Site icon Vistara News

Hombale Films: 2025ಕ್ಕೆ ಕೆಜಿಎಫ್‌ 3 ಪಕ್ಕಾ! ರಾಕಿ ಪಾತ್ರದಲ್ಲಿ ಯಶ್‌ ಇರ್ತಾರಾ?

yash

ಬೆಂಗಳೂರು: ಸೆ.29ರಂದು ಹೊಂಬಾಳೆ ಫಿಲ್ಮ್ಸ್‌ (Hombale Films) ಸಾಲು ಸಾಲು ಸಿಹಿ ಸುದ್ದಿಯನ್ನು ಸಿನಿರಸಿಕರಿಗೆ ನೀಡುತ್ತ ಬರುತ್ತಿದೆ. ಇದೀಗ ಹೊಸ ಸುದ್ದಿ ಪ್ರಕಾರ ಕೆಜಿಎಫ್‌ 3 ಸಿನಿಮಾ ಬರಲು ಸಜ್ಜಾಗುತ್ತಿದೆ. ಅದೂ ಕೂಡ 2025ರಲ್ಲಿ ಎಂದು ವರದಿಯಾಗಿದೆ. ಕೆಜಿಎಫ್‌ 3 ಪ್ರೊಡಕ್ಷನ್‌ ಕೆಲಸಗಳು ಇದೇ ಡಿಸೆಂಬರ್‌ನಲ್ಲಿ ಆರಂಭಗಗೊಳ್ಳುತ್ತಿದೆ ಎನ್ನಲಾಗಿದೆ. ಆದರೆ ಈ ಸಿನಿಮಾಗೆ ಯಶ್‌ ಇರಲಿದ್ದಾರಾ ಇಲ್ಲವೋ ಎಂಬ ಕುತೂಹಲ ಮಾತ್ರ ಫ್ಯಾನ್ಸ್‌ಗೆ ಹೆಚ್ಚಾಗಿದೆ.

ಮೂಲಗಳ ಪ್ರಕಾರ ʻʻಡಿಸೆಂಬರ್‌ 21ರಂದು ಕೆಜಿಎಫ್‌ 1 ಬಿಡುಗಡೆಯಾಗಿ 5 ವರ್ಷಗಳು ಕಳೆಯುತ್ತವೆ. ಅದೇ ದಿನ ಕೆಜಿಎಫ್‌ 3 ಘೋಷಿಲಾಗುತ್ತದೆ. ಚಿತ್ರೀಕರಣ 2024ರಲ್ಲಿ ಶುರುವಾಗಲಿದ್ದು, ಕೆಜಿಎಫ್‌ ಬಿಡುಗಡೆ ದಿನಾಂಕದ ಅಧಿಕೃತ ಘೋಷಣೆ ಡಿಸೆಂಬರ್‌ನಲ್ಲಿ ಗೊತ್ತಾಗಲಿದೆʼʼಎನ್ನಲಾಗಿದೆ. ಸಲಾರ್ ನಂತರವೇ ಈ ಚಿತ್ರವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ರಾಕಿಂಗ್‌ ಸ್ಟಾರ್‌ ಯಶ್‌ ಅವರೇ ರಾಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿದೆ ಮೂಲ.

ಇದನ್ನೂ ಓದಿ: Salaar Movie: ‘ಕಮಿಂಗ್​ ಬ್ಲಡಿ ಸೂನ್​’ ಎಂದು ಬಂದೇ ಬಿಡ್ತು ʻಸಲಾರ್‌ʼ; ಶಾರುಖ್‌ Vs ಪ್ರಭಾಸ್‌ ಕನ್‌ಫರ್ಮ್‌!

ಹೊಂಬಾಳೆ ಬರೋಬ್ಬರಿ ಮೂರು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಈ ಹಿಂದೆಯೇ ತಿಳಿಸಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಅದು ಭಾರತೀಯ ನಾನಾ ಭಾಷೆಗಳ ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಕಾಂತಾರ, ಕೆಜಿಎಫ್ ರೀತಿಯ ಹಿಟ್ ಚಿತ್ರಗಳನ್ನು ನೀಡಿರುವ ಈ ಸಂಸ್ಥೆ ಹಲವಾರು ಚಿತ್ರಗಳಿಗೆ ಈಗಾಗಲೇ ಹಣ ಹೂಡಿದೆ.

ಮುಂದಿನ ದಿನಗಳಲ್ಲಿ ‘ಯುವ’, ‘ಕಾಂತಾರ 2’ (Kantara 2), ‘ರಘು ತಥಾ’, ‘ಬಘೀರ’, ‘ಸಲಾರ್ ಪಾರ್ಟ್‍ 2’, ‘ಕೆಜಿಎಫ್‍ 3’ (KGF 3), ‘ರಿಚರ್ಡ್‍ ಆಂಟೋನಿ’, ‘ಟೈಸನ್‍’ ಮುಂತಾದ ಚಿತ್ರಗಳನ್ನು ನಿರ್ಮಿಸುತ್ತಿದೆ. ಈಗ ‘ಸಲಾರ್ 1’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುವ ಮೂಲಕ ಈ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ.

Exit mobile version