ಬೆಂಗಳೂರು: ಸುಮಾರು 13 ವರ್ಷಗಳ ದಾಂಪತ್ಯ ಜೀವನಕ್ಕೆ ಪಂಜಾಬಿ ಗಾಯಕ, ಬಾಲಿವುಡ್ ನಲ್ಲಿ ಸಖತ್ ಖ್ಯಾತಿ ಗಳಿಸಿರುವ ಗಾಯಕ ಹನಿ ಸಿಂಗ್ (ಯೋ ಯೋ ಹನಿ ಸಿಂಗ್-Honey Singh) ಮತ್ತು ಪತ್ನಿ ಶಾಲಿನಿ ತಲ್ವಾರ್ ಅಂತ್ಯ ಹಾಡಿದ್ದಾರೆ. ದೆಹಲಿ ನ್ಯಾಯಾಲಯ ನವೆಂಬರ್ 7ರಂದು ದಂಪತಿಗೆ ವಿಚ್ಛೇದನ ನೀಡಿದೆ. ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ 2011ರ ಜನವರಿಯಲ್ಲಿ ಮದುವೆ ಆದರು. 2022ರ ಸೆಪ್ಟೆಂಬರ್‌ನಲ್ಲಿ, ಮದುವೆಯಾದ 11 ವರ್ಷಗಳ ನಂತರ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ಬಿ ಅಡಿಯಲ್ಲಿ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಪರಸ್ಪರ ಸಲ್ಲಿಸಿದರು. ಕೋರ್ಟ್ ಇಬ್ಬರಿಗೂ ಯೋಚಿಸಲು, ಹೊಂದಾಣಿಕೆ ಮಾಡಿಕೊಳ್ಳಲು ಆರು ತಿಂಗಳು ಅವಕಾಶ ನೀಡಿತ್ತು. ಆದರೆ, ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದರಿಂದ ವಿಚ್ಛೇದನದ ತೀರ್ಪು ನೀಡಲಾಗಿದೆ ಎಂದು ವರದಿಯಾಗಿದೆ.
ಶಾಲಿನಿ ಅವರು 2021ರ ಆಗಸ್ಟ್‌ನಲ್ಲಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಮೊರೆ ಹೋಗಿದ್ದರು ಮತ್ತು ಗಾಯಕನ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ವಿಚ್ಛೇದನ ಸಿಕ್ಕ ಬೆನ್ನಲ್ಲೇ ಶಾಲಿನಿ ಅವರು ಹನಿ ಸಿಂಗ್ ಅವರ ಮೇಲೆ ಹಾಕಿದ್ದ ಕೌಟುಂಬಿಕ ಹಿಂಸೆ ಪ್ರಕರಣವನ್ನು ಹಿಂಪಡೆದಿದ್ದಾರೆ. ಹನಿ ಸಿಂಗ್ ಅವರು ಟೀನಾ ತಡಾನಿ ಜತೆ ರಿಲೇಶನ್ಶಿಪ್ನಲ್ಲಿ ಇರುವುದಾಗಿ 2022ರ ಡಿಸೆಂಬರ್ನಲ್ಲಿ ಹೇಳಿಕೊಂಡಿದ್ದರು. ಟೀನಾ ಕೆನಡಾದ ನಟಿ.
ಗ್ಯಾಂಗ್ಸ್ಟರ್ನಿಂದ ಫೋನ್ ಕರೆ ವಿಚಾರದಲ್ಲಿ ಸಖತ್ ಸುದ್ದಿಯಾಗಿದ್ದ ಗಾಯಕ
ಪಂಜಾಬಿ ಗಾಯಕ, ಬಾಲಿವುಡ್ ನಲ್ಲಿ ಸಖತ್ ಖ್ಯಾತಿ ಗಳಿಸಿರುವ ಗಾಯಕ ಹನಿ ಸಿಂಗ್ (ಯೋ ಯೋ ಹನಿ ಸಿಂಗ್-Honey Singh) ಅವರಿಗೆ ಜೀವ ಬೆದರಿಕೆ ಕರೆ ಕೂಡ ಈ ಹಿಂದೆ ಬಂದಿತ್ತು. , ರಕ್ಷಣೆಗಾಗಿ ದೆಹಲಿ ಪೋಲೀಸ್ ಠಾಣೆ ಮೆಟ್ಟಿಲು ಏರಿದ್ದರು‘ಫೋನ್ ಮಾಡಿದವನು ತಾನು ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಎಂದು ಹೇಳಿಕೊಂಡು, .ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದರು ಗಾಯಕ.