Site icon Vistara News

Dhoomam Movie: ಟ್ವೀಟ್‌ ಮೂಲಕ ಕೊನೆಗೂ ಕನ್ನಡಿಗರಿಗೆ ಸ್ಪಷ್ಟನೆ ಕೊಟ್ಟ ಹೊಂಬಾಳೆ ಫಿಲ್ಮ್ಸ್‌!

Hombale Films Announce Dhoomam Kannada version

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್‌, ‘ಧೂಮಂ’ ಚಿತ್ರವನ್ನು (Dhoomam Trailer) ನಿರ್ಮಿಸುವ ಮೂಲಕ (Dhoomam Movie) ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಸಿನಿಮಾದ ಟ್ರೈಲರ್‌ ಕೂಡ ಬಿಡುಗಡೆಗೊಂಡಿದೆ. ಸಿನಿಮಾ ಇದೇ ತಿಂಗಳ 23ಕ್ಕೆ ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದ ಮೂಲ ಭಾಷೆ ಮಲಯಾಳಂ. ಈ ಚಿತ್ರ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಆದರೆ, ಈ ಬಗ್ಗೆ ಒಂದಷ್ಟು ಗೊಂದಲ ಇತ್ತು. ಜೂನ್ 23ರಂದು ಮಲಯಾಳಂ ಹಾಗೂ ಕನ್ನಡದಲ್ಲಿ ಈ ಸಿನಿಮಾ ಒಟ್ಟಿಗೆ ರಿಲೀಸ್ ಆಗುತ್ತಿದೆ.

ʻʻನಿಲ್ಲಲೇ ಬೇಕು ಎಲ್ಲ ಧಿಮಾಕು. ಕಾಲಪುರುಷನ ಕಾಲಿನ ಕೆಳಗೆʼʼ ಧೂಮಂ ಕನ್ನಡದಲ್ಲಿ ಜೂನ್ 23ರಂದು ರಾಜ್ಯದಾದ್ಯಂತ ಬಿಡುಗಡೆ ಎಂದು ಹೊಂಬಾಳೆ ಟ್ವೀಟ್‌ ಮಾಡಿದೆ. ಈ ಮೂಲಕ ಅಭಿಮಾನಿಗಳ ಕುತೂಹಲಗಳಿಗೆ ತೆರೆ ಎಳೆಯಲಾಗಿದೆ. ಸಿನಿಮಾ ಒಂದೇ ದಿನ ಕನ್ನಡದಲ್ಲಿಯೂ ರಿಲೀಸ್‌ ಆಗುತ್ತಿರುವುದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಿನಿಮಾ ಯಾವ ರೀತಿಯಲ್ಲಿ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಇದನ್ನೂ ಓದಿ: Dhoomam Movie: ಧೂಮಂ ಇದೇ 23ಕ್ಕೆ ರಿಲೀಸ್‌; ಒಟಿಟಿಯಲ್ಲಿ ಯಾವಾಗ ಸ್ಟ್ರೀಮಿಂಗ್‌?

ವಿಜಯ್ ಕಿರಗಂದೂರು ನಿರ್ಮಾಣ, ‘ಲೂಸಿಯಾ’ ಮತ್ತು ‘ಯೂ ಟರ್ನ್’ ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಈ ಸಿನಿಮಾಕ್ಕಿದೆ. ಮೂಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ನಿರ್ದೇಶನದ ಜತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.

ಇದೇ ಜೂನ್ 23ರಂದು ಕೇರಳ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Exit mobile version