Site icon Vistara News

Hostel Hudugaru Bekagiddare: ರಾಜ್ಯಾದ್ಯಂತ ಸಿನಿಮಾ ಗ್ರ್ಯಾಂಡ್ ಓಪನಿಂಗ್; ಎಲ್ಲೆಲ್ಲೂ ಹಾಸ್ಟೆಲ್ ಹುಡುಗರ ಸದ್ದು

Puneeth in Hostel Hudugaru Bekagiddare Poster

ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ಎಲ್ಲಾ ಜುಲೈ 21 ರಿಲೀಸ್ ಆಗಿದೆ. ಹಾಸ್ಟೆಲ್ ಹುಡುಗರ ಜೀವನದ ಕಥೆಯನ್ನು ತೆರೆದಿಡುವ ಸಿನಿಮಾ ಇದಾಗಿದೆ. ರಮ್ಯಾ, ರಿಷಬ್ ಶೆಟ್ಟಿ ಮೊದಲಾದವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ. ನರ್ತಕಿ ಚಿತ್ರಮಂದಿರಲ್ಲಿ ಡೊಳ್ಳು ಕುಣಿತ. ಪಟಾಕಿ ಸಿಡಿಸಿ ಚಿತ್ರತಂಡ ಸಂಭ್ರಮಿಸಿದೆ. ನಿತಿನ್ ಕೃಷ್ಣ ಮೂರ್ತಿ ನಿರ್ದೇಶನ ಹಾಗೂ ವರುಣ್‌ ಅವರ ನಿರ್ಮಾಣವಿದೆ.

ನಟಿ ರಮ್ಯಾ ಕೋರ್ಟ್‌ಗೆ ಹೋಗಿದ್ದೇಕೆ?

ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ರಮ್ಯಾ ಅವರು ತಕರಾರು ತೆಗೆದಿದ್ದರು. ತನ್ನ ಒಪ್ಪಿಗೆ ಇಲ್ಲದೇ ಯಾವ ದೃಶ್ಯ ಬಳಸಬಾರದು ಎಂದು ತಡೆಯಾಜ್ಞೆ ನೀಡಿದ್ದರು. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಹಾಗೂ ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೊ, ಸುದ್ದಿ ಮತ್ತಿತ್ತರ ಕಂಟೆಂಟ್​ಗಳನ್ನು ತೆಗೆದುಹಾಕಬೇಕು ಎಂದು ರಮ್ಯಾ ಡಿಮ್ಯಾಂಡ್​ ಮಾಡಿದ್ದರು. 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟಿಸ್​ನಲ್ಲಿ ಒತ್ತಾಯಿಸಿದ್ದರು. ಈ ಸಂಬಂಧ ಕಮರ್ಶಿಯಲ್ ಕೋರ್ಟ್ ಮೆಟ್ಟಿಲೇರಿದ್ದರು ರಮ್ಯಾ. ಆದರೀಗ ಹಾಸ್ಟೆಲ್ ಹುಡುಗರ ಪರ ನ್ಯಾಯಾಲಯ ಆದೇಶ ಹೊರಡಿಸಿದೆ. ಹಾಸ್ಟೆಲ್ ಹುಡುಗರ ಪರ ಲಾಯರ್ ವೇಲನ್ ವಾದ ಮಂಡಿಸಿದ್ದರು. ಜುಲೈ 21ರಂದು ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಿತ್ತು. ಇದೀಗ ಸಿನಿಮಾ ತೆರೆ ಕಂಡಿದೆ.

ಇದನ್ನೂ ಓದಿ: Hostel Hudugaru Bekagiddare: ವಾರ್ಡನ್ ಕಾಟ, ಹಾಸ್ಟೆಲ್ ಹುಡುಗರ ಆಟ, ರಮ್ಯಾ ಪಾಠ, ಸಖತ್‌ ಆಗಿದೆ ಮೊದಲ ನೋಟ!

ಇದನ್ನೂ ಓದಿ: Hostel Hudugaru Bekagiddare: ವಾರ್ಡನ್ ಕಾಟ, ಹಾಸ್ಟೆಲ್ ಹುಡುಗರ ಆಟ, ರಮ್ಯಾ ಪಾಠ, ಸಖತ್‌ ಆಗಿದೆ ಮೊದಲ ನೋಟ!

ಹಾಸ್ಟೆಲ್ ಹುಡುಗರಿಗೆ ಹಲವು ಕಲಾವಿದರಿಂದ ಸಾಥ್‌

ಕಿರಿಕ್‌ ಮಾಡುವ ವಾರ್ಡನ್‌ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್‌ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನವಿದೆ.

ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜತೆಗೆ ಸೇರಿ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸಿದೆ.

Exit mobile version