Site icon Vistara News

Hondisi Bareyiri | ಓ ಕವನ ಹಾಡು ರಿಲೀಸ್ ಮಾಡಿದ ಸ್ಯಾಂಡಲ್‌ವುಡ್‌ ನಟಿ ರಮ್ಯಾ

Hondisi Bareyiri

ಬೆಂಗಳೂರು: ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹೊಂದಿಸಿ ಬರೆಯಿರಿ’ ಚಿತ್ರ (Hondisi Bareyiri) ನವೆಂಬರ್ 18 ರಂದು ತೆರೆ ಕಾಣುತ್ತಿದೆ. ಸ್ಯಾಂಡಲ್‌ವುಡ್‌ ನಟಿ ಮೋಹಕ ತಾರೆ ರಮ್ಯಾ ಸಿನಿಮಾದ ಓ ಕವನ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್‌ಗಳು ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಬಿಡುಗಡೆಯಾಗಲು ಸಜ್ಜಾಗಿರುವ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಈ ಮೊದಲು ಒಂದು ಹಾಡನ್ನು ರಿಲೀಸ್ ಮಾಡಿ ಗಮನ ಸೆಳೆದಿದ್ದ ಚಿತ್ರತಂಡ, ಇದೀಗ ಇನ್ನೊಂದು ಹಾಡನ್ನು ರಿಲೀಸ್‌ ಮಾಡಿದೆ.

ಇದನ್ನೂ ಓದಿ | Hondisi Bareyiri | ಹೊಂದಿಸಿ ಬರೆಯಿರಿ ಸಿನಿಮಾಗೆ ನಟಿ ರಮ್ಯಾ ಸಾಥ್: ರಿಲೀಸ್‌ ಆಗಲಿದೆ ಮತ್ತೊಂದು ಹಾಡು!

‘ಓ ಕವನ’ ಹಾಡಿಗೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಬರೆದಿದ್ದು, ಆದಿತ್ಯ ಆರ್.ಕೆ ಮೆಲುವಾದ ದನಿ, ಜೋ ಕೋಸ್ಟ ಹಿತವಾದ ಸಂಗೀತ ನಿರ್ದೇಶನವಿದೆ. ಹಾಡಿನಲ್ಲಿ ಪ್ರವೀಣ್ ತೇಜ್ ಹಾಗೂ ಸಂಯುಕ್ತ ಹೊರನಾಡು ಕಾಣಿಸಿಕೊಂಡಿದ್ದಾರೆ. ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ. ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ತಾರಾಬಳಗದಲ್ಲಿದ್ದಾರೆ.

ಜೀವನ ಹೊಂದಾಣಿಕೆಯಲ್ಲಿ ಸಾಗಬೇಕು ಎನ್ನುವ ಮೂಲ ಆಶಯ ಈ ಚಿತ್ರದ ಕಥಾವಸ್ತು. ಇದರ ಸುತ್ತ ಕಥೆ ಹೆಣೆದಿರುವ ರಾಮೇನಹಳ್ಳಿ ಜಗನ್ನಾಥ್ ಐದು ಜನ ಸ್ನೇಹಿತರ ಭಾವನಾತ್ಮಕ ಪಯಣವನ್ನು ಇಲ್ಲಿ ಹೇಳ ಹೊರಟಿದ್ದಾರೆ. ಜೋ ಕೋಸ್ಟ ಸಂಗೀತ ನಿರ್ದೇಶನವಿದ್ದು, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಶಾಂತಿ ಸಾಗರ್ ಛಾಯಾಗ್ರಹಣ, ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ʻಸಂಡೇ ಸಿನಿಮಾಸ್‌ʼ ಬ್ಯಾನರ್‌ ಅಡಿ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ | Hondisi Bareyiri | ತೆರೆ ಮೇಲೆ ಬರಲು ಸಜ್ಜಾಗಿದೆ ಹೊಂದಿಸಿ ಬರೆಯಿರಿ ಸಿನಿಮಾ: ರಿಲೀಸ್‌ ಡೇಟ್‌ ಪ್ರಕಟ

Exit mobile version