರಂದು ತೆರೆಯ ಮೇಲೆ ಯಶ್ ಸಿನಿಮಾ ಅಬ್ಬರಿಸಿತ್ತು. ಈ ವಿಶೇಷ ದಿನವನ್ನು ನೆನೆದು ಹೊಂಬಾಳೆ ಫಿಲ್ಮ್ಸ್ ಚಿತ್ರದ ಕುರಿತು ಪೋಸ್ಟ್ ಮಾಡಿದ್ದಾರೆ. 

ಹೊಂಬಾಳೆ ಫಿಲ್ಮ್ಸ್‌ ಪೋಸ್ಟ್‌ ಹಂಚಿಕೊಂಡು ʻʻ’ಈ ದಿನ ಮತ್ತು ಈ ಸಿನಿಮಾ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಾವು ಊಹಿಸಿದ್ದೆವು, ನಾವು ನಂಬಿದ್ದೆವು, ನಾವು ಗೆದ್ದಿದ್ದೆವು. ಲೆಕ್ಕವಿಲ್ಲದಷ್ಟು ನೆನಪುಗಳು ಮತ್ತು ಈ ಕನಸನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ | Kantara Movie | ಕರ್ನಾಟಕದಲ್ಲಿ ಕಾಂತಾರದ ಹೊಸ ದಾಖಲೆ; ಕೆಜಿಎಫ್‌ ಕಲೆಕ್ಷನ್ ಹಿಂದಿಕ್ಕಿದ ರಿಷಬ್‌ ಸಿನಿಮಾ

ಹಿಂದಿಯಲ್ಲಿ ಈ ಚಿತ್ರ 44 ಕೋಟಿ ರೂ. ಬಾಚಿತ್ತು. ಕನ್ನಡದ ಸಿನಿಮಾವೊಂದು ಬಾಲಿವುಡ್‌ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಅದೇ ಮೊದಲಾಗಿತ್ತು. ಶ್ರೀನಿಧಿ ಶೆಟ್ಟಿ ಅವರು ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆದರು. ಈ ಸಿನಿಮಾಕ್ಕೆ ಈಗ ನಾಲ್ಕು ವರ್ಷ ತುಂಬಿದೆ. ಮೊದಲ ಭಾಗಕ್ಕಿಂತ 2ನೇ ಭಾಗ ಅದ್ಧೂರಿಯಾಗಿ ಮೂಡಿಬಂದಿದ್ದು ಮತ್ತಷ್ಟು ದೊಡ್ಡ ಮಟ್ಟದ್ದಲ್ಲಿ ಸಕ್ಸಸ್ ಕಂಡಿತು. ಭಾರತದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿತು.

ಇದನ್ನೂ ಓದಿ | Kantara Movie | ಕರ್ನಾಟಕದಲ್ಲಿ ಕಾಂತಾರದ ಹೊಸ ದಾಖಲೆ; ಕೆಜಿಎಫ್‌ ಕಲೆಕ್ಷನ್ ಹಿಂದಿಕ್ಕಿದ ರಿಷಬ್‌ ಸಿನಿಮಾ

Exit mobile version