Site icon Vistara News

Hostel Hudugaru Bekagiddare: ತೆಲುಗಿನಲ್ಲಿ `ಹಾಸ್ಟೆಲ್‌ ಬಾಯ್ಸ್‌’; ರಮ್ಯಾ ಬದಲಿಗೆ ತೆಲುಗು ಖ್ಯಾತ ನಿರೂಪಕಿ ಎಂಟ್ರಿ!

ramya Rashmi Gautam

ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾವೀಗ ತೆಲುಗಿನತ್ತ ಹೆಜ್ಜೆ ಇಟ್ಟಿರುವುದು ಗೊತ್ತೇ ಇದೆ. ಕನ್ನಡ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿಕೊಂಡಿರುವ ಈ ಚಿತ್ರವನ್ನು ʻಬಾಯ್ಸ್ ಹಾಸ್ಟೆಲ್ʼ ಹೆಸರಿನಡಿ ತೆಲುಗಿಗೆ ಡಬ್ ಮಾಡಲಾಗುತ್ತಿದೆ. ಇದೇ ಸೆಪ್ಟೆಂಬರ್‌ 26ಕ್ಕೆ ಸಿನಿಮಾ ತೆಲುಗು ಪ್ರೇಕ್ಷಕರ ಎದುರು ಹಾಜರಾಗಲಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ಅವರು ಲೆಕ್ಚರರ್ ಪಾತ್ರದಲ್ಲಿ ನಟಿಸಿದ್ದರು. ರಮ್ಯಾ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಬದಲಾಯಿಸಲಾಗುತ್ತಿದೆ. ತೆಲುಗು ಆ್ಯಂಕರ್ ರಶ್ಮಿ ಗೌತಮ್ (Rashmi Gautam) ಆ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿವಾದವಾಗಿದ್ದರೂ ಸೂಪರ್‌ ಹಿಟ್‌ ಆಯ್ತು!

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ರಮ್ಯಾ ಲೆಕ್ಚರರ್ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಆರಂಭದ ಸನ್ನಿವೇಶವೊಂದರಲ್ಲಿ ಕಾಣಿಸಿಕೊಳ್ಳುವ ರಮ್ಯಾ ಅವರು ತೆರೆಮೇಲೆ ಬಂದು ನಗು ಬೀರಿ ಹೋಗಿದ್ದರು. ರಮ್ಯಾ ಅವರನ್ನು ಸರಿಯಾಗಿ ತೆರೆಮೇಲೆ ತೋರಿಸಲಿಲ್ಲ ಎನ್ನುವುದು ಕೆಲವರ ವಾದ. ಇನ್ನು ಇದೇ ಪಾತ್ರದ ವಿಚಾರವಾಗಿ ಸಿನಿಮಾ ರಿಲೀಸ್ ಇರುವ ಸಮಯದಲ್ಲೇ ನಟಿ ತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದರು. ಆದರೆ ಅದೆಲ್ಲವನ್ನು ಮೀರಿ ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ತೆಲುಗಿಗೆ ಡಬ್ ಮಾಡಿ ಬಿಡುವಂತೆ ಕೆಲವರು ಮನವಿ ಮಾಡಿದ್ದರು. ಸಿನಿಮಾ ಡೈಲಾಗ್ಸ್ ತುಂಬಾ ಸ್ಪೀಡ್ ಇದೆ. ಡಬ್ ಮಾಡುವುದು ಅಷ್ಟು ಸುಲಭ ಅಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದೀಗ ಸಿನಿಮಾ ಡಬ್ಬಿಂಗ್ ಕೆಲಸ ಚಾಲ್ತಿಯಲ್ಲಿದೆ. ‘ಹಾಸ್ಟೆಲ್ ಬಾಯ್ಸ್’ ಹೆಸರಿನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗುತ್ತಿದೆ. ರಮ್ಯಾ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಬದಲಾಯಿಸಲಾಗುತ್ತಿದೆ. ತೆಲುಗು ಆಂಕರ್ ರಶ್ಮಿ ಗೌತಮ್ ಆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯ ‘ಜಬರ್ದಸ್ತ್’ ಕಾಮಿಡಿ ಶೋ ನಿರೂಪಕಿಯಾಗಿ ರಶ್ಮಿ ಗುರುತಿಸಿಕೊಂಡಿದ್ದಾರೆ. ಇದೀಗ ‘ಬಾಯ್ಸ್ ಹಾಸ್ಟೆಲ್’ ಚಿತ್ರದಲ್ಲಿ ರಶ್ಮಿ ಲೆಕ್ಚರರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Hostel Hudugaru Bekagiddare: ಕನ್ನಡದಲ್ಲಿ ಗೆದ್ದ ಹಾಸ್ಟೆಲ್‌ ಹುಡುಗ್ರು ಟಾಲಿವುಡ್‌ಗೆ ಎಂಟ್ರಿ!

ಆಗಸ್ಟ್ 26ರಂದು ಬಿಡುಗಡೆ

ಚಾಯ್ ಬಿಸ್ಕೆಟ್ ಫಿಲ್ಮ್ಸ್ ಮತ್ತು ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ ’ಬಾಯ್ಸ್ ಹಾಸ್ಟೆಲ್’ ಶೀರ್ಷಿಕೆಯಲ್ಲಿ ಈ ಚಿತ್ರವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡುತ್ತಿವೆ. ಕನ್ನಡದಲ್ಲಿ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಪಿಕ್ಚರ್ಸ್ ಬ್ಯಾನರ್‌ನಡಿ ಪ್ರೆಸೆಂಟ್ ಮಾಡಿದ್ದಾರೆ.

ಈಗಾಗಲೇ ಸಿನಿಮಾ ಕಲೆಕ್ಷನ್ 15 ಕೋಟಿ ರೂ. ದಾಟಿದೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ಇನ್ನಿತರರು ಸಾಥ್ ಕೊಟ್ಟಿದ್ದಾರೆ. ಗುಲ್ಮೊಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

Exit mobile version