Site icon Vistara News

Hombale Films | ಬಾಲಿವುಡ್‌ ನಟ ಶಾರುಖ್‌ ಖಾನ್‌ ಸಿನಿಮಾ ನಿರ್ಮಾಣ ಮಾಡಲಿದೆಯಂತೆ ಹೊಂಬಾಳೆ ಫಿಲ್ಮ್ಸ್‌!

Hombale Films

ಬೆಂಗಳೂರು : ಕೆಜಿಎಫ್‌, ಕಾಂತಾರದಂತಹ ಹಿಟ್‌ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್‌ (hombale films) ಬಾಲಿವುಡ್‌ಗೆ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ. ಇದೀಗ ಶಾರುಖ್‌ ಖಾನ್‌ಗೆ ಹೊಂಬಾಳೆ ಫಿಲ್ಮ್ಸ್‌ ಸಿನಿಮಾ ಮಾಡಲಿದೆ ಎನ್ನಲಾಗುತ್ತಿದೆ. ಹೊಂಬಾಳೆಯಲ್ಲಿ ಬರುವ ಶಾರುಖ್ ಚಿತ್ರಕ್ಕೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್ ಖಾನ್ ಜತೆ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಮಾತುಕತೆ ಮುಗಿಸಿದೆ ಎಂದು ಹೇಳಲಾಗಿದೆ. ಇನ್ನೂ ವಿಶೇಷ ಅಂದರೆ ರಿಷಬ್‌ ಶೆಟ್ಟಿ ಮತ್ತು ರಕ್ಷಿತ್‌ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಸಾಲು ಸಾಲು ಸಿನಿಮಾದ ಮೂಲಕ ಮುನ್ನುಗ್ಗುತ್ತಿರುವ ಹೊಂಬಾಳೆ
ಕೆಜಿಎಫ್‌-2 ಸಿನಿಮಾದ ಮೂಲಕ ಭಾರಿ ಲಾಭ ಗಳಿಸಿದ ಹೊಂಬಾಳೆ ಫಿಲ್ಮ್ಸ್‌ ಸಿನಿಮಾಗಳನ್ನು ಮಾಡುವುದರ ಜತೆ ಹೊಸ ಹೊಸ ಸಿಹಿ ಸುದ್ದಿಯನ್ನು ನೀಡುತ್ತಿದೆ. ಈಗಾಗಲೇ ʼಹೊಂಬಾಳೆ ಫಿಲ್ಮ್ಸ್‌ʼ ನಿರ್ಮಾಣದ ʼರಾಘವೇಂದ್ರ ಸ್ಟೋರ್ಸ್‌ʼ ಮತ್ತು ಸೆಪ್ಟೆಂಬರ್‌ 30ರಂದು ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಸಿನಿಮಾ ತೆರೆ ಕಂಡಿದೆ.

ಇದನ್ನೂ ಓದಿ | Actor Shahrukh Khan | ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಶಾರುಖ್‌ ಖಾನ್‌ರನ್ನು ತಡೆದಿದ್ದೇಕೆ?

ʻಸಲಾರ್‌ʼ ಶೂಟಿಂಗ್‌ ಜತೆ ಶ್ರೀಮುರಳಿ ಅವರ ʼಬಘೀರʼ ಚಿತ್ರಕ್ಕೆ ಮೂಹರ್ತ ನೆರವೇರಿಸಿದೆ. ಈ ಎರಡೂ ಚಿತ್ರಗಳ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ಹೊಂಬಾಳೆ ಫಿಲ್ಮ್ಸ್‌ ʼಟೈಸನ್‌ʼ ಮೂಲಕ ಮಾಲಿವುಡ್‌ಗೆ ಕಾಲಿಟ್ಟಿದೆ. 2023ರಲ್ಲಿ ಶೂಟಿಂಗ್‌ ಆರಂಭಿಸಿ , 2024ರಲ್ಲಿ ಪಂಚ ಭಾಷೆಗಳಾದ ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿದೆ. ಈ ಸಿನಿಮಾದ ಟೈಟಲ್‌ ಲುಕ್‌ ರಿಲೀಸ್‌ ಆಗಿದ್ದು, ಮುಂದಿನ ದಿನಗಳಲ್ಲಿ ಕಲಾವಿದರ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ. ಇದೇ ಬ್ಯಾನರ್‌ ಅಡಿಯಲ್ಲಿ ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ನಿರ್ದೇಶನದ ʻಧೂಮಂʼ ಚಿತ್ರದ ಟೈಟಲ್‌ ಮತ್ತು ಪೋಸ್ಟರ್‌ ಬಿಡುಗಡೆಗೊಳಿಸಿದೆ.

ಇದನ್ನೂ ಓದಿ | Shahrukh Khan | ಶಾರುಖ್‌ ಪುತ್ರ ಅಬ್ರಾಮ್‌ ಹೆಸರಲ್ಲಿ `R’ ಏಕೆ ಕ್ಯಾಪಿಟಲ್‌? ಅಭಿಮಾನಿ ಪ್ರಶ್ನೆಗೆ ನಟ ಹೇಳಿದ್ದೇನು?

Exit mobile version