Site icon Vistara News

Hombale Films: ಹೊಂಬಾಳೆ ಫಿಲ್ಮ್ಸ್‌ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ; ಇದಕ್ಕಾಗಿ ಮಾಡಬೇಕಾದದ್ದು ಇಷ್ಟೇ

hombale films

hombale films

ಬೆಂಗಳೂರು: ಕೆಜಿಎಫ್‌ (KGF) ಸರಣಿ, ಕಾಂತಾರ (Kantara) ಮುಂತಾದ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿದ ಕನ್ನಡದ ಪ್ರತಿಷ್ಠಿತ ಫಿಲಂ ಪ್ರೊಡಕ್ಷನ್‌ ಕಂಪನಿ ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ದೇಶಕರ ತಂಡದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಣೆ ಹೊರಡಿಸಿದೆ.

ಪೋಸ್ಟ್‌ನಲ್ಲೇನಿದೆ?

”ಸಹಾಯಕ ನಿರ್ದೇಶಕರೇ ನಮ್ಮ ತಂಡ ಸೇರಿಕೊಳ್ಳಿ. ನಿಮ್ಮ ಸೃಜನಾತ್ಮಕತೆ ಮತ್ತು ಕಥೆ ಹೇಳುವ ಕೌಶಲ್ಯವನ್ನು ನಮ್ಮ ಸಿನಿಮಾ ಪ್ರಯಾಣಕ್ಕೆ ತನ್ನಿ. ನಮ್ಮ ಮುಂದಿನ ರೋಚಕ ಪ್ರಾಜೆಕ್ಟ್‌ಗೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಇಲ್ಲಿ ನೀವು ಹೊಸತನವನ್ನು ಕಲಿಯಬಹುದು, ಬೆಳೆಯಬಹುದು ಮತ್ತು ಬೆಳ್ಳಿತೆರೆಗೆ ನಿಮ್ಮದೆ ಆದ ಕೊಡುಗೆ ಸಲ್ಲಿಸಬಹುದು. ಮಿಂಚುವ ಅವಕಾಶ ಇಲ್ಲಿಂದ ಆರಂಭ” ಎಂದು ಎಕ್ಸ್‌ನಲ್ಲಿ ಹೊಂಬಾಳೆ ಫಿಲ್ಮ್ಸ್‌  ಬರೆದುಕೊಂಡಿದೆ.

ಷರತ್ತುಗಳು

ಆಸಕ್ತರು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು. ಆ ಬಗ್ಗೆ ವಿವರ ಇಂತಿದೆ:

ಇಂತಹ ಅರ್ಹತೆ ಇರುವವರು ನವೆಂಬರ್‌ 11ರಂದು ಬೆಳಗ್ಗೆ 8 ಗಂಟೆಯಿಂದ ಅಪರಾಹ್ನ 4 ಗಂಟೆಯ ಒಳಗೆ ಬೆಂಗಳೂರಿನ ಮಲ್ಲೇಶ್ವರಂ ಜಿಎಂ ರೆಜಾಯ್ಜ್‌ ಆಡಿಟೋರಿಯಂನಲ್ಲಿ ಆಯೋಜಿಸಿರುವ ಆಡಿಷನ್‌ಗೆ ಹಾಜರಾಗಬಹುದು. ವಿಳಾಸ: ಜಿಎಂ ರೆಜಾಯ್ಜ್‌ ಡಿಜಿಟಲ್‌ ಆಡಿಟೋರಿಯಂ ಬ್ಯಾಂಕ್ವೆಟ್ಸ್‌, #158/1, 8ನೇ ಕ್ರಾಸ್‌ ರಸ್ತೆ, 8ನೇ ಮುಖ್ಯ ರಸ್ತೆ, ಮಲ್ಲೇಶ್ವರಂ.

ಇದನ್ನೂ ಓದಿ: Hombale Films: ಲೋಕೇಶ್ ಕನಕರಾಜ್‌-ರಜನಿಕಾಂತ್‌ ಜತೆ ಸಿನಿಮಾ ಮಾಡಲು ಸಜ್ಜಾಗಿದ್ಯಾ ಹೊಂಬಾಳೆ?

ತೆರೆ ಮೇಲೆ ಮ್ಯಾಜಿಕ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌ 

ವಿಜಯ್‌ ಕಿರಗಂದೂರು ಆರಂಭಿಸಿದ ಹೊಂಬಾಳೆ ಫಿಲ್ಮ್ಸ್‌  2014ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ನಿನ್ನಿಂದಲೇ’ ಚಿತ್ರ ನಿರ್ಮಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿತು. ಮರುವರ್ಷ ಯಶ್‌ ನಾಯಕನಾಗಿ ನಟಿಸಿದ ‘ಮಾಸ್ಟರ್‌ ಪೀಸ್‌’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌  ನಿರ್ಮಿಸಿತು. 2017ರಲ್ಲಿ ಮತ್ತೆ ಪುನೀತ್‌ ರಾಜ್‌ಕುಮಾರ್‌ ಜತೆ ಕೈಜೋಡಿಸಿದ ಈ ಪ್ರೊಡಕ್ಷನ್‌ ಹೌಸ್‌ ‘ರಾಜಕುಮಾರ’ ಸಿನಿಮಾ ತಯಾರಿಸಿತು. 2018ರಲ್ಲಿ ಇತಿಹಾಸ ನಿರ್ಮಿಸಿದ ಯಶ್‌ ನಟನೆಯ ‘ಕೆಜಿಎಫ್‌ 1’ ಹೊರಬಂತು. 2021ರಲ್ಲಿ ಮತ್ತೊಮ್ಮೆ ಪುನೀತ್‌ ರಾಜ್‌ಕುಮಾರ್‌ ಜತೆ ‘ಯುವ ರತ್ನ’ ಚಿತ್ರ ನಿರ್ಮಿಸಿತು. ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದ ‘ಕೆಜಿಎಫ್‌ 2’ ಮತ್ತು ‘ಕಾಂತಾರ’ ಚಿತ್ರವನ್ನು ತಯಾರಿಸಿ ಜನಪ್ರಿಯವಾಗಿದೆ. ಸದ್ಯ ಹೊಂಬಾಳೆ ಫಿಲ್ಮ್ಸ್‌  ನಿರ್ಮಿಸಿದ ಪ್ಯಾನ್‌ ಇಂಡಿಯಾ ಚಿತ್ರ ʼಸಲಾರ್‌ ಪಾರ್ಟ್‌ 1ʼ ತೆರೆಗೆ ಬರಲು ಸಜ್ಜಾಗಿದೆ. ಪ್ರಭಾಸ್‌ ಅಭಿನಯದ, ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಬಹು ನಿರೀಕ್ಷಿತ ಚಿತ್ರ ಡಿಸೆಂಬರ್‌ 22ರಂದು ತೆರೆಗೆ ಅಪ್ಪಳಿಸಲಿದೆ. ಜತೆಗೆ ಹೊಂಬಾಳೆ ಫಿಲ್ಮ್ಸ್‌  ಮಲಯಾಳಂ, ತಮಿಳು ಚಿತ್ರವನ್ನೂ ನಿರ್ಮಿಸುತ್ತಿದೆ. ಶೀಘ್ರದಲ್ಲೇ ಬಾಲಿವುಡ್‌ಗೂ ಕಾಲಿಡಲಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version