Site icon Vistara News

Hondisi Bareyiri | ಹೊಂದಿಸಿ ಬರೆಯಿರಿ ಸಿನಿಮಾಗೆ ನಟಿ ರಮ್ಯಾ ಸಾಥ್: ರಿಲೀಸ್‌ ಆಗಲಿದೆ ಮತ್ತೊಂದು ಹಾಡು!

Hondisi Bareyiri

ಬೆಂಗಳೂರು: ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಹೊಂದಿಸಿ ಬರೆಯಿರಿ ಸಿನಿಮಾ (Hondisi Bareyiri) ಹೊಸ ಹಾಡೊಂದನ್ನು ಬಿಡುಗಡೆಗೊಳಿಸಲಿದೆ. ಬುಧವಾರ (ಸೆ.28)ರಂದು ಚಿತ್ರದ ‘ಓ ಕವನ’ ಎಂಬ ವಿಡಿಯೋ ಸಾಂಗ್ ಅನ್ನು ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಬಿಡುಗಡೆ ಮಾಡುತ್ತಿದ್ದಾರೆ. ಸಂಡೇ ಸಿನಿಮಾಸ್ ಯೂಟ್ಯೂಬ್‌ನಲ್ಲಿ ಬೆಳಗ್ಗೆ 11.31ಕ್ಕೆ ಹಾಡು ಅನಾವರಣವಾಗಲಿದೆ.

ನವೆಂಬರ್‌ 18ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಪ್ರವೀಣ್‌ ತೇಜ್‌, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್‌, ಭಾವನಾ ರಾವ್‌, ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸುನೀಲ್‌ ಪುರಾಣಿಕ್‌, ಪ್ರವೀಣ್‌ ಡಿ ರಾವ್‌, ಧರ್ಮೇಂದ್ರ ಅರಸ್‌, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.

ಇದನ್ನೂ ಓದಿ | Hondisi Bareyiri | ಬೆಳಕಲಿ ಕಾಣದ ಇರುಳಿಗು ಮೆಲೋಡಿ ಸಾಂಗ್‌ ಔಟ್‌: ಅರ್ಥಪೂರ್ಣ ಸಾಹಿತ್ಯ ಎಂದರು ಸಿನಿಪ್ರಿಯರು

ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು ಇಟ್ಟುಕೊಂಡು ಸಿನಿಮಾವನ್ನು ರೂಪಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಏಳು ಯುವಕ-ಯುವತಿಯರ ಒಂದೊಂದು ಕಥೆಯೂ ಚಿತ್ರದಲ್ಲಿದೆ.

ಜೋ ಕೋಸ್ಟ ಸಂಗೀತವಿದ್ದು, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಶಾಂತಿ ಸಾಗರ್‌ ಛಾಯಾಗ್ರಹಣ, ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ | Hondisi Bareyiri | ತೆರೆ ಮೇಲೆ ಬರಲು ಸಜ್ಜಾಗಿದೆ ಹೊಂದಿಸಿ ಬರೆಯಿರಿ ಸಿನಿಮಾ: ರಿಲೀಸ್‌ ಡೇಟ್‌ ಪ್ರಕಟ

Exit mobile version