Site icon Vistara News

Hombale Films | ಹೊಂಬಾಳೆ ಫಿಲ್ಮ್ಸ್‌ ಹೊಸ ಸಿನಿಮಾ ಅನೌನ್ಸ್‌; ಲೂಸಿಯಾ ಖ್ಯಾತಿಯ ಪವನ್‌ ಕುಮಾರ್ ನಿರ್ದೇಶಕ

Hombale Films

ಬೆಂಗಳೂರು: ಕಾಂತಾರ ಸಿನಿಮಾ ಯಶಸ್ವಿ ಪ್ರದರ್ಶನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ (Hombale Films) ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಿದೆ. ಲೂಸಿಯಾ ಖ್ಯಾತಿಯ ನಿರ್ದೇಶಕ ಪವನಕುಮಾರ್‌ ನಿರ್ದೇಶನದ ʻಧೂಮಂʼ ಚಿತ್ರದ ಟೈಟಲ್‌ ಮತ್ತು ಪೋಸ್ಟರ್‌ ಬಿಡುಗಡೆಗೊಳಿಸಿದೆ. ಈ ಬಾರಿ ಹೊಂಬಾಳೆ ಫಿಲ್ಮ್ಸ್‌ ಮಲಯಾಳಂ ಸಿನಿಮಾ ಮಾಡುತ್ತಿದೆ.

ಪವನ್‌ಕುಮಾರ್‌ ತಮ್ಮ ಇನ್ಸ್ಟಾ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಮಲಯಾಳಂ ನಟ ಫಹಾದ್‌ ಫಾಸಿಲ್‌ ಈ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ʻಧೂಮಂʼ ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ | Kantara Movie | ವರ್ಲ್ಡ್‌ ಆಫ್‌ ಕಾಂತಾರ ಮೇಕಿಂಗ್‌ ಪ್ರೋಮೊ ಔಟ್‌: ಪುನೀತ್‌ ಹೀರೋ ಆಗಿರಬೇಕಿತ್ತಂತೆ!

ಪುನೀತ್‌ ರಾಜಕುಮಾರ್‌ಗೆ ʻದ್ವಿತ್ವʼ ಸಿನಿಮಾವನ್ನು ಪವನ್‌ ಮಾಡಬೇಕಿತ್ತು. ಆದರೆ ಪುನೀತ್‌ ನಿಧನದ ಕಾರಣಾಂತರದಿಂದ ದ್ವಿತ್ವ ಸೆಟ್ಟೇರಲಿಲ್ಲ. ಈಗ ಅದೇ ಕಥೆಯನ್ನು ಫಾಸಿಲ್‌ಗೆ ಮಾಡಿದ್ದಾರಾ ಅಥವಾ ಬೇರೆ ಕಥೆ ಮಾಡಿದ್ದಾರಾ ಎಂಬುದರ ಬಗ್ಗೆ ಪವನ್‌ ಕುಮಾರ್‌ ಸ್ಪಷ್ಟನೆ ಕೊಡಬೇಕಿದೆ.

ಮಾಲಿವುಡ್‌ ನಟ ಫಹಾದ್‌ ಮಲಯಾಳಂ ಹೊರತುಪಡಿಸಿ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಪುಷ್ಪ, ವಿಕ್ರಮ್‌ ಸಿನಿಮಾಗಳಲ್ಲಿ ಕೂಡ ಖ್ಯಾತಿ ಪಡೆದ ಫಹಾದ್‌ ಬೇಡಿಕೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಹೆಸರು ಸೂಚಿಸಿದ್ದು ಈ ನಿರ್ದೇಶಕ; ಕಾಂತಾರ ಅಂದರೆ?

Exit mobile version