Site icon Vistara News

Hostel Hudugaru Bekagiddare: ಸೋಷಿಯಲ್‌ ಮೀಡಿಯಾದಲ್ಲಿ `ಹಾಸ್ಟೆಲ್‌ ಹುಡುಗರಿ’ಗೆ ಮೆಚ್ಚುಗೆಯ ಸುರಿಮಳೆ!

Hostel Hudugaru Bekagiddare team

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ಎಲ್ಲಾ ಜುಲೈ 21 ರಿಲೀಸ್ ಆಗಿದೆ. ಬಾಯ್ಸ್​ ಹಾಸ್ಟೆಲ್‌ನಲ್ಲಿ ತರಲೆ ಹುಡುಗರು ಅವರನ್ನು ನಿಯಂತ್ರಿಸಲು ಓರ್ವ ವಾರ್ಡನ್​. ಹುಡುಗರು ಮತ್ತು ವಾರ್ಡನ್​ ನಡುವಿನ ಕಿತ್ತಾಟವೇ ಈ ಚಿತ್ರದ ಕಥಾಹಂದರ. ಇಲ್ಲಿದೆ ಸಿನಿಮಾದ ಟ್ವಿಟರ್‌ ವಿಮರ್ಶೆ!

ʻʻನಾನು ಯಾವತ್ತೂ ಇಂತಹ ಸಿನಿಮಾ ನೋಡಿಲ್ಲ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ.
ನಿಜವಾಗಿಯೂ ಅಸಾಧಾರಣ. ನಟನೆ ಮಾಡಿರುವ ಹುಡುಗರ ಅದ್ಭುತ ಪ್ರದರ್ಶನ. ಪೂರ್ಣ ಮನರಂಜನೆʼʼಎಂದು ಒಬ್ಬರು ಬರೆದುಕೊಂಡಿದ್ದಾರೆ.

ಎಲ್ಲೆಲ್ಲೂ ತುಂಬ ಪಾಸಿಟಿವ್ ರಿವ್ಯೂ. ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ನೋಡಿ ನೋಡಿ ಸಾಕಾಗಿತ್ತು ಕೊನೆಗೂ ಕೆಲವು ಸಿನಿಮಾ ಬ್ರೇಕ್ ಮಾಡ್ತಿದೆ. ಅದುವೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Hostel Hudugaru Bekagiddare: ರಾಜ್ಯಾದ್ಯಂತ ಸಿನಿಮಾ ಗ್ರ್ಯಾಂಡ್ ಓಪನಿಂಗ್; ಎಲ್ಲೆಲ್ಲೂ ಹಾಸ್ಟೆಲ್ ಹುಡುಗರ ಸದ್ದು

ಬಹುತೇಕ ಹೊಸ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ. ರಮ್ಯಾ, ರಿಷಬ್ ಶೆಟ್ಟಿ ಮೊದಲಾದವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನವಿದೆ.

ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜತೆಗೆ ಸೇರಿ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸಿದೆ.

Exit mobile version