Site icon Vistara News

Hondisi Bareyiri : ಒಟಿಟಿಯಲ್ಲಿ ಹೊಸ ದಾಖಲೆ ಬರೆದ ʼಹೊಂದಿಸಿ ಬರೆಯಿರಿʼ

#image_title

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಹಾಗೂ ಐಪಿಎಲ್ ಅಬ್ಬರ ಜೋರಾಗಿತ್ತು. ಆದಾಗಿಯೂ ʼಹೊಂದಿಸಿ ಬರೆಯಿರಿʼ (Hondisi Bareyiri) ಸಿನಿಮಾ ಅಮೆಜಾನ್ ಒಟಿಟಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ವರ್ಷದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡ ಸಿನಿಮಾವಾಗಿ ಇದು ಹೊರಹೊಮ್ಮಿದೆ.

ಸಿನಿರಸಿಕರಿಂದ ಭರಪೂರ ಮೆಚ್ಚುಗೆ ಪಡೆದು 50 ದಿನಗಳ ಸಂಭ್ರಮದಲ್ಲಿ ಈ ಚಿತ್ರ ಒಟಿಟಿಗೆ ಲಗ್ಗೆ ಇಟ್ಟಿತ್ತು. ಥಿಯೇಟರ್‌ನಲ್ಲಿ ʼಹೊಂದಿಸಿ ಬರೆಯಿರಿʼ ಸಿನಿಮಾ ನೋಡದವರು ಅಮೆಜಾನ್‌ನಲ್ಲಿ ಚಿತ್ರ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಪರಿಣಾಮ ಈ ಚಿತ್ರ ಒಟಿಟಿಯಲ್ಲಿ ಬರೋಬ್ಬರಿ 5 ಕೋಟಿ ನಿಮಿಷಗಳ ಸ್ಟ್ರೀಮಿಂಗ್ ಕಂಡು ರೆಕಾರ್ಡ್ ಕ್ರಿಯೇಟ್ ಮಾಡಿದೆ. ಈ ವರ್ಷದಲ್ಲಿ ಅತಿ ಹೆಚ್ಚು ಸ್ಟ್ರೀಮಿಂಗ್ ಕಂಡಿರುವ ಹೆಗ್ಗಳಿಕೆಯೂ ಹೊಂದಿಸಿ ಬರೆಯಿರಿ ಚಿತ್ರದ ಪಾಲಾಗಿದೆ. ಅಮೆಜಾನ್‌ನಲ್ಲಿ ದೊಡ್ಡ ಹಿಟ್ ಕಂಡಿರುವ ಈ ಚಿತ್ರ ಇದೀಗ ಬ್ರಿಟನ್‌ ಹಾಗೂ ಅಮೆರಿಕದಲ್ಲೂ ಸ್ಟ್ರೀಮ್ ಆಗ್ತಿದ್ದು, ಅಲ್ಲಿರುವ ಚಿತ್ರಪ್ರೇಮಿಗಳು ಸಿನಿಮಾ ನೋಡಬಹುದಾಗಿದೆ.

ಇದನ್ನೂ ಓದಿ: Pushpa 2 Movie : ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಸಾಯ್ತಾರಾ? ಶವದ ಫೋಟೊ ವೈರಲ್‌
ರಾಮೇನಹಳ್ಳಿ ಜಗನ್ನಾಥ್ ಅವರು ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಾಸ್ ಬ್ಯಾನರ್‌ನಡಿ ನಿರ್ಮಾಣ ಮಾಡಿರುವ ʼಹೊಂದಿಸಿ ಬರೆಯಿರಿʼ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ಧ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಭಾವನೆಗಳ ಏರಿಳಿತ, ಕಾಲೇಜು ವಿದ್ಯಾರ್ಥಿಗಳ ಮಜವಾದ ಪಯಣ, ಪ್ರೀತಿ ಪ್ರೇಮ, ತುಂಟಾಟವನ್ನೇ ಇಟ್ಟುಕೊಂಡು ಹೆಣೆದ ಕಥೆ ʼಹೊಂದಿಸಿ ಬರೆಯಿರಿʼ ಚಿತ್ರವಾಗಿದೆ. ಇದು ಅಮೆಜಾನ್ ಒಟಿಟಿಯಲ್ಲಿ ಧಮಾಕ ಎಬ್ಬಿಸುತ್ತಿದೆ. ಪ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆಯಲ್ಲಿ ಗೆಲುವು ದಾಖಲಿಸಿದ್ದಾರೆ.

Exit mobile version